- TV9 Kannada Photo gallery Allu Arjun to Darshan Big Celebrities arrested in 2024 | cinema News in Kannada
ಈ ವರ್ಷ ಜೈಲು ಸೇರಿದ ಸೆಲೆಬ್ರಿಟಿಗಳು ಯಾರ್ಯಾರು? ಮಾಡಿದ ಕೇಸ್ ಏನು?
2024ರಲ್ಲಿ ಅನೇಕ ಸೆಲೆಬ್ರಿಟಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಆ ಸಾಲಿನಲ್ಲಿ ಹಲವು ಸೆಲೆಬ್ರಿಟಿಗಳ ಹೆಸರುಗಳು ಇವೆ. ದರ್ಶನ್, ಅರ್ಜುನ್ ಮೊದಲಾದವರು ಈ ಸಾಲಿನಲ್ಲಿ ಇದ್ದಾರೆ. ಹಾಗಾದರೆ, ಈ ವರ್ಷ ಬಂಧನಕ್ಕೆ ಒಳಗಾದ ಸೆಲೆಬ್ರಿಟಿಗಳು ಯಾರು? ಅವರ ಕೇಸ್ ಏನು ಎಂಬ ಬಗ್ಗೆ ಇಲ್ಲಿದೆ ವಿವರ.
Updated on:Dec 13, 2024 | 3:22 PM

ಅಲ್ಲು ಅರ್ಜುನ್ ಅವರು ಇಂದು (ಡಿಸೆಂಬರ್ 13) ಅರೆಸ್ಟ್ ಆಗಿದ್ದಾರೆ. ಅವರ ಬಂಧನದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಹೈದರಾಬಾದ್ನಲ್ಲಿ ಡಿಸೆಂಬರ್ 4ರಂದು ನಡೆದ ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್ ತೆರಳಿದ್ದರು. ಈ ಕಾರಣದಿಂದ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿತ್ತು.

ಅಲ್ಲು ಅರ್ಜುನ್ ಅಭಿಮಾನಿ ರೇವತಿ ಎಂಬ ಮಹಿಳೆ ನಿಧನ ಹೊಂದಿದರು. ಅವರ ಕುಟುಂಬಕ್ಕೆ ಅಲ್ಲು ಅರ್ಜುನ್ ಅವರು 25 ಲಕ್ಷ ರೂಪಾಯಿ ಪರಿಹಾರ ಕೊಡೋದಾಗಿ ಹೇಳಿದ್ದರು. ಅವರು ಈ ಪ್ರಕರಣ ರದ್ದು ಮಾಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.

ಮಲಯಾಳಂನ ಖ್ಯಾತ ಹಿರಿಯ ನಟ ಸಿದ್ದಿಖಿ ಅವರು ಬಂಧನಕ್ಕೆ ಒಳಗಾಗಿದ್ದರು. ಅವರ ಮೇಲೆ ರೇಪ್ ಕೇಸ್ ಇದ್ದು, ಈ ಕಾರಣಕ್ಕೆ ಡಿಸೆಂಬರ್ನಲ್ಲಿ ಅವರನ್ನು ಬಂಧಿಸಲಾಯಿತು. ಆ ಬಳಿಕ ಜಾಮೀನು ಪಡೆದು ಅವರು ಹೊರ ಬಂದರು.

ಬೆಂಗಳೂರಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಕೂಡ ಇದ್ದರು. ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಹೇಮಾ ಅವರು ದೊಡ್ಡ ಮಟ್ಟದಲ್ಲಿ ಹೈಡ್ರಾಮಾ ಮಾಡಿದ್ದರು.

ದರ್ಶನ್ ಅವರು ಕನ್ನಡದ ಸ್ಟಾರ್ ಹೀರೋ. ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೂನ್ 11ರಂದು ಬಂಧನಕ್ಕೆ ಒಳಗಾದರು. ಆ ಬಳಿಕ ಹಲವು ತಿಂಗಳು ಜೈಲಿನಲ್ಲಿ ಇದ್ದ ಅವರು, ಈಗ ಮಧ್ಯಂತರ ಜಾಮೀನು ಪಡೆದು ಹೊರಕ್ಕೆ ಬಂದಿದ್ದರು. ಈಗ ಅವರಿಗೆ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿದೆ.

ಕನ್ನಡ ಮೊದಲಾದ ಭಾಷೆಗಳಿಗೆ ಫೈಟ್ ಮಾಸ್ಟರ್ ಆಗಿರೋ ಜಾನಿ ಮಾಸ್ಟರ್ ಕೂಡ ಈ ವರ್ಷ ಅರೆಸ್ಟ್ ಆಗಿದ್ದಾರೆ. ಸಹಾಯಕಿಯಾಗಿ ಇದ್ದ ಯುವತಿಗೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ ಆರೋಪ ಇದೆ.
Published On - 3:10 pm, Fri, 13 December 24

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



