ಫಲಿಸದ ಇಸ್ರೋ ವಿಜ್ಞಾನಿಗಳ ಪ್ರಯತ್ನ; ಚಂದ್ರಯಾನ 2 ಯೋಜನೆ ವಿಫಲ?

ಭಾರತದ ಬಹುನಿರೀಕ್ಷಿತ ಚಂದ್ರಯಾನ 2 ಯೋಜನೆ ವಿಫಲವಾಗಿದೆ. ಕಳೆದ 14 ದಿನಗಳಿಂದಲೂ ಇಸ್ರೋ ವಿಜ್ಞಾನಿಗಳು ನಿರಂತರವಾಗಿ ವಿಕ್ರಮ್ ಲ್ಯಾಂಡರ್​ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ರು,  ಕೊನೆ ಕ್ಷಣದವರೆಗೂ ಲ್ಯಾಂಡರ್​ ಸಂಪರ್ಕಕ್ಕೆ ಸಿಗಲಿಲ್ಲ. ಅಲ್ಲದೆ ವಿಕ್ರಮ್ ಆಯುಷ್ಯ ಇಂದಿಗೆ ಅಂತ್ಯ ಹಿನ್ನೆಲೆಯಲ್ಲಿ ಲ್ಯಾಂಡರ್​ ಸಂಪರ್ಕದ ಆಸೆಯನ್ನು ಇಸ್ರೋ ವಿಜ್ಞಾನಿಗಳು ಕೈಬಿಟ್ಟಿದ್ದಾರೆ. ಸೆ.17ರಂದು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಲೂನಾರ್, ವಿಕ್ರಮ್ ಲ್ಯಾಂಡರ್​ ಚಂದ್ರನ ಮೇಲ್ಮೈನಲ್ಲಿ ಇಳಿಯಬೇಕಿದ್ದ ಸ್ಥಳದ ಚಿತ್ರಗಳನ್ನು ಸೆರೆಹಿಡಿದಿದೆ. ನಾಸಾದ ಲೂನಾರ್ ರಿಕನೈಸನ್ಸ್​ ಆರ್ಬಿಟರ್​(ಎಲ್​ಆರ್​ಒ) ಚಿತ್ರಗಳನ್ನ ಸದ್ಯದಲ್ಲೇ ಹಂಚಿಕೊಳ್ಳಲಿದೆ. ಆದ್ರೆ […]

ಫಲಿಸದ ಇಸ್ರೋ ವಿಜ್ಞಾನಿಗಳ ಪ್ರಯತ್ನ; ಚಂದ್ರಯಾನ 2 ಯೋಜನೆ ವಿಫಲ?
Follow us
ಸಾಧು ಶ್ರೀನಾಥ್​
|

Updated on: Sep 20, 2019 | 10:52 AM

ಭಾರತದ ಬಹುನಿರೀಕ್ಷಿತ ಚಂದ್ರಯಾನ 2 ಯೋಜನೆ ವಿಫಲವಾಗಿದೆ. ಕಳೆದ 14 ದಿನಗಳಿಂದಲೂ ಇಸ್ರೋ ವಿಜ್ಞಾನಿಗಳು ನಿರಂತರವಾಗಿ ವಿಕ್ರಮ್ ಲ್ಯಾಂಡರ್​ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ರು,  ಕೊನೆ ಕ್ಷಣದವರೆಗೂ ಲ್ಯಾಂಡರ್​ ಸಂಪರ್ಕಕ್ಕೆ ಸಿಗಲಿಲ್ಲ. ಅಲ್ಲದೆ ವಿಕ್ರಮ್ ಆಯುಷ್ಯ ಇಂದಿಗೆ ಅಂತ್ಯ ಹಿನ್ನೆಲೆಯಲ್ಲಿ ಲ್ಯಾಂಡರ್​ ಸಂಪರ್ಕದ ಆಸೆಯನ್ನು ಇಸ್ರೋ ವಿಜ್ಞಾನಿಗಳು ಕೈಬಿಟ್ಟಿದ್ದಾರೆ.

ಸೆ.17ರಂದು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಲೂನಾರ್, ವಿಕ್ರಮ್ ಲ್ಯಾಂಡರ್​ ಚಂದ್ರನ ಮೇಲ್ಮೈನಲ್ಲಿ ಇಳಿಯಬೇಕಿದ್ದ ಸ್ಥಳದ ಚಿತ್ರಗಳನ್ನು ಸೆರೆಹಿಡಿದಿದೆ. ನಾಸಾದ ಲೂನಾರ್ ರಿಕನೈಸನ್ಸ್​ ಆರ್ಬಿಟರ್​(ಎಲ್​ಆರ್​ಒ) ಚಿತ್ರಗಳನ್ನ ಸದ್ಯದಲ್ಲೇ ಹಂಚಿಕೊಳ್ಳಲಿದೆ. ಆದ್ರೆ ಕೆಲವು ವರದಿಗಳ ಪ್ರಕಾರ ವಿಕ್ರಮ್ ಲ್ಯಾಂಡರ್​ ಇರುವಿಕೆ ಬಗ್ಗೆ ನಾಸಾ ಖಚಿತಪಡಿಸಿಲ್ಲ ಎನ್ನಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಾಸಾದ ಲೂನಾರ್ ಪ್ರದಕ್ಷಿಣೆ ವೇಳೆ ಅಲ್ಲಿ ಮುಸ್ಸಂಜೆಯಾಗಿತ್ತು. ಬೆಳಕಿನ ಪ್ರಮಾಣ ಕಡಿಮೆಯಾಗಿ ರಾತ್ರಿಗೆ ಹೊರಳುವ ಹೊತ್ತಿನಲ್ಲಿ ಚಿತ್ರಗಳನ್ನು ಎಲ್​ಆರ್​ಒ ಸೆರೆಹಿಡಿದಿತ್ತು.

ಜುಲೈ22ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 2 ನಭಕ್ಕೆ ಜಿಗಿದಿತ್ತು. ಸುಮಾರು 47 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಚಂದ್ರನ ಕಡೆ ಹೊರಟಿದ್ದ ವಿಕ್ರಮ್, ಸೆಪ್ಟಂಬರ್ 7ರಂದು ಚಂದ್ರನ ಮೇಲೆ​ ಇಳಿಯಬೇಕಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್​ ವಿಜ್ಞಾನಿಗಳ ಸಂಪರ್ಕಕ್ಕೆ ಸಿಗಲಿಲ್ಲ. ಅಂದಿನಿಂದ 14 ದಿನಗಳ ಕಾಲ ವಿಕ್ರಮ್ ಸಂಪರ್ಕಕ್ಕೆ ಯತ್ನಿಸಿದ ವಿಜ್ಞಾನಿಗಳ ಶ್ರಮ ವಿಫಲವಾಗಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್