- Kannada News Photo gallery Cricket photos Virat Kohli: IPL 1000 Runs vs MI & T20 14K Record in RCB vs MI Match 54
RCB vs MI: ಮುಂಬೈ ವಿರುದ್ಧದ ಪಂದ್ಯದಲ್ಲಿ ಎರಡೆರಡು ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಕೊಹ್ಲಿ
Virat Kohli Records: ಐಪಿಎಲ್ 2026 ರ ಆರ್ಸಿಬಿ vs ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಮಹತ್ವದ ದಾಖಲೆಗಳನ್ನು ಸೃಷ್ಟಿಸಲಿದ್ದಾರೆ. ಮುಂಬೈ ವಿರುದ್ಧ 1,000 ಐಪಿಎಲ್ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗುವ ಅವಕಾಶ ಅವರ ಮುಂದಿದೆ. ಇದರೊಂದಿಗೆ, ಟಿ20 ವೃತ್ತಿಜೀವನದಲ್ಲಿ 14,000 ರನ್ ಗಡಿ ತಲುಪಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೂ ಅವರು ಪಾತ್ರರಾಗಲಿದ್ದಾರೆ.
Updated on:May 10, 2026 | 6:12 PM

ಐಪಿಎಲ್ 2026 ರ 54 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಆರ್ಸಿಬಿ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಸೃಷ್ಟಿಸುವ ದಾಖಲೆ ಹೊಂದಿದ್ದಾರೆ. ಈ ಒಂದು ಪಂದ್ಯದಲ್ಲಿ ಕೊಹ್ಲಿ ಎರಡು ಪ್ರಮುಖ ದಾಖಲೆಗಳನ್ನು ನಿರ್ಮಿಸಲಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೀರ್ಘ ಇನ್ನಿಂಗ್ಸ್ ಆಡಿದರೆ, ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಕೇವಲ 28 ರನ್ ಗಳಿಸಿದರೆ, ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 34 ಇನ್ನಿಂಗ್ಸ್‌ಗಳಲ್ಲಿ 32.40 ಸರಾಸರಿ ಮತ್ತು 128 ಸ್ಟ್ರೈಕ್ ರೇಟ್‌ನಲ್ಲಿ 972 ರನ್ ಗಳಿಸಿದ್ದಾರೆ. ಅವರು ಈ ತಂಡದ ವಿರುದ್ಧ ಏಳು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಕೊಹ್ಲಿಗೆ ಈ ತಂಡದ ವಿರುದ್ಧ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಿಲ್ಲ. ಈ ಅಂಕಿಅಂಶಗಳು ಐಪಿಎಲ್ ಜೊತೆಗೆ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಗಳನ್ನು ಒಳಗೊಂಡಿವೆ.

ಕೊಹ್ಲಿ ಈಗಾಗಲೇ ನಾಲ್ಕು ಐಪಿಎಲ್ ತಂಡಗಳ ವಿರುದ್ಧ 1,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1,174 ರನ್, ದೆಹಲಿ ಕ್ಯಾಪಿಟಲ್ಸ್ ವಿರುದ್ಧ 1,172, ಪಂಜಾಬ್ ಕಿಂಗ್ಸ್ ವಿರುದ್ಧ 1,159 ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1,021 ರನ್ ಗಳಿಸಿದ್ದಾರೆ. ಈಗ, ಅವರು ಮುಂಬೈ ಇಂಡಿಯನ್ಸ್ ವಿರುದ್ಧ ಈ ಸಾಧನೆ ಮಾಡುವ ಅಂಚಿನಲ್ಲಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ದಾಟುವ ಅವಕಾಶ ಹೊಂದಿದ್ದು, ಈ ಪಂದ್ಯದಲ್ಲಿ ಕೊಹ್ಲಿ 72 ರನ್ಗಳ ಇನ್ನಿಂಗ್ಸ್ ಆಡಿದರೆ, ತಮ್ಮ ಟಿ20ವೃತ್ತಿಜೀವನದಲ್ಲಿ 14,000 ರನ್ ಗಡಿ ತಲುಪಿದ ಸಾಧನೆ ಮಾಡಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ 407 ಇನ್ನಿಂಗ್ಸ್‌ಗಳನ್ನಾಡಿರುವ ಕೊಹ್ಲಿ 108 ಅರ್ಧಶತಕಗಳು ಮತ್ತು ಒಂಬತ್ತು ಶತಕಗಳು ಸೇರಿದಂತೆ 13,922 ರನ್ ಗಳಿಸಿದ್ದಾರೆ.

ಹೀಗಾಗಿ ಮುಂಬೈ ವಿರುದ್ಧ ಕೊಹ್ಲಿ 72 ರನ್ ಬಾರಿಸಿದರೆ, ಟಿ20ಕ್ರಿಕೆಟ್‌ನಲ್ಲಿ 14,000 ರನ್ ತಲುಪಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಪ್ರಸ್ತುತ, ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್, ಡೇವಿಡ್ ವಾರ್ನರ್ ಮತ್ತು ಜೋಸ್ ಬಟ್ಲರ್ ಮಾತ್ರ ಈ ಪಟ್ಟಿಯಲ್ಲಿದ್ದಾರೆ.
Published On - 6:12 pm, Sun, 10 May 26




