AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namibia vs Karnataka: ನಿಕಿನ್-ಚೇತನ್ ಸ್ಪೋಟಕ ಸೆಂಚುರಿ: ನಮೀಬಿಯಾ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

Namibia vs Karnataka 3rd Odi: ನಮೀಬಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ನಿಕಿನ್ ಜೋಸ್ (103) ಹಾಗೂ ಎಲ್​ಆರ್​ ಚೇತನ್ (169) ಶತಕ ಬಾರಿಸಿದ್ದರು.

TV9 Web
| Edited By: |

Updated on: Jun 07, 2023 | 7:39 PM

Share
Namibia vs Karnataka: ವಿಂಡ್​ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಮೀಬಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರವಿಕುಮಾರ್ ಸಮರ್ಥ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.

1 / 9
ಅದರಂತೆ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶಾನ್ ಫೌಷೆಯನ್ನು ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕೆಲ್ ವ್ಯಾನ್​ ಲಿಂಗನ್​ರನ್ನು 6ನೇ ಓವರ್​ನಲ್ಲಿ ವಿಜಯಕುಮಾರ್ ವೈಶಾಕ್ ಔಟ್ ಮಾಡಿ ಕರ್ನಾಟಕಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು.

2 / 9
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಝೇನ್ ಗ್ರೀನ್ 72 ಎಸೆತಗಳಲ್ಲಿ 3 ಫೋರ್ ಹಾಗೂ 2 ಸಿಕ್ಸ್​ನೊಂದಿಗೆ ಅಜೇಯ 65 ರನ್ ಬಾರಿಸಿದರು. ಇನ್ನು ಗ್ರೀನ್​ಗೆ ಸಾಥ್ ನೀಡಿದ ಬೆರ್ನಾಡ್ 6 ಭರ್ಜರಿ ಸಿಕ್ಸ್​ನೊಂದಿಗೆ 49 ಎಸೆತಗಳಲ್ಲಿ 59 ರನ್ ಸಿಡಿಸಿದರು. ಇದಾಗ್ಯೂ ಕೆಲ ಕ್ರಮಾಂಕದಲ್ಲಿ ಕುಸಿತ ಕಂಡ ನಮೀಬಿಯಾ ತಂಡವು 45.1 ಓವರ್​ಗಳಲ್ಲಿ 226 ರನ್​ಗಳಿಸಿ ಸರ್ವಪತನ ಕಂಡಿತು.

3 / 9
ಕರ್ನಾಟಕ ಪರ ಶುಭಾಂಗ್ ಹೆಗ್ಡೆ 10 ಓವರ್​ಗಳಲ್ಲಿ 44 ರನ್ ನೀಡಿ 3 ವಿಕೆಟ್ ಪಡೆದರೆ, ವಿಜಯಕುಮಾರ್ ವೈಶಾಕ್ 2 ವಿಕೆಟ್ ಕಬಳಿಸಿದರು. ಇನ್ನು ನಿಕಿನ್ ಜೋಸ್ ಹಾಗೂ ರಿಷಿ ಬೋಪಣ್ಣ ತಲಾ 1 ವಿಕೆಟ್ ಪಡೆದರು.

4 / 9
ಈ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ರವಿಕುಮಾರ್ ಸಮರ್ಥ್ (3) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಜೊತೆಯಾದ ಎಲ್​ಆರ್​ ಚೇತನ್ ಹಾಗೂ ನಿಕಿನ್ ಜೋಸ್ ಅತ್ಯುತ್ತಮ ಇನಿಂಗ್ಸ್ ಆಡಿದರು.

5 / 9
ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ನಿಧಾನವಾಗಿ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಅದರಲ್ಲೂ ಎಲ್​ಆರ್ ಚೇತನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ನಮೀಬಿಯಾ ಬೌಲರ್​ಗಳ ಬೆಂಡೆತ್ತಿದರು.

6 / 9
ಪರಿಣಾಮ 25 ಓವರ್​ ವೇಳೆಗೆ ಕರ್ನಾಟಕ ತಂಡದ ಮೊತ್ತ 150 ರ ಗಡಿ ತಲುಪಿತು. ಇತ್ತ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಚೇತನ್ 15 ಫೋರ್ ಹಾಗೂ 1 ಭರ್ಜರಿ ಸಿಕ್ಸ್​ನೊಂದಿಗೆ ಕೇವಲ 92 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿದರು.

7 / 9
ಮತ್ತೊಂದೆಡೆ ನಿಕಿನ್ ಜೋಸ್ 90 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಶತಕ ಪೂರೈಸಿದರು. ಅಲ್ಲದೆ 225 ರನ್​ಗಳ ಭರ್ಜರಿ ಜೊತೆಯಾಟವಾಡಿದರು. ಚೇತನ್ ಅಜೇಯ 120 ರನ್ ಬಾರಿಸಿದರೆ, ನಿಕಿಕ್ ಅಜೇಯ 101 ರನ್​ಗಳಿಸಿದರು. ಅದರಂತೆ ಕರ್ನಾಟಕ ತಂಡವು 33.4 ಓವರ್​ಗಳಲ್ಲಿ 227 ರನ್​ಗಳಿಸಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

8 / 9
ವಿಶೇಷ ಎಂದರೆ ಇದಕ್ಕೂ ಮುನ್ನ ನಮೀಬಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ನಿಕಿನ್ ಜೋಸ್ (103) ಹಾಗೂ ಎಲ್​ಆರ್​ ಚೇತನ್ (169) ಶತಕ ಬಾರಿಸಿದ್ದರು. ಇದೀಗ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಯುವ ದಾಂಡಿಗರಿಬ್ಬರು ಮಿಂಚಿದ್ದಾರೆ.

9 / 9
Web contact
Web contact

TV9 Kannada

Read More
Follow Us
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್

ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ

3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?

ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು

ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!

ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ

ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!

ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ