AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ: ಜಾಮ್‌ನಗರದಲ್ಲಿ ಮಹತ್ವದ ಸಭೆಗಳು, ಇಂಧನ ಒಪ್ಪಂದಕ್ಕೆ ಒತ್ತು

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅಕ್ಟೋಬರ್ 17-22 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮುಂಬೈ ಮತ್ತು ಜಾಮ್‌ನಗರದಲ್ಲಿ ನಡೆಯುವ ಈ ಭೇಟಿಯು ಅಮೆರಿಕ-ಭಾರತದ ಕಾರ್ಯತಂತ್ರದ ಪಾಲುದಾರಿಕೆ, ವ್ಯಾಪಾರ, ಇಂಧನ ಸಹಕಾರ ಮತ್ತು ಹೂಡಿಕೆಯನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಜಾಗತಿಕ ರಾಜತಾಂತ್ರಿಕ ಮತ್ತು ಪ್ರಾದೇಶಿಕ ಭದ್ರತೆಯ ಕುರಿತು ಚರ್ಚೆ ನಡೆಯಲಿದ್ದು, ಮಧ್ಯ ಏಷ್ಯಾ ನಾಯಕರೊಂದಿಗೆ ಸಭೆ ಸಹ ಇರಲಿದೆ.

ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ: ಜಾಮ್‌ನಗರದಲ್ಲಿ ಮಹತ್ವದ ಸಭೆಗಳು, ಇಂಧನ ಒಪ್ಪಂದಕ್ಕೆ ಒತ್ತು
ಮಾರ್ಕೊ ರೂಬಿಯೊ-ಜೈಶಂಕರ್Image Credit source: PTI
ನಯನಾ ರಾಜೀವ್
|

Updated on: Oct 14, 2026 | 10:20 AM

Share

ನವದೆಹಲಿ, ಅಕ್ಟೋಬರ್ 14: ಅಮೆರಿಕ ಮತ್ತು ಭಾರತ ನಡುವಿನ ಕಾರ್ಯತಂತ್ರದ ಪಾಲುದಾರಿಕೆ, ಜಾಗತಿಕ ರಾಜತಾಂತ್ರಿಕ ಸಮೀಕರಣಗಳು ಹಾಗೂ ಇಂಧನ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಅಕ್ಟೋಬರ್ 17 ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದು, 22 ರವರೆಗೆ ಇರಲಿದ್ದಾರೆ. ತಮ್ಮ ಈ ಪ್ರವಾಸದಲ್ಲಿ ಅವರು ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಗುಜರಾತ್‌ನ ಕೈಗಾರಿಕಾ ಕೇಂದ್ರ ಜಾಮ್‌ನಗರಕ್ಕೆ ತೆರಳಿ ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಮುಖ ಉದ್ಯಮ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಮೇ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ, ರೂಬಿಯೊ ಅವರ ಎರಡನೇ ಪ್ರಮುಖ ಭಾರತ ಭೇಟಿ ಇದಾಗಿದೆ. ವಾಷಿಂಗ್ಟನ್‌ನ ಅಧಿಕೃತ ಪ್ರಕಟಣೆಯಂತೆ, ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಮೈತ್ರಿ, ಇಂಡೋ-ಪೆಸಿಫಿಕ್ ವಲಯದ ಪ್ರಾದೇಶಿಕ ಭದ್ರತೆ ಹಾಗೂ ಪ್ರಸ್ತುತ ಜಾಗತಿಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.

ವಾಣಿಜ್ಯ ಹೂಡಿಕೆ ವಿಸ್ತರಣೆ: ಭಾರತ ಮತ್ತು ಅಮೆರಿಕದ ನಡುವಿನ ಆರ್ಥಿಕ ಬಾಂಧವ್ಯವನ್ನು ವಿಸ್ತರಿಸಲು ಹಾಗೂ ಉಭಯ ದೇಶಗಳಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಭಾರತೀಯ ಉದ್ಯಮ ದಿಗ್ಗಜರನ್ನು ರೂಬಿಯೊ ಭೇಟಿಯಾಗಲಿದ್ದಾರೆ.

ಇಂಧನ ಪಾಲುದಾರಿಕೆ: ಜಾಗತಿಕ ಕಚ್ಚಾ ತೈಲ ಪೂರೈಕೆ, ಪೆಟ್ರೋಕೆಮಿಕಲ್ ಸಹಕಾರ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳನ್ನು ರೂಪಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.

ಮಧ್ಯ ಏಷ್ಯಾ ನಾಯಕರ ಭೇಟಿ: ಉಜ್ಬೇಕಿಸ್ತಾನ್, ಕಝಾಕಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಕಿರ್ಗಿಜ್ ಗಣರಾಜ್ಯದ ಸಚಿವರೊಂದಿಗೆ ಅವರು ಸಮಾಲೋಚನೆ ನಡೆಸಲಿದ್ದಾರೆ. ಅಮೆರಿಕ ಮತ್ತು ಮಧ್ಯ ಏಷ್ಯಾದ ನಡುವೆ ವಾಣಿಜ್ಯ ಪಾಲುದಾರಿಕೆಯನ್ನು ವಿಸ್ತರಿಸಲು 200ಕ್ಕೂ ಹೆಚ್ಚು ಅಮೆರಿಕನ್ ಉದ್ಯಮಿಗಳ ಬೃಹತ್ ವಾಣಿಜ್ಯ ನಿಯೋಗವೂ ರೂಬಿಯೊ ಜೊತೆಗಿರಲಿದೆ.

ಮತ್ತಷ್ಟು ಓದಿ: ಅಮೆರಿಕದ ಪರ್ಮ್ ನಿರ್ಬಂಧಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ; ಈ ಕ್ರಮದಿಂದ ಎರಡೂ ದೇಶಕ್ಕೆ ಒಳಿತಲ್ಲ- ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೆ

ತೈಲ ಮಾರುಕಟ್ಟೆ ಸ್ಥಿರತೆ: ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾದ ವಿಮಾನ ನಿಲ್ದಾಣ ಮತ್ತು ತೈಲ ನೆಲೆಗಳ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ, ಜಾಗತಿಕ ಇಂಧನ ಪೂರೈಕೆ ಸರಪಳಿಯನ್ನು ಸುರಕ್ಷಿತವಾಗಿರಿಸಲು ಅಮೆರಿಕವು ಭಾರತದಂತಹ ಪ್ರಮುಖ ಸಂಸ್ಕರಣಾ ಪಾಲುದಾರರೊಂದಿಗೆ ನಿಕಟ ಸಹಕಾರವನ್ನು ಬಯಸುತ್ತಿದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇತ್ತೀಚೆಗಷ್ಟೇ ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳು ಅಂತಿಮ ಘಟ್ಟವನ್ನು ಸಮೀಪಿಸುತ್ತಿವೆ ಎಂದು ತಿಳಿಸಿದ್ದು, ರೂಬಿಯೊ ಅವರ ಈ ಭೇಟಿಯು ಮುಂಬರುವ ಒಪ್ಪಂದಗಳಿಗೆ ಮಹತ್ವದ ವೇದಿಕೆಯಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ