ಯುಪಿಯಲ್ಲಿ ಬಿಜೆಪಿ ವಿರುದ್ಧ ‘ಖಡೇದಾ ಹೋಯ್ಬೆ’ ಜಾನಪದ ಹಾಡನ್ನು ಅಸ್ತ್ರವಾಗಿ ಬಳಸುತ್ತಿರುವ ಸಮಾಜವಾದಿ ನೇತೃತ್ವದ ಮೈತ್ರಿಕೂಟ
ಉತ್ತರ ಪ್ರದೇಶದ ಪೂರ್ವಾಂಚಲ ಪ್ರಾಂತ್ಯದ ಸ್ಥಳೀಯ ಭಾಷೆಯಲ್ಲಿರುವ ಸದರಿ ಹಾಡು ಬಿಜೆಪಿ ವಿರುದ್ಧ ಹೋರಾಡುತ್ತಿರುವ ಪ್ರತಿಪಕ್ಷಗಳ ಎಲ್ಲ ಸಭೆಗಳಲ್ಲಿ ಹಾಡನ್ನು ಬಳಸಲಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅದು ವೈರಲ್ ಆಗುತ್ತಿದೆ. ‘ಉತ್ತರ ಪ್ರದೇಶದ ಜನ ಖುದ್ದು ಬಿಜೆಪಿಯನ್ನು ಓಡಿಸಲಾಗುವುದು ಎಂದು ಹೇಳುತ್ತಿದ್ದಾರೆ. ನಿಜ ಹೇಳಬೇಕೆಂದರೆ, ರಾಜ್ಯದ ಕೆಲಭಾಗಗಳಲ್ಲಿ ಬಿಜೆಪಿ ಜನರನ್ನು ಅಕ್ಷರಶಃ ಓಡಿಸುತ್ತಿದ್ದಾರೆ,’ ಎಂದು ಸಮಾಜವಾದಿ ಪಕ್ಷದ ವಿಧಾನ ಪರಿಷತ್ ಸದಸ್ಯ ಅಶುತೋಷ್ ಸಿನ್ಹಾ ಹೇಳಿದರು.
ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣಾ ಪ್ರಚಾರದಲ್ಲಿ (Assembly poll campaign) ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ (Akhilesh Yadav) ‘ಖೇಲಾ ಹೋಬೆ’ (ಹೋರಾಟ ಶುರುವಾಗಿದೆ) ಹಾಡನ್ನು ಬಹಳ ಪರಿಣಾಮಕಾರಿಯಾಗಿ ಉಪಯೋಗಿಸಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ್ದರು. ಸಮಾಜವಾದಿ ಪಕ್ಷದ (Samajvadi Party) ಅಧ್ಯಕ್ಷ ಅಖಿಲೇಶ್ ಯಾದವ್ ನೇತೃತ್ವದ ಮೈತ್ರಿಕೂಟವು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅದೇ ತಂತ್ರವನ್ನು ಪ್ರಯೋಗಿಸಿ ‘ಖಡೇದಾ ಹೋಯ್ಬೆ’ (ತೊಲಗಿಸಲಾಗುವುದು) ಎಂಬ ಹಾಡನ್ನು ಪ್ರಚಾರ ಕಾರ್ಯದಲ್ಲಿ ಬಳಸುತ್ತಿದೆ. ಉತ್ತರ ಪ್ರದೇಶದ ಪೂರ್ವಾಂಚಲ ಪ್ರಾಂತ್ಯದ ಸ್ಥಳೀಯ ಭಾಷೆಯಲ್ಲಿರುವ ಸದರಿ ಹಾಡು ಬಿಜೆಪಿ ವಿರುದ್ಧ ಹೋರಾಡುತ್ತಿರುವ ಪ್ರತಿಪಕ್ಷಗಳ ಎಲ್ಲ ಸಭೆಗಳಲ್ಲಿ ಹಾಡನ್ನು ಬಳಸಲಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅದು ವೈರಲ್ ಆಗುತ್ತಿದೆ. ‘ಉತ್ತರ ಪ್ರದೇಶದ ಜನ ಖುದ್ದು ಬಿಜೆಪಿಯನ್ನು ಓಡಿಸಲಾಗುವುದು ಎಂದು ಹೇಳುತ್ತಿದ್ದಾರೆ. ನಿಜ ಹೇಳಬೇಕೆಂದರೆ, ರಾಜ್ಯದ ಕೆಲಭಾಗಗಳಲ್ಲಿ ಬಿಜೆಪಿ ಜನರನ್ನು ಅಕ್ಷರಶಃ ಓಡಿಸುತ್ತಿದ್ದಾರೆ,’ ಎಂದು ಸಮಾಜವಾದಿ ಪಕ್ಷದ ವಿಧಾನ ಪರಿಷತ್ ಸದಸ್ಯ ಅಶುತೋಷ್ ಸಿನ್ಹಾ ಹೇಳಿದರು.
‘ಖಡೇದಾ ಹೋಯ್ಬೆ’ ಸಮಾಜದ ವಿವಿಧ ಸ್ತರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬೇರೆ ಬೇರೆ ಸಮುದಾಯದ ಜನರನ್ನು ಒಗ್ಗಟ್ಟಾಗಿಸಲು ರಚಿಸಿರುವ ಮತ್ತು ಹೋರಾಟಕ್ಕೆ ಉತ್ತೇಜಿಸುವ ಗೀತೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಳಸಿದ ತಂತ್ರ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲೂ ಪ್ರತಿಧ್ವನಿಸುತ್ತಿದೆ ಎಂದು ಹೇಳಲಾಗುತ್ತಿದೆ,’ ಎಂದು ಸಿನ್ಹಾ ಹೇಳಿದರು.
ತನ್ನ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಿದ ಮಮತಾ ಬ್ಯಾನರ್ಜಿ ಅವರು ಉತ್ತರ ಪ್ರದೇಶದಲ್ಲಿ ಸಮಜವಾದಿ ಪಕ್ಷದ ಪರ ಬ್ಯಾಟ್ ಮಾಡುತ್ತಿದ್ದಾರೆ. ‘ಖೇಲಾ ಹೋಬೆ’ ಹಾಡಿನ ರಚನೆಕಾರ ಮತ್ತು ಗಾಯಕ ದೇಬಾಂಶು ಭಟ್ಟಾಚಾರ್ಯ ಅವರನ್ನು ಚುನಾವಣಾ ಪ್ರಚಾರ ಕಾರ್ಯದಲ್ಲಿ ಸ್ಥಾನಿಕ ಭಾಷೆಯ ಜಾನಪದ ಶೈಲಿಯ ಹಾಡುಗಳನ್ನು ಬಳಸಿದರೆ ಅವು ಪರಿಣಾಮಕಾರಿ ಅನಿಸುತ್ತವೆಯೇ ಅಂತ ಕೇಳಿದಾಗ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿರುವ ರಾಜಕೀಯ ಸ್ಥಿತಿಗತಿಗಳು ಮತ್ತು ಬಿಜೆಪಿ ವಿರುದ್ಧ ನಡೆದ ಮತ್ತು ನಡೆಯುತ್ತಿರುವ ಹೋರಾಟದ ಸ್ವರೂಪಗಳು ಭಿನ್ನವಾಗಿವೆ ಎಂದರು.
‘ಪಶ್ಚಿಮ ಬಂಗಾಳದಲ್ಲಿ ಅಧಿಕಾರರೂಢ ಪಕ್ಷಕ್ಕೆ ಪುನಃ ಅಧಿಕಾರಕ್ಕೆ ಬರಲು ಹೋರಾಟ ನಡೆಸುವ ಅವಶ್ಯಕತೆಯಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಅಲ್ಲಿಂದ ಸರಿಸಬೇಕಾಗಿದೆ,’ ಎಂದು ದೇಬಾಂಶು ಭಟ್ಟಾಚಾರ್ಯ ಹೇಳಿದರು.
ಬಿಜೆಪಿ ತನ್ನೆಲ್ಲ ರಾಜಕೀಯ ಉದ್ದೇಶಗಳಿಗೆ ಪ್ರಯೋಗಿಸಲಾರಂಭಿಸಿರುವ ‘ಜೈ ಶ್ರೀ ರಾಮ್’ ಘೋಷಣೆಯನ್ನು ಎದುರಿಸಲು ಪಶ್ಚಿಮ ಬಂಗಾಳದಲ್ಲಿ ಅದರ ಪ್ರತಿಸ್ಪರ್ಧಿಗಳಿಗೆ ಯಾವ ಉಕ್ತಿಯೂ ಇರಲಿಲ್ಲ. ಯಾರಾದರೂ ಅದನ್ನು ವಿರೋಧಿಸಿದರೆ, ದೇವರ ನಾಮ ಅವರಿಗೆ ಇಷ್ಟವಿಲ್ಲ, ಎಂದು ಬಿಜೆಪಿಯವರು ಜನರಿಗೆ ಹೇಳುತ್ತಾರೆ ಮತ್ತು ಮತಗಳ ಧೃವೀಕರಣಕ್ಕೆ ಅದು ಅವರಿಗೆ ನೆರವಾಗುತ್ತಿತ್ತು ಎಂದು ಭಟ್ಟಾಚಾರ್ಯ ಹೇಳಿದರು.
‘ಖೇಲಾ ಹೋಬೆ’ ಗೀತೆಯನ್ನು ರಚಿಸಿದ ನಂತರ ಬಿಜೆಪಿ ಕಾರ್ಯಕರ್ತರು ಜೈ ಶ್ರೀ ರಾಮ್’ ಘೋಷಣೆ ಕೂಗಿದರೆ ಟಿ ಎಮ್ ಸಿ ಕಾರ್ಯಕರ್ತರು ‘ಖೇಲಾ ಹೋಬೆ’ ಎಂದು ಪ್ರತ್ಯುತ್ತರಿಸುತ್ತಿದ್ದರು. ಜನ ‘ಖೇಲಾ ಹೋಬೆ’ ಹಾಡಿನಲ್ಲಿ ಹೆಚ್ಚು ಆಸಕ್ತಿ ತೋರಲಾರಂಭಿಸಿದರು,’ ಎಂದು ಅವರು ಹೇಳಿದರು.
ಧರ್ಮದ ಆಧಾರದ ಮೇಲೆ ಧೃವೀಕರಣದ ತಂತ್ರಗಳನ್ನು ಬಳಸುವ ಬಿಜೆಪಿಯನ್ನು ಉತ್ತರ ಪ್ರದೇಶದ ಚುನಾವಣೆಯಲ್ಲಿ ಎದುರಿಸಲು ‘ಖಡೇಲಾ ಹೋಯ್ಬೆ’ ಹಾಡಿನ ರಿಂಗುಣುವಿಕೆ ನಿಸ್ಸಂದೇಹವಾಗಿ ನೆರವಾಗಬಲ್ಲುದು, ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಭಟ್ಟಾಚಾರ್ಯ ಹೇಳಿದರು.