AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 5 ರನ್​​ಗಳ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡ ರೋಹಿತ್, ಕೊಹ್ಲಿ

India vs England 1st ODI: ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತ vs ಇಂಗ್ಲೆಂಡ್ ಮೊದಲ ಏಕದಿನ ಪಂದ್ಯದಲ್ಲಿ, ಇಂಗ್ಲೆಂಡ್ 258 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ (11) ಮತ್ತು ವಿರಾಟ್ ಕೊಹ್ಲಿ (5) ವೈಫಲ್ಯದಿಂದ ಆರಂಭಿಕ ಆಘಾತ ಎದುರಾಯಿತು. ಈ ಇಬ್ಬರು ಅನುಭವಿ ಆಟಗಾರರ ಶೀಘ್ರ ವಿಕೆಟ್ ಪತನ ತಂಡವನ್ನು ಸಂಕಷ್ಟಕ್ಕೆ ತಳ್ಳಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಮೇಲೆ ಭಾರ ಬಿದ್ದಿದೆ.

ಪೃಥ್ವಿಶಂಕರ
|

Updated on: Jul 14, 2026 | 8:44 PM

Share
ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌  ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ  47.5 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಪವರ್ ಪ್ಲೇ ಮುಗಿಯುವುದಕ್ಕೂ ಮುನ್ನವೇ ಆಘಾತ ಎದುರಾಯಿತು (PC-Cricbuzz).

1 / 5
ಟೀಂ ಇಂಡಿಯಾದ ಇಬ್ಬರು ಅನುಭವಿ ಬ್ಯಾಟ್ಸ್‌ಮನ್​ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಎಡವಿದ್ದಾರೆ. ಅದರಲ್ಲೂ ಬಹಳ ದಿನಗಳ ಬಳಿಕ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಕೇವಲ 5 ರನ್ ಕಲೆಹಾಕಲಷ್ಟೇ ಶಕ್ತರಾದರು (PC-PTI).

2 / 5
ಶುಭ್​ಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್​ಗೆ ಮೊದಲಿನಿಂದಲೂ ಮುಕ್ತವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ರೋಹಿತ್ ಬರೋಬ್ಬರಿ 21 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ ಕೇವಲ 11 ರನ್ ಕಲೆಹಾಕಲಷ್ಟೇ ಶಕ್ತರಾದರು. ಸ್ಯಾಮ್ ಕರನ್ ಅವರ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ರೋಹಿತ್ ಕ್ಯಾಚ್ ನೀಡಿದರು (PC-PTI).

3 / 5
ರೋಹಿತ್ ವಿಕೆಟ್ ಪತನದ ಬಳಿಕ ಬಂದ ವಿರಾಟ್ ಕೊಹ್ಲಿ ಆತ್ಮವಿಶ್ವಾಸದಲ್ಲಿ ಕಾಣುತ್ತಿದ್ದರು. ಅದರಂತೆ ಕೊಹ್ಲಿ ಜೋಪ್ರಾ ಆರ್ಚರ್ ಅವರ ಬೌಲಿಂಗ್‌ನಲ್ಲಿ ಅದ್ಭುತ ಬೌಂಡರಿ ಬಾರಿಸಿ ಅಬ್ಬರಿಸುವ ಸುಳಿವನ್ನು ನೀಡಿದರು. ಆದರೆ ಆರ್ಚರ್ ಬೌಲ್ ಮಾಡಿದ 9ನೇ ಓವರ್​ನ ಎರಡನೇ ಎಸೆತದಲ್ಲಿ ಕೊಹ್ಲಿ ಎಲ್​ಬಿಡಬ್ಲ್ಯೂ ಆಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದರು (PC-PTI).

4 / 5
ಈ ಇಬ್ಬರು ಅನುಭವಿ ಆಟಗಾರರು ಕೇವಲ 5 ರನ್​ಗಳ ಅಂತರದಲ್ಲಿ ತಮ್ಮ ವಿಕೆಟ್‌ಗಳನ್ನು ಒಪ್ಪಿಸಿದ್ದು ಟೀಂ ಇಂಡಿಯಾವನ್ನು ಆಘಾತಕ್ಕೀಡು ಮಾಡಿದೆ. ಇಂಗ್ಲೆಂಡ್‌ ನೀಡಿರುವ ಈ ಗುರಿ ಬೆನ್ನಟ್ಟಲು ಇದೀಗ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು ಪಿಚ್​ನಲ್ಲಿ ನೆಲೆ ನಿಂತು ದೊಡ್ಡ ಇನ್ನಿಂಗ್ಸ್ ಆಡಬೇಕಿದೆ (PC-PTI).

5 / 5
Follow Us