AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಆರ್​ಸಿಬಿಗೆ ಎದುರಾಯ್ತು ಸಂಕಷ್ಟ; ಸ್ಟಾರ್ ವೇಗಿಗೆ ಸಿಕ್ಕಿಲ್ಲ ಎನ್​ಒಸಿ

IPL 2026: ಐಪಿಎಲ್ 2026 ಆರಂಭಕ್ಕೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಸ್ಟಾರ್ ವೇಗಿ ನುವಾನ್ ತುಷಾರ ಫಿಟ್‌ನೆಸ್ ಕಾರಣದಿಂದ ಲೀಗ್‌ಗೆ ಅಲಭ್ಯರಾಗುವ ಸಾಧ್ಯತೆ ಇದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ NOC ನಿರಾಕರಿಸಿದೆ. ಜೊತೆಗೆ, ಜೋಶ್ ಹೇಜಲ್‌ವುಡ್ ಆರಂಭಿಕ ಪಂದ್ಯಗಳಿಗೆ ಲಭ್ಯವಿಲ್ಲ. ಇದರಿಂದ ಆರ್‌ಸಿಬಿ ಬೌಲಿಂಗ್ ವಿಭಾಗ ದುರ್ಬಲಗೊಳ್ಳುವ ಆತಂಕ ಎದುರಾಗಿದೆ. ತಂಡಕ್ಕೆ ಬದಲಿ ಆಯ್ಕೆಗಳ ಹುಡುಕಾಟ ಅನಿವಾರ್ಯವಾಗಿದೆ.

ಪೃಥ್ವಿಶಂಕರ
|

Updated on: Mar 27, 2026 | 2:44 PM

Share
2026 ರ ಐಪಿಎಲ್ ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಲೀಗ್​ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರ ಲೀಗ್​ನಿಂದ ಹೊರಬೀಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

1 / 5
ಗಾಯದಿಂದ ಬಳಲುತ್ತಿರುವ ನುವಾನ್ ತುಷಾರ ಪ್ರಸ್ತುತ ಚೇತರಿಕೆಯ ಹಾದಿಯಲಿದ್ದಾರೆ. ಹೀಗಾಗಿ ಅವರು ಸಂಪೂರ್ಣ ಚೇತರಿಸಿಕೊಳ್ಳುವರೆಗೂ ಅವರಿಗೆ ಐಪಿಎಲ್‌ನಲ್ಲಿ ಆಡಲು ಎನ್‌ಒಸಿ ನೀಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರಾಕರಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಕಟ್ಟುನಿಟ್ಟಾದ ಫಿಟ್‌ನೆಸ್ ನೀತಿಯನ್ನು ಜಾರಿಗೆ ತಂದಿದೆ, ಅದಕ್ಕಾಗಿಯೇ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶ್ರೀಲಂಕಾ ಮಂಡಳಿಯ ಈ ನಿರ್ಧಾರ ಆರ್‌ಸಿಬಿಗೆ ದೊಡ್ಡ ಹೊಡೆತವಾಗಿದೆ.

2 / 5
ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಐಪಿಎಲ್‌ನಲ್ಲಿ ಭಾಗವಹಿಸುವ ಮೊದಲು ಫಿಟ್‌ನೆಸ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಯಿತು, ಆದರೆ ಅವರು ವಿಫಲರಾಗಿದ್ದಾರೆ. ಹೀಗಾಗಿ ಶ್ರೀಲಂಕಾ ಮಂಡಳಿ ಅವರಿಗೆ ಎನ್‌ಒಸಿ ನೀಡಲು ನಿರಾಕರಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಹೊಸ ನೀತಿಯ ಪ್ರಕಾರ, ಎಲ್ಲಾ ಆಟಗಾರರು ಯಾವುದೇ ವಿದೇಶಿ ಫ್ರಾಂಚೈಸ್ ಲೀಗ್‌ನಲ್ಲಿ ಭಾಗವಹಿಸಲು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಒಂದು ವೇಳೆ ಅದರಲ್ಲಿ ಅವರು ವಿಫಲವಾದರೆ ಅಂತಹ ಆಟಗಾರರಿಗೆ ಎನ್​ಒಸಿ ನೀಡದಂತೆ ಮಂಡಳಿ ತೀರ್ಮಾನಿಸಿದೆ.

3 / 5
ನುವಾನ್ ತುಷಾರ ಐಪಿಎಲ್‌ನಿಂದ ಹೊರಗುಳಿದರೆ ಆರ್​ಸಿಬಿ ಬೌಲಿಂಗ್ ವಿಭಾಗ ದುರ್ಬಲವಾಗಿ ಕಾಣಲಿದೆ. ಏಕೆಂದರೆ ಮತ್ತೊಬ್ಬ ವೇಗಿ ಜೋಶ್ ಹೇಜಲ್‌ವುಡ್ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರಿಬ್ಬರ ಅನುಪಸ್ಥಿತಿಯಲ್ಲಿ ಆರ್​ಸಿಬಿ ಯಾರನ್ನು ಆಡಿಸಲಿದೆ ಎಂಬುದು ಪ್ರಶ್ನಾರ್ಥಕವಾಗಿದೆ.

4 / 5
ಇದೆಲ್ಲದರ ನಡುವೆ ಒಳ್ಳೆಯ ಸುದ್ದಿ ಅಂದರೆ ಜೋಶ್ ಹೇಜಲ್‌ವುಡ್ ಬೆಂಗಳೂರಿನಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ. ಆದಾಗ್ಯೂ ಅವರು ಪ್ರಸ್ತುತ ಫಿಟ್ ಆಗಿಲ್ಲ. ಇದರಿಂದ ಮೊದಲ ನಾಲ್ಕೈದು ಪಂದ್ಯಗಳಲ್ಲಿ ಅವರು ಆಡುವುದು ಅನುಮಾನವಾಗಿದೆ. ಇದರ ಜೊತೆಗೆ ಇದೀಗ ನುವಾನ್ ತುಷಾರಗೆ ಎನ್‌ಒಸಿ ಸಿಗದಿರುವುದು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

5 / 5
Follow Us