- Kannada News Photo gallery Actress Hema Malini And Dharmendra Celebrate 44th Wedding Anniversary they married Again
Hema Malini: ಮತ್ತೆ ಮದುವೆ ಆದ್ರಾ ಹೇಮಾ ಮಾಲಿನಿ? ಫೋಟೋ ವೈರಲ್
1980ರಲ್ಲಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಮದುವೆ ಆದರು. ಈ ದಂಪತಿಗೆ ಇಶಾ ಡಿಯೋಲ್ ಹಾಗೂ ಅಹಾನಾ ಡಿಯೋಲ್ ಹೆಸರಿನ ಮಕ್ಕಳಿದ್ದಾರೆ. ಹೇಮಾ ಮಾಲಿನಿ ಡ್ರೀಮ್ ಗರ್ಲ್ ಎಂದೇ ಫೇಮಸ್.
Updated on:May 04, 2024 | 9:55 AM

ನಟಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ತಮ್ಮ 44ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಿಕೊಂಡರು. ಈ ವೇಳೆ ದಂಪತಿ ಮತ್ತೆ ಮದುವೆ ಆಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ದೊಡ್ಡ ಹಾರವನ್ನು ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಹೇಮಾ ಮಾಲಿನಿ ಅವರು ಸೀರೆ ಉಟ್ಟು ಕಾಣಿಸಿಕೊಂಡರೆ, ಧರ್ಮೇಂದ್ರ ಪ್ಯಾಂಟ್-ಶರ್ಟ್ ಧರಿಸಿದ್ದಾರೆ.

ಶ್ರೀದೇವಿ ಕೆನ್ನೆಗೆ ಧರ್ಮೇಂದ್ರ ಅವರು ಕಿಸ್ ಮಾಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್ಗಳು ಬಂದಿವೆ.

ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಮೊದಲ ಬಾರಿಗೆ ಭೇಟಿ ಆಗಿದ್ದು 1970ರಲ್ಲಿ. ‘ತುಮ್ ಹಸೀ ಮೇ ಜವಾನ್’ ಸಿನಿಮಾದ ಸೆಟ್ನಲ್ಲಿ ಇವರ ಭೇಟಿ ಆಯಿತು. ಈ ಜೋಡಿಯನ್ನು ಫ್ಯಾನ್ಸ್ ತೆರೆಮೇಲೆ ನೋಡಿ ಮೆಚ್ಚಿಕೊಂಡಿದ್ದಾರೆ.

1980ರಲ್ಲಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಮದುವೆ ಆದರು. ಈ ದಂಪತಿಗೆ ಇಶಾ ಡಿಯೋಲ್ ಹಾಗೂ ಅಹಾನಾ ಡಿಯೋಲ್ ಹೆಸರಿನ ಮಕ್ಕಳಿದ್ದಾರೆ. ಹೇಮಾ ಮಾಲಿನಿ ಡ್ರೀಮ್ ಗರ್ಲ್ ಎಂದೇ ಫೇಮಸ್. ಧರ್ಮೇಂದ್ರ ಅವರು ಹೇಮಾ ಮಾಲಿನಿಗೂ ಮೊದಲು ಪ್ರಕಾಶ್ ಕೌರ್ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಜನಿಸಿದರು.

ಹೇಮಾ ಮಾಲಿನಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಮಥುರಾ ಕ್ಷೇತ್ರದಿಂದ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
Published On - 9:54 am, Sat, 4 May 24

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




