AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಆಡುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಅಲ್ಲದೆ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಜಯ ಸಾಧಿಸಿದರೆ ಆರ್​ಸಿಬಿ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ.

ಝಾಹಿರ್ ಯೂಸುಫ್
|

Updated on: May 14, 2026 | 9:56 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ದಾಖಲಿಸಿದ 6 ವಿಕೆಟ್‌ಗಳ ಭರ್ಜರಿ ಗೆಲುವು, ಇಡೀ ಟೂರ್ನಿಯ ಸಮೀಕರಣವನ್ನೇ ಬದಲಾಯಿಸಿದೆ. ರನ್‌ ಮಷಿನ್ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಶತಕದ (105*) ನೆರವಿನಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ, ಆರ್‌ಸಿಬಿಯ ಈ ವಿಜಯೋತ್ಸವವು ಟೂರ್ನಿಯ ಇತರ 5 ಪ್ರಮುಖ ತಂಡಗಳನ್ನು ಭಾರೀ ಸಂಕಷ್ಟಕ್ಕೆ ತಳ್ಳಿದೆ. (PC: BCCI)

1 / 5
ಕೋಲ್ಕತ್ತಾ ನೈಟ್ ರೈಡರ್ಸ್ (KKR):  ಆರ್‌ಸಿಬಿ ವಿರುದ್ಧದ ಸೋಲಿನಿಂದ ಕೆಕೆಆರ್ ತಂಡಕ್ಕೆ ಅತ್ಯಂತ ದೊಡ್ಡ ಆಘಾತ ಎದುರಾಗಿದೆ. 11 ಪಂದ್ಯಗಳನ್ನು ಆಡಿರುವ ಕೆಕೆಆರ್ ಕೇವಲ 4 ಗೆಲುವಿನೊಂದಿಗೆ 9 ಪಾಯಿಂಟ್ಸ್ ಪಡೆದು 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಕೆಕೆಆರ್ ತಂಡದ ನೆಟ್ ರನ್ ರೇಟ್ ಪ್ರಸ್ತುತ -0.198 ರಷ್ಟಿದ್ದು, ಇದು ಅತ್ಯಂತ ಕಳಪೆಯಾಗಿದೆ. ಹೀಗಾಗಿ ಕೆಕೆಆರ್​ ಮುಂದಿನ ಪಂದ್ಯಗಳನ್ನು ಗೆದ್ದರೂ ಅಧಿಕೃತವಾಗಿ ಪ್ಲೇಆಫ್ ತಲುಪಬೇಕಾದರೆ ಸಿಎಸ್‌ಕೆ, ರಾಜಸ್ಥಾನ್ ರಾಜಸ್ಥಾನ್ ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಎದುರು ನೋಡಬೇಕಿದೆ. (PC: BCCI)

2 / 5
ಡೆಲ್ಲಿ ಕ್ಯಾಪಿಟಲ್ಸ್ (DC): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ 16 ಅಂಕಗಳನ್ನು ಪಡೆದಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಮತ್ತಷ್ಟು ಕಠಿಣವಾಗಿದೆ. ಈವರೆಗೆ ಕೇವಲ 10 ಅಂಕಗಳನ್ನು ಮಾತ್ರ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೂ, ಎಸ್​ಆರ್​ಹೆಚ್, ಪಂಜಾಬ್ ಕಿಂಗ್ಸ್, ಸಿಎಸ್​ಕೆ ಹಾಗೂ ಆರ್​ಆರ್​ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋಲುವುದು ಡಿಸಿ ಪಾಲಿಗೆ ಅನಿವಾರ್ಯವಾಗಿದೆ.  (PC: BCCI)

3 / 5
ಮೊದಲ ಕ್ವಾಲಿಫೈಯರ್:  ಐಪಿಎಲ್ ನಿಯಮಾವಳಿಗಳ ಪ್ರಕಾರ ಅಂಕಪಟ್ಟಿಯ ಮೊದಲ ಎರಡು ಸ್ಥಾನ ಪಡೆಯುವ ತಂಡಗಳಿಗೆ ಫೈನಲ್ ತಲುಪಲು 'ಕ್ವಾಲಿಫೈಯರ್ 1' ರೂಪದಲ್ಲಿ ಎರಡು ಅವಕಾಶಗಳು ಸಿಗುತ್ತವೆ. ಪ್ರಸ್ತುತ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್​ ತಲಾ 16 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. (PC: BCCI)

4 / 5
ಮಧ್ಯಮ ಕ್ರಮಾಂಕದ ತಂಡಗಳ ಆತಂಕ: ಪ್ರಸ್ತುತ 3, 4, 5 ಮತ್ತು 6ನೇ ಸ್ಥಾನಗಳಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ (14 ಅಂಕ), ಪಂಜಾಬ್ ಕಿಂಗ್ಸ್ (13 ಅಂಕ), ಚೆನ್ನೈ ಸೂಪರ್ ಕಿಂಗ್ಸ್ (12 ಅಂಕ) ಮತ್ತು ರಾಜಸ್ಥಾನ್ ರಾಯಲ್ಸ್ (12 ಅಂಕ) ತಂಡಗಳಿಗೆ ಈಗ ಟಾಪ್-2 ತಲುಪುವ ಹಾದಿ ದುರ್ಗಮವಾಗಿದೆ. ಏಕೆಂದರೆ ಇನ್ನುಳಿದ ಪಂದ್ಯಗಳಲ್ಲಿ ಈ ತಂಡಗಳು ಕೇವಲ ಗೆಲ್ಲುವುದಷ್ಟೇ ಅಲ್ಲದೆ, ದೊಡ್ಡ ಅಂತರದಿಂದ ಜಯಭೇರಿ ಬಾರಿಸಬೇಕಿದೆ. ಏಕೆಂದರೆ ಆರ್​ಸಿಬಿ ಮತ್ತು ಜಿಟಿ ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮೊದಲ ಕ್ವಾಲಿಫೈಯರ್ ಆಡುವುದು ಖಚಿತ. ಹೀಗಾಗಿ ಟಾಪ್-2 ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ ಸೋಲುವುದನ್ನು ಪಂಜಾಬ್ ಕಿಂಗ್ಸ್, ಸಿಎಸ್​ಕೆ, ಎಸ್​ಆರ್​ಹೆಚ್ ಮತ್ತು ಆರ್​ಆರ್​​ ತಂಡಗಳು ಎದುರು ನೋಡಬೇಕು. (PC: BCCI)

5 / 5
Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್

ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು

ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!

ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ

ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ

ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ