- Kannada News Photo gallery Cricket photos IPL 2026: Punjab Kings Suffers Blow as Lockie Ferguson Misses Initial Matches
IPL 2026: ಪಂಜಾಬ್ ಕಿಂಗ್ಸ್ಗೆ ಆಘಾತ; ಸ್ಟಾರ್ ವೇಗಿ ಆರಂಭಿಕ ಪಂದ್ಯಗಳಿಗೆ ಅಲಭ್ಯ
IPL 2025: ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್ ತಂಡಗಳಿಗೆ ಸ್ಟಾರ್ ಆಟಗಾರರ ಅಲಭ್ಯತೆ ಕಾಡುತ್ತಿದೆ. ಪಂಜಾಬ್ ಕಿಂಗ್ಸ್ ತಂಡದ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಆರಂಭಿಕ ಪಂದ್ಯಗಳಿಗೆ ಲಭ್ಯರಿಲ್ಲ. ಅವರ ಪತ್ನಿ ಮಗುವಿಗೆ ಜನ್ಮ ನೀಡಿರುವುದರಿಂದ, ಕುಟುಂಬದೊಂದಿಗೆ ಸಮಯ ಕಳೆಯಲು ಅವರು ನಿರ್ಧರಿಸಿದ್ದಾರೆ. ಇದು ಪಂಜಾಬ್ ಕಿಂಗ್ಸ್ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
Updated on: Mar 20, 2026 | 6:03 PM

ಪ್ರತಿ ಬಾರಿಯಂತೆ ಈ ಬಾರಿಯೂ ಭಾಗಶಃ ಐಪಿಎಲ್ ತಂಡಗಳು ಸ್ಟಾರ್ ಆಟಗಾರರ ಇಂಜುರಿ ಮತ್ತು ಅಲಭ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಈಗಾಗಲೇ ಮೂರ್ನಾಲ್ಕು ಫ್ರಾಂಚೈಸಿಗಳಿಗೆ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನು ಕೆಲವು ಫ್ರಾಂಚೈಸಿಗಳಿಗೆ ಸ್ಟಾರ್ ಆಟಗಾರರ ಆರಂಭಿಕ ಅಲಭ್ಯತೆ ದೊಡ್ಡ ಸವಾಲಾಗಿದೆ. ಅಂತಹ ಫ್ರಾಂಚೈಸಿಗಳ ಪಟ್ಟಿಗೆ ಇದೀಗ ಪಂಜಾಬ್ ಕಿಂಗ್ಸ್ ಸೇರಿಕೊಂಡಿದೆ.

ಕಳೆದ ಆವೃತ್ತಿಯಿಂದ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್, ಲೀಗ್ನ ಆರಂಭಿಕ ಪಂದ್ಯಗಳಿಗೆ ಲಭ್ಯರಿಲ್ಲ ಎಂದು ವರದಿಯಾಗಿದೆ. ಫರ್ಗುಸನ್ ಅವರ ಮಡದಿ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಫರ್ಗುಸನ್ ತಮ್ಮ ಪತ್ನಿ ಹಾಗೂ ಕುಟುಂಬದೊಂದಿಗೆ ಕೆಲವು ದಿನ ಕಾಲ ಕಳೆಯುವ ಸಲುವಾಗಿ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಗೈರಾಗಲಿದ್ದಾರೆ.

2025 ರ ಮೆಗಾ ಹರಾಜಿನಲ್ಲಿ ಫರ್ಗುಸನ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 2 ಕೋಟಿ ರೂ. ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಅದಾದ ಬಳಿಕ 2026 ರ ಹರಾಜಿಗೂ ಮುನ್ನ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಇದೀಗ ಫರ್ಗುಸನ್ ಈಗಾಗಲೇ ತಮ್ಮ ಅಲಭ್ಯತೆಯನ್ನು ಪಂಜಾಬ್ ಕಿಂಗ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದು, ಕೆಲವು ದಿನಗಳ ಬಳಿಕ ತಂಡವನ್ನು ಕೂಡಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ಮುಗಿದಿವೆ. ಉಳಿದ ಇನ್ನೇರಡು ಪಂದ್ಯಗಳನ್ನು ಆಡಿ ಮುಗಿಸಿದ ಬಳಿಕ ಫರ್ಗುಸನ್, ಕೆಲವು ವಾರಗಳ ಕಾಲ ವಿರಾಮ ತೆಗೆದುಕೊಳ್ಳಲು ಯೋಜಿಸಿದ್ದಾರೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿ ಮಾಡಿದೆ.

ಫರ್ಗುಸನ್ ಈ ರೀತಿಯಾಗಿ ಲೀಗ್ ಆರಂಭದಲ್ಲಿ ಅಥವಾ ಮಧ್ಯದಲ್ಲಿ ತಂಡವನ್ನು ತೊರೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿಯೂ ಫರ್ಗುಸನ್ ಕೇವಲ 4 ಪಂದ್ಯಗಳನ್ನು ಆಡಿದ್ದರು. ಆ ಪಂದ್ಯಗಳಲ್ಲಿ 4 ವಿಕೆಟ್‌ಗಳನ್ನು ಸಹ ಪಡೆದಿದ್ದರು. ಆ ಬಳಿಕ ಗಾಯಗೊಂಡು ಟೂರ್ನಿಯಿಂದ ಹೊರಬಿದಿದ್ದರು.
