- TV9 Kannada Photo gallery Cricket photos IPL 2025: Minimum player bidding price to be increased to Rs 30 Lakh
IPL 2025: ಐಪಿಎಲ್ ಮೆಗಾ ಹರಾಜಿನ ನಿಯಮದಲ್ಲಿ ಮಹತ್ವದ ಬದಲಾವಣೆ
IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಆರು ಆಟಗಾರರಲ್ಲಿ ಓರ್ವ ಅನ್ಕ್ಯಾಪ್ಡ್ ಆಟಗಾರನಿರಬೇಕೆಂದು ತಿಳಿಸಲಾಗಿದೆ. ಅಲ್ಲದೆ ಹರಾಜಿನ ಬಳಿಕ ಕನಿಷ್ಠ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ ಮಾಡಲಾಗಿದೆ.
Updated on: Oct 30, 2024 | 10:55 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಈ ಪಟ್ಟಿಯನ್ನು ಅಕ್ಟೋಬರ್ 31 ರೊಳಗೆ ಸಲ್ಲಿಸಬೇಕಿದ್ದು, ಇದಾದ ಬಳಿಕ ಐಪಿಎಲ್ ಮೆಗಾ ಹರಾಜಿಗಾಗಿ ಆಟಗಾರರ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ಅದರಂತೆ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಕನಿಷ್ಠ ಬಿಡ್ಡಿಂಗ್ ಬೆಲೆ 30 ಲಕ್ಷ ರೂ. ಇರಲಿದೆ. ಇದಕ್ಕೂ ಮುನ್ನ ಕನಿಷ್ಠ ಹರಾಜು ಮೊತ್ತ 20 ಲಕ್ಷ ರೂ. ಆಗಿತ್ತು. ಆದರೆ ಈ ಬಾರಿ ಈ ಮೊತ್ತವನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ.

ಅಂದರೆ ಇಲ್ಲಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಕನಿಷ್ಠ ಮೂಲ ಬೆಲೆ 30 ಲಕ್ಷ ರೂ. ಆಗಿರಲಿದೆ. ಹಾಗೆಯೇ 50 ಲಕ್ಷ ರೂ., 1 ಕೋಟಿ ರೂ. ಹಾಗೂ 1.5 ಕೋಟಿ ರೂ. ಮೂಲ ಬೆಲೆಯಲ್ಲಿ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು. ಹಾಗೆಯೇ ಇಲ್ಲಿ ಗರಿಷ್ಠ ಮೂಲ ಬೆಲೆ 2 ಕೋಟಿ ರೂ. ನಿಗದಿ ಮಾಡಲಾಗಿದೆ.

ಅದರಂತೆ ಈ ಬಾರಿಯ ಹರಾಜಿನಲ್ಲಿ ಕನಿಷ್ಠ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಆಟಗಾರರನ್ನು ಖರೀದಿಸಲು 30 ಲಕ್ಷ ರೂ. ವ್ಯಯಿಸಬೇಕಾಗುತ್ತದೆ. ಈ ಮೂಲಕ ಹೊಸ ಆಟಗಾರರಿಗೆ ಹೆಚ್ಚಿನ ಮೊತ್ತ ಸಿಗುವಂತೆ ಮಾಡಲು ಬಿಸಿಸಿಐ ಮುಂದಾಗಿದೆ.

ಇನ್ನು ಈ ಬಾರಿಯ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯುವ ಸಾಧ್ಯತೆಯಿದೆ. ಪ್ರಸ್ತುತ ಮಾಹಿತಿ ಪ್ರಕಾರ, 18ನೇ ಸೀಸನ್ನ ಮೆಗಾ ಆಕ್ಷನ್ಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಆತಿಥ್ಯವಹಿಸಲಿದೆ. ಅಂದರೆ ಅರಬ್ಬರ ನಾಡಿನಲ್ಲಿ ಆಟಗಾರರ ಐಪಿಎಲ್ ಭವಿಷ್ಯ ನಿರ್ಧಾರವಾಗಲಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



