AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ಸಾವಿರ ರೂ. ಸಾಲದ ವಿಚಾರಕ್ಕೆ ಸಹೋದ್ಯೋಗಿಯ ಹತ್ಯೆ: ತಲೆ ಕಡಿದು ಸ್ಮಶಾನದೊಳಗೆ ಎಸೆದ ಆರೋಪಿ

ಸೂರತ್‌ನಲ್ಲಿ 30,000 ರೂ. ಸಾಲದ ವಿಚಾರಕ್ಕೆ ಸಹೋದ್ಯೋಗಿಯ ಭೀಕರ ಕೊಲೆ ನಡೆದಿದೆ. ಆರೋಪಿ ಸಚಿತ್ರ ಬಾಲ್, ಮೃತ ಸಂಜಯ್ ಖೋಸ್ಲಾ ಅವರ ತಲೆ ಕತ್ತರಿಸಿ, ದೇಹವನ್ನು ಸ್ಮಶಾನದಲ್ಲಿ ಮತ್ತು ತಲೆಯನ್ನು ಬೇರೆ ಸ್ಥಳದಲ್ಲಿ ಎಸೆದಿದ್ದಾನೆ. ಹಣಕಾಸಿನ ವಿವಾದವೇ ಕೊಲೆಗೆ ಕಾರಣ. ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ. ಈ ಅಮಾನುಷ ಕೃತ್ಯ ಸೂರತ್‌ನಲ್ಲಿ ಆಘಾತ ಮೂಡಿಸಿದೆ.

30 ಸಾವಿರ ರೂ. ಸಾಲದ ವಿಚಾರಕ್ಕೆ ಸಹೋದ್ಯೋಗಿಯ ಹತ್ಯೆ: ತಲೆ ಕಡಿದು ಸ್ಮಶಾನದೊಳಗೆ ಎಸೆದ ಆರೋಪಿ
ಸೂರತ್ ಕೊಲೆ Image Credit source: NDTV
ನಯನಾ ರಾಜೀವ್
|

Updated on: Nov 05, 2026 | 12:38 PM

Share

ಸೂರತ್, ನವೆಂಬರ್ 05: ಪಡೆದಿರುವ 30 ಸಾವಿರ ರೂ. ಸಾಲ ವಾಪಸ್ ಕೊಡಲಿಲ್ಲವೆಂದು ವ್ಯಕ್ತಿಯೊಬ್ಬ ಸಹೋದ್ಯೋಗಿಯ ತಲೆ ಕತ್ತರಿಸಿರುವ ಘಟನೆ ಸೂರತ್​ನಲ್ಲಿ ನಡೆದಿದೆ. ಸಾಲದ ಹಣವನ್ನು ವಾಪಸ್ ನೀಡದಿದ್ದಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕೋಪದಲ್ಲಿ ಆರೋಪಿ ಭೀಕರ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಸ್ಮಶಾನದಲ್ಲಿ ಎಸೆದು, ತಲೆಯನ್ನು ಬೇರೆ ಸ್ಥಳದಲ್ಲಿ ಬಿಸಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇವಲ 30 ಸಾವಿರ ರೂಪಾಯಿ ಹಣದ ವಿವಾದಕ್ಕೆ ಒಡಿಶಾ ಮೂಲದ ವ್ಯಕ್ತಿಯೊಬ್ಬ ತನ್ನ ಸಹೋದ್ಯೋಗಿಯನ್ನು ಹತ್ಯೆ ಮಾಡಿ, ಮೃತದೇಹ ಮತ್ತು ತಲೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 54 ವರ್ಷದ ಸಚಿತ್ರ ಕುಮಾರ್ ನರೇಂದ್ರ ಬಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಸಂಜಯ್ ಖೋಸ್ಲಾ ಎಂದು ಗುರುತಿಸಲಾಗಿದೆ.

ಏಳು ತಿಂಗಳ ಹಣಕಾಸಿನ ವಿವಾದ ಆರೋಪಿ ಬಾಲ್ ಮತ್ತು ಸಂಜಯ್ ಇಬ್ಬರೂ ಸೂರತ್‌ನ ಕತಾರ್ಗಾಮ್ ಪ್ರದೇಶದ ಪವರ್‌ಲೂಮ್ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಒಡಿಶಾ ಮೂಲದವರು. ಕಳೆದ ಕೆಲವು ತಿಂಗಳಿಂದ ಅವರ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪವಿತ್ತು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಂಜಯ್ ಕಾರ್ಖಾನೆಯ ಕಾರ್ಮಿಕರ ಕೆಲಸದ ಸಮಯದ ದಾಖಲೆಗಳನ್ನು ನಿರ್ವಹಿಸುತ್ತಿದ್ದರು.

ಇದರಿಂದ ತನ್ನ ವೇತನದಲ್ಲಿ ಪ್ರತಿದಿನ ಸುಮಾರು 160 ರೂಪಾಯಿ ಕಡಿತವಾಗುತ್ತಿದೆ ಎಂದು ಬಾಲ್ ಅನುಮಾನಿಸಿದ್ದರು. ಏಳು ತಿಂಗಳಲ್ಲಿ ಸುಮಾರು 30 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅವರು ಭಾವಿಸಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ನವೆಂಬರ್ 1ರಂದು ನಡೆದ ಘಟನೆ ಪೊಲೀಸರ ಪ್ರಕಾರ, ನವೆಂಬರ್ 1ರಂದು ನರೇಂದ್ರ ಯಾವುದೋ ನೆಪದಲ್ಲಿ ಸಂಜಯ್ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಇಬ್ಬರ ನಡುವೆ ಮತ್ತೆ ಜಗಳ ನಡೆದಿದ್ದು, ಆರೋಪಿ ಹರಿತವಾದ ಆಯುಧದಿಂದ ಸಂಜಯ್ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ನಂತರ ಮೃತದೇಹವನ್ನು ಚೀಲದಲ್ಲಿ ತುಂಬಿ, ರಾತ್ರಿ ವೇಳೆ ತನ್ನ ಮನೆಯ ಸಮೀಪವಿರುವ ಸಿಎನ್‌ಐ ಕ್ರೈಸ್ತ ಸ್ಮಶಾನದ ಗೋಡೆಯ ಮೂಲಕ ಒಳಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದು ಬಳೆಯಿಂದ ಜೋಗತಿ ಕೊಲೆ ಕೇಸ್ ರಹಸ್ಯ ಭೇದಿಸಿದ ಪೊಲೀಸರು: ಸ್ಫೋಟಕ ಹೇಳಿಕೆ ನೀಡಿದ ಪ್ರಿಯಕರ

ನವೆಂಬರ್ 3ರಂದು ಸ್ಮಶಾನದಲ್ಲಿ ಪತ್ತೆಯಾದ ಮೃತದೇಹ ನವೆಂಬರ್ 3ರಂದು ಗೋಟ್ಲಾವಾಡಿ ಛೇದಕದ ಸಮೀಪದ ಸ್ಮಶಾನದಲ್ಲಿ ತಲೆಯಿಲ್ಲದ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ವಿಧಿವಿಜ್ಞಾನ ತಜ್ಞರು ಮತ್ತು ಶ್ವಾನದಳ ಪರಿಶೀಲನೆ ನಡೆಸಿದರು. ಮೃತದೇಹದ ಗುರುತು ಪತ್ತೆಹಚ್ಚುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನಿಖೆ ಆರಂಭಿಸಿದರು.

ಮೂರು ಕಿಲೋಮೀಟರ್ ದೂರದಲ್ಲಿ ತಲೆ ಪತ್ತೆ ತನಿಖೆಯ ವೇಳೆ ಪೊಲೀಸರಿಗೆ ಬಾಲ್ ಮೇಲೆ ಅನುಮಾನ ಮೂಡಿದೆ. ವಿಚಾರಣೆ ನಡೆಸಿದಾಗ ಆತ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆರೋಪಿಯ ಮಾಹಿತಿ ಆಧರಿಸಿ, ಅಲ್ಕಾಪುರಿ ರೈಲ್ವೆ ಸೇತುವೆಯ ಕೆಳಗೆ ರೈಲ್ವೆ ಹಳಿಗಳ ಸಮೀಪ ಕತ್ತರಿಸಿದ ತಲೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಮಶಾನದಿಂದ ಈ ಸ್ಥಳ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಮೃತದೇಹ ಮತ್ತು ತಲೆಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗುರುತು ಮತ್ತು ಇತರ ಸಾಕ್ಷ್ಯಗಳನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ.

ಪೊಲೀಸರಿಂದ ಮುಂದುವರಿದ ತನಿಖೆ ಕತಾರ್ಗಾಮ್ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣಕಾಸಿನ ವಿವಾದದ ನಿಖರ ಹಿನ್ನೆಲೆ, ಘಟನೆ ನಡೆದ ಸಂದರ್ಭ ಮತ್ತು ಸಾಕ್ಷ್ಯಗಳನ್ನು ಮರೆಮಾಚಲು ಆರೋಪಿ ಕೈಗೊಂಡ ಕ್ರಮಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More