ಮಹಿಳಾ ಮೀಸಲಾತಿ: 2024ರ ಚುನಾವಣೆಗೆ ಮತ್ತೊಮ್ಮೆ ಮಹಿಳಾ ಮತದಾರರ ಮತಗಳ ಮೇಲೆ ಮೋದಿ ಕಣ್ಣು

Women's reservation bill: ಕಳೆದ ಒಂಬತ್ತು ವರ್ಷಗಳ ಮೋದಿ ಸರ್ಕಾರದ ಅಧಿಕಾರಾವಧಿಯಲ್ಲಿ ಬಿಜೆಪಿ ತನ್ನ ಮಹಿಳಾ ಕೇಂದ್ರಿತ ಯೋಜನೆಗಳಿಂದ ಮಹಿಳೆಯರಲ್ಲಿ ಪ್ರಬಲ ಹಿಡಿತ ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈ ಬೆಂಬಲದ ವ್ಯಾಪ್ತಿಯನ್ನು ಹೆಚ್ಚಿಸಲು ಮೋದಿ ಸರ್ಕಾರ ಬಯಸಿದೆ. ವರ್ಷಗಟ್ಟಲೆ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಮೋದಿ ಸರ್ಕಾರ ಮುಂದಾಗಿರುವುದು ಇದೇ ಕಾರಣಕ್ಕೆ

ಮಹಿಳಾ ಮೀಸಲಾತಿ: 2024ರ ಚುನಾವಣೆಗೆ ಮತ್ತೊಮ್ಮೆ ಮಹಿಳಾ ಮತದಾರರ ಮತಗಳ ಮೇಲೆ ಮೋದಿ ಕಣ್ಣು
ಪ್ರಧಾನಿ ಮೋದಿ
Follow us
|

Updated on: Sep 19, 2023 | 4:36 PM

ದೆಹಲಿ ಸೆಪ್ಟೆಂಬರ್ 19: ಭಾರತದ ರಾಜಕೀಯದಲ್ಲಿ ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ ಮೋದಿ ಸರ್ಕಾರ (Modi Govt) ದೊಡ್ಡ ಹೆಜ್ಜೆ ಇಟ್ಟಿದೆ. ಸಂಸತ್ತು ಮತ್ತು ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ಕಳೆದ ಐದು ದಶಕಗಳಿಂದ ಬೇಡಿಕೆ ಇದೆ. ಈ ದಿಸೆಯಲ್ಲಿ ಹೆಚ್.ಡಿ.ದೇವೇಗೌಡರಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿಯವರಿಂದ ಅರ್ಧದಷ್ಟು ಜನಸಂಖ್ಯೆಗೆ ಮೂರನೇ ಒಂದರಷ್ಟು ಪಾಲು ನೀಡಲು ಕ್ರಮಕೈಗೊಂಡರೂ ಗುರಿ ತಲುಪಲು ಸಾಧ್ಯವಾಗದೆ ಸುದೀರ್ಘ ಕಾಯುವಿಕೆಯ ನಂತರ ಇದೀಗ ಮಹಿಳಾ ಮೀಸಲಾತಿ ಮಸೂದೆ (Women’s reservation bill) ಲೋಕಸಭೆಯಲ್ಲಿ (Lok Sabha) ಮಂಡನೆ ಆಗಿದೆ.

ಮಹಿಳೆಯರ ಮತದಾನದ ಮಾದರಿಯಲ್ಲಿ ಬದಲಾವಣೆ

ದೇಶದಲ್ಲಿ ಮಹಿಳೆಯರ ಮತದಾನದ ಮಾದರಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಮಹಿಳೆಯರು ಈಗ ಪುರುಷರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಮತ ಚಲಾಯಿಸುವುದು ಮಾತ್ರವಲ್ಲದೆ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕುತ್ತಿದ್ದಾರೆ. ಮಹಿಳೆಯರ ಮತದಾನದ ಪ್ರಮಾಣವೂ ಹೆಚ್ಚಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಮತದಾನದ ಶೇಕಡಾವಾರು ಶೇಕಡಾ ಒಂದಕ್ಕಿಂತ ಹೆಚ್ಚು. ಕಳೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಶೇಕಡ 67ರಷ್ಟು ಮತದಾನವಾಗಿತ್ತು. ಬಿಜೆಪಿ ಶೇ.35 ಮಹಿಳಾ ಮತಗಳನ್ನು ಹಾಗೂ ಕಾಂಗ್ರೆಸ್ ಶೇ.20 ಮಹಿಳಾ ಮತಗಳನ್ನು ಪಡೆದಿವೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಮಹಿಳೆಯರು ಮತದಾನದ ಹಕ್ಕನ್ನು ಹೊಂದಿದ್ದರು, ಆದರೆ ಈಗ ಅವರು ಈ ಹಕ್ಕನ್ನು ಸಮರ್ಥ ರೀತಿಯಲ್ಲಿ ಬಳಸುತ್ತಿದ್ದಾರೆ. ದೇಶದಲ್ಲಿ ಅಭಿವೃದ್ಧಿ ಮತ್ತು ಚುನಾವಣಾ ಸುಧಾರಣೆಗಳಿಂದಾಗಿ ಮಹಿಳೆಯರ ಮತದಾನದ ಪ್ರಮಾಣ ಹೆಚ್ಚುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮಹಿಳೆಯರನ್ನು ಮತದಾನಕ್ಕೆ ಪ್ರೇರೇಪಿಸಲು ಚುನಾವಣಾ ಆಯೋಗ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಪಿಂಕ್ ಬೂತ್​​ಗಳನ್ನು ನಿರ್ಮಿಸಿ ಜಾಹೀರಾತುಗಳನ್ನು ತೋರಿಸಲಾಗುತ್ತಿದೆ. ಯುವ ಮಹಿಳಾ ಮತದಾರರ ಪಾತ್ರವು ಹೆಚ್ಚು ಮಹತ್ವದ್ದಾಗಿದೆ, ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುವವರಿಗೆ.

ಮತದಾರರನ್ನು ವಿವಿಧ ರೀತಿಯ ಮತ ಬ್ಯಾಂಕ್‌ಗಳಾಗಿ ವಿಂಗಡನೆ

ರಾಜಕೀಯದಲ್ಲಿ ಜಾತಿ, ಧರ್ಮ, ವಯಸ್ಸು ಮತ್ತು ವೃತ್ತಿಯ ಆಧಾರದಲ್ಲಿ ಮತದಾರರು ಹಲವು ಬಗೆಯ ಮತ ಬ್ಯಾಂಕ್​​ಗಳಾಗಿ ವಿಂಗಡಣೆಯಾಗಿದ್ದಾರೆ. ರಾಜಕೀಯ ಪಕ್ಷಗಳೂ ಮಹಿಳೆಯರನ್ನು ವೋಟ್ ಬ್ಯಾಂಕ್ ಆಗಿ ನೋಡುತ್ತಿವೆ. 2019ರ ಲೋಕಸಭೆ ಚುನಾವಣೆಯ ಗೆಲುವಿನ ಶ್ರೇಯವನ್ನು ಪ್ರಧಾನಿ ಮೋದಿ ಸೈಲೆಂಟ್ ಮತದಾರರಿಗೆ ನೀಡಿದ್ದರು. ಈ ಸೈಲೆಂಟ್ ಮತದಾರರು ಬೇರೆ ಯಾರೂ ಅಲ್ಲ, ತಾಯಿ ಮತ್ತು ಸಹೋದರಿಯರು ಅಂದರೆ ಮಹಿಳೆಯರು ಎಂದು ಅವರು ಹೇಳಿದ್ದರು. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಮಹಿಳಾ ಮತಬ್ಯಾಂಕ್ ಬಲಪಡಿಸಲು ನಿಷೇಧ ಕಾನೂನನ್ನು ತಂದರು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಗೆಲುವಿನ ಹಿಂದೆ ಮಹಿಳಾ ಮತದಾರರ ಪಾತ್ರವಿದೆ ಎಂದು ಪರಿಗಣಿಸಲಾಗಿದೆ.

ಕಳೆದ ಒಂಬತ್ತು ವರ್ಷಗಳ ಮೋದಿ ಸರ್ಕಾರದ ಅಧಿಕಾರಾವಧಿಯಲ್ಲಿ ಬಿಜೆಪಿ ತನ್ನ ಮಹಿಳಾ ಕೇಂದ್ರಿತ ಯೋಜನೆಗಳಿಂದ ಮಹಿಳೆಯರಲ್ಲಿ ಪ್ರಬಲ ಹಿಡಿತ ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈ ಬೆಂಬಲದ ವ್ಯಾಪ್ತಿಯನ್ನು ಹೆಚ್ಚಿಸಲು ಮೋದಿ ಸರ್ಕಾರ ಬಯಸಿದೆ. ವರ್ಷಗಟ್ಟಲೆ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಮೋದಿ ಸರ್ಕಾರ ಮುಂದಾಗಿರುವುದು ಇದೇ ಕಾರಣಕ್ಕೆ. 2024 ರ ಚುನಾವಣೆಗೆ ಸಂಬಂಧಿಸಿದಂತೆ ದೇಶದಲ್ಲಿ ರಾಜಕೀಯ ಬಿಸಿ ಹೆಚ್ಚಿರುವ ಸಮಯದಲ್ಲಿ ಮೋದಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಅನೇಕ ಸರ್ಕಾರಗಳು ವಿಫಲವಾಗಿದ್ದವು

ಇಲ್ಲಿಯವರೆಗೆ ಮೂವರು ಪ್ರಧಾನ ಮಂತ್ರಿಗಳು ಮತ್ತು ಅನೇಕ ಸರ್ಕಾರಗಳು ಮಹಿಳಾ ಮೀಸಲಾತಿ ಮಸೂದೆಯನ್ನು ರೂಪಿಸಲು ವಿಫಲವಾಗಿವೆ. 1996ರಲ್ಲಿ ದೇವೇಗೌಡರ ನ್ಯಾಶನಲ್ ಫ್ರಂಟ್ ಸರ್ಕಾರ ಮಹಿಳಾ ಮೀಸಲಾತಿಗೆ ಕ್ರಮ ಕೈಗೊಂಡರೂ ಹಲವು ಪಕ್ಷಗಳು ವಿರೋಧಿಸಿದ್ದವು. ಮಸೂದೆ ಯಾವುದೇ ತೀರ್ಮಾನಕ್ಕೆ ಬರುವ ಮುನ್ನವೇ ದೇವೇಗೌಡರ ಸರ್ಕಾರ (1996) ಪತನವಾಯಿತು. ಇದಾದ ನಂತರ, ಮಸೂದೆಯಲ್ಲಿ ಎಸ್‌ಸಿ-ಎಸ್‌ಟಿ-ಒಬಿಸಿ ಮೀಸಲಾತಿಯ ಬೇಡಿಕೆ ತೀವ್ರಗೊಂಡಿದ್ದರಿಂದ, ಗುಜ್ರಾಲ್ ಸರ್ಕಾರ ಅದನ್ನು ತಡೆಹಿಡಿಯಿತು.

ಅಟಲ್ ಸರ್ಕಾರ ಮುಂದಾಳತ್ವ ವಹಿಸಿತು

ಅಟಲ್ ಬಿಹಾರ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಮುಂದಾಯಿತು. ಆದರೆ ಘಟಕ ಪಕ್ಷಗಳ ವಿರೋಧದಿಂದಾಗಿ ಅವರು ಕೂಡ ಹಿಂದೆ ಸರಿಯಬೇಕಾಯಿತು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾದ ಯುಪಿಎ ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಹಲವು ಪ್ರಯತ್ನಗಳನ್ನು ಮಾಡಿದರೂ ಕೋಟಾದಲ್ಲಿ ಕೋಟಾ ಬೇಡಿಕೆಯಿಂದಾಗಿ ಅದಕ್ಕೆ ಕಾನೂನು ರೂಪ ನೀಡಲು ಸಾಧ್ಯವಾಗಲಿಲ್ಲ. 2010 ರಲ್ಲಿ, ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು, ಆದರೆ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿರಲಿಲ್ಲ.

ಇದನ್ನೂ ಓದಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ

ಮೋದಿ ಸರ್ಕಾರದಿಂದ ಮಸೂದೆ ಮಂಡನೆ

ಮೋದಿ ಸರ್ಕಾರ ಇದೀಗ ಮಹಿಳಾ ಮೀಸಲಾತಿ ಮಸೂದೆಯನ್ನು ತಂದಿದ್ದು, ಸಂಪುಟದಿಂದ ಅನುಮೋದನೆ ಪಡೆದ ನಂತರ ಸಂಸತ್ತಿನಲ್ಲಿ ಮಂಡಿಸಲಾಗುವುದು. ಈ ವಿಶೇಷ ಅಧಿವೇಶನದಲ್ಲಿಯೇ ಸಂಸತ್ತಿನ ಉಭಯ ಸದನಗಳಲ್ಲಿ ಈ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಲಿದೆ. ಪ್ರಧಾನಿ ಮೋದಿ ಅವರೇ ಈ ಮಸೂದೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ, ಏಕೆಂದರೆ ಕಾಂಗ್ರೆಸ್ ಸಂಪೂರ್ಣ ಬೆಂಬಲದಲ್ಲಿದೆ. ಬಿಆರ್ ಎಸ್ ಕೂಡ ನಮ್ಮೊಂದಿಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಅತ್ಯಂತ ಸುಲಭವಾಗಿ ಅಂಗೀಕರಿಸುತ್ತದೆ. ಮಹಿಳಾ ಮೀಸಲಾತಿಯ ನೆಪದಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಓಲೈಸಲು ಮೋದಿ ಸರಕಾರ ಪಣತೊಟ್ಟಿದ್ದು, 2024ರ ಚುನಾವಣೆಯಲ್ಲಿ ಇದರಿಂದ ಬಿಜೆಪಿಗೂ ಲಾಭವಾಗಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಂಗ್ರೆಸ್​​ ಸರ್ಕಾರ ಪತನದ ಭವಿಷ್ಯ ನುಡಿದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್
ಕಾಂಗ್ರೆಸ್​​ ಸರ್ಕಾರ ಪತನದ ಭವಿಷ್ಯ ನುಡಿದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ
ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್
ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್