- Kannada News Photo gallery Actress Meera Chopra gets trolled by Jr NTR fans for not mentioning his name
ಯಶ್, ಪ್ರಭಾಸ್ ಬಗ್ಗೆ ಮೆಚ್ಚುಗೆ ಮಾತಾಡಿದ ನಟಿಯನ್ನು ಟ್ರೋಲ್ ಮಾಡಿದ ಜ್ಯೂ. ಎನ್ಟಿಆರ್ ಫ್ಯಾನ್ಸ್; ಕಾರಣ ಏನು?
ನಟಿ ಮೀರಾ ಚೋಪ್ರಾ ಅವರು ಈ ಮೊದಲ ಕೂಡ ಜ್ಯೂ. ಎನ್ಟಿಆರ್ ಅಭಿಮಾನಿಗಳ ಕೋಪಕ್ಕೆ ಗುರಿ ಆಗಿದ್ದರು. ಈಗ ಅವರು ಮತ್ತೆ ಟ್ರೋಲ್ ಆಗುತ್ತಿದ್ದಾರೆ.
Updated on: Apr 10, 2022 | 4:03 PM

Actress Meera Chopra gets trolled by Jr NTR fans for not mentioning his name

Actress Meera Chopra gets trolled by Jr NTR fans for not mentioning his name

‘ಸೌತ್ ಇಂಡಿಯಾ ನಟರು ದೇಶಾದ್ಯಂತ ಮನ್ನಣೆ ಪಡೆದುಕೊಳ್ಳುತ್ತಿರುವ ಬಗ್ಗೆ ನನಗೆ ಖುಷಿ ಆಗುತ್ತಿದೆ. ಅವರ ಪ್ರತಿಭೆ, ಮಾನವೀಯತೆ ಮತ್ತು ಕೆಲಸದ ಮೇಲಿನ ಒಲವನ್ನು ನೋಡಿ ಬೇರೆಯವರು ಕಲಿಯಬೇಕು’ ಎಂದು ಮೀರಾ ಚೋಪ್ರಾ ಟ್ವೀಟ್ ಮಾಡಿದ್ದಾರೆ. ಜ್ಯೂ. ಎನ್ಟಿಆರ್ ಹೆಸರನ್ನು ಅವರು ಬೇಕಂತಲೇ ಕೈ ಬಿಟ್ಟಿದ್ದಾರೆ ಎಂಬುದು ನೆಟ್ಟಿಗರ ವಾದ.

‘ಆರ್ಆರ್ಆರ್’ ಸಿನಿಮಾದಲ್ಲಿ ಜ್ಯೂ. ಎನ್ಟಿಆರ್ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಅವರು ಕೂಡ ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಆದರೂ ಸಹ ಅವರ ಹೆಸರನ್ನು ಹೇಳದೇ ಇರುವುದು ಅವರಿಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಮೀರಾ ಚೋಪ್ರಾರನ್ನು ಟ್ರೋಲ್ ಮಾಡಲಾಗುತ್ತಿದೆ.

ಪ್ರಿಯಾಂಕಾ ಚೋಪ್ರಾ ಅವರ ಸಂಬಂಧಿ ಆಗಿರುವ ಮೀರಾ ಚೋಪ್ರಾ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಅರ್ಜುನ್’ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದರು. ಆ ಸಿನಿಮಾ 2008ರಲ್ಲಿ ತೆರೆಕಂಡಿತು. ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯಲು ಮೀರಾಗೆ ಸಾಧ್ಯವಾಗಿಲ್ಲ.



















