AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಹೀಗೆ 2 ಶತಕ ತಪ್ಪಿಸಿಕೊಂಡ ಏಕೈಕ ಆಟಗಾರ ಮಿಚೆಲ್ ಮಾರ್ಷ್!

Mitchell Marsh: ಐಪಿಎಲ್ 2026ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ದಾಂಡಿಗ ಮಿಚೆಲ್ ಮಾರ್ಷ್ ಸ್ಫೋಟಕ ಸೆಂಚುರಿ ಸಿಡಿಸಿದ್ದರು. ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಅಬ್ಬರಿಸಿದ್ದ ಮಾರ್ಷ್ 111 ರನ್​ಗಳ ಇನಿಂಗ್ಸ್ ಆಡಿದ್ದರು. ಆದರೆ ಇದಾದ ಬಳಿಕ ಅವರು ಎರಡು ಬಾರಿ ಶತಕ ವಂಚಿತರಾಗಿದ್ದಾರೆ.

ಝಾಹಿರ್ ಯೂಸುಫ್
|

Updated on: May 20, 2026 | 7:53 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಈವರೆಗೆ 13 ಶತಕಗಳು ಮೂಡಿಬಂದಿವೆ. ಈ ಹದಿಮೂರು ಶತಕಗಳಲ್ಲಿ ಲಕ್ನೋ ಸೂಪರ್ ಪರ ಸೆಂಚುರಿ ಸಿಡಿಸಿದ ಏಕೈಕ ಬ್ಯಾಟರ್ ಮಿಚೆಲ್ ಮಾರ್ಷ್ (Mitchell Marsh). ಆದರೆ ಇದೇ ಮಾರ್ಷ್ 2 ಬಾರಿ ಭರ್ಜರಿ ಸೆಂಚುರಿ ಸಿಡಿಸುವ ಅವಕಾಶವನ್ನು ಮಿಸ್ ಮಾಡಿದ್ದಾರೆ. (PC: IPL)

1 / 6
ಮೇ 7 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 111 ರನ್​ಗಳ ಶತಕ ಸಿಡಿಸಿ ಮಿಂಚಿದ್ದ ಮಿಚೆಲ್ ಮಾರ್ಷ್, ಆ ಬಳಿಕ ಎರಡು ಪಂದ್ಯಗಳಲ್ಲಿ ಶತಕ ವಂಚಿತರಾಗಿದ್ದಾರೆ. ಅದು ಕೂಡ ರನೌಟ್ ಆಗುವ ಮೂಲಕ ಎಂಬುದು ಅಚ್ಚರಿ. (PC: IPL)

2 / 6
ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದಲ್ಲಿ ಮಾರ್ಷ್ ಕೇವಲ 38 ಎಸೆತಗಳಲ್ಲಿ 9 ಫೋರ್ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 90 ರನ್ ಚಚ್ಚಿ ಅಬ್ಬರಿಸುತ್ತಿದ್ದರು. ಆದರೆ, ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದಾಗ, ಅವರದೇ ತಂಡದ ನಿಕೋಲಸ್ ಪೂರನ್ ಹೊಡೆದ ನೇರ ಶಾಟ್ ಬೌಲರ್ ಮುಖೇಶ್ ಚೌಧರಿ ಅವರ ಕೈಗೆ ತಾಗಿ ಸ್ಟಂಪ್ಸ್‌ಗೆ ಬಿತ್ತು. ಮಾರ್ಷ್ ಕ್ರೀಸ್‌ನಿಂದ ಹೊರಗಿದ್ದ ಕಾರಣ ದುರದೃಷ್ಟಕರ ರೀತಿಯಲ್ಲಿ ರನ್ ಔಟ್ ಆಗಿ ಶತಕ ವಂಚಿತರಾಗಿದ್ದರು. (PC: IPL)

3 / 6
ಇದೀಗ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲೂ ಮಿಚೆಲ್ ಮಾರ್ಷ್ ರನೌಟ್ ಆಗಿ ಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ. ಈ ಬಾರಿ ಜೋಫ್ರಾ ಆರ್ಚರ್ ಎಸೆದ ಅಂತಿಮ ಓವರ್‌ನ ಫುಲ್ ಟಾಸ್ ಎಸೆತದಲ್ಲಿ ಮಾರ್ಷ್ 2ನೇ ರನ್ ಕದಿಯಲು ಯತ್ನಿಸಿದರು. ಆದರೆ ಲಾಂಗ್-ಆಫ್‌ನಲ್ಲಿದ್ದ ಯಶಸ್ವಿ ಜೈಸ್ವಾಲ್ ಎಸೆದ ಅದ್ಭುತ ಡೈರೆಕ್ಟ್ ಹಿಟ್‌ಗೆ ಮಾರ್ಷ್ ಕೇವಲ 4 ರನ್‌ಗಳಿಂದ (96 ರನ್, 57 ಎಸೆತ, 11 ಫೋರ್, 5 ಸಿಕ್ಸರ್) ಶತಕ ಮಿಸ್ ಮಾಡಿಕೊಂಡರು.

4 / 6
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ 90+ ರನ್​ಗಳಿಸಿ 2 ಬಾರಿ ರನೌಟ್ ಆಗಿ ಶತಕ ವಂಚಿತರಾದ ಏಕೈಕ ಬ್ಯಾಟರ್ ಎನಿಸಿಕೊಂಡರು. ಅಂದರೆ ಐಪಿಎಲ್​ನಲ್ಲಿ ಕೇವಲ ನಾಲ್ವರು ಬ್ಯಾಟರ್​ಗಳು ಮಾತ್ರ 90+ ರನ್​ಗಳಿಸಿದ ಬಳಿಕ ರನೌಟ್ ಆಗಿ ಶತಕ ವಂಚಿತರಾಗಿದ್ದಾರೆ. ಅವರೆಂದರೆ ಮನ್ವಿಂದರ್ ಬಿಸ್ಲಾ-92 (2013), ವಿರಾಟ್ ಕೊಹ್ಲಿ- 99 (2013), ಕ್ರಿಸ್ ಗೇಲ್-96 (2015) ಹಾಗೂ ಮಿಚೆಲ್ ಮಾರ್ಷ್ (90 ಮತ್ತು 96). (PC: IPL)

5 / 6
ಮಿಚೆಲ್ ಮಾರ್ಷ್ ಒಂದೇ ಸೀಸನ್​ನಲ್ಲಿ ಎರಡು ಬಾರಿ ರನೌಟ್ ಆಗುವ ಮೂಲಕ 2 ಶತಕಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ರನೌಟ್ ಆಗಿ ಶತಕ ವಂಚಿತನಾದ ಮೊದಲ ಬ್ಯಾಟರ್ ಹಾಗೂ ಐಪಿಎಲ್​ನಲ್ಲಿ 90 ಅಥವಾ ಅದಕ್ಕಿಂತ ಹೆಚ್ಚಿನ ರನ್​ಗಳಿಸಿ 2 ಬಾರಿ ರನೌಟ್ ಆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. (PC: IPL)

6 / 6
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us