- Kannada News Photo gallery Cricket photos RR vs CSK IPL 2026: Chennai's Dismal Powerplay; 4 Wickets Down for 41 Runs
CSK vs RR: W,W,W, W.. ಸಿಎಸ್ಕೆ ಪೆವಿಲಿಯನ್ ಪರೇಡ್ ಶುರು
IPL 2026, CSK Powerplay Collapse vs RR: ಐಪಿಎಲ್ 2026ರ ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ CSK ಬ್ಯಾಟಿಂಗ್ ಕುಸಿತ ಕಂಡಿದೆ. ಪವರ್‌ಪ್ಲೇನಲ್ಲಿಯೇ ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ಸೇರಿದಂತೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 41 ರನ್ ಗಳಿಸಿದೆ. ಈ ಅನಿರೀಕ್ಷಿತ ಆರಂಭ ತಂಡವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದೆ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
Updated on: Mar 30, 2026 | 8:31 PM

ಐಪಿಎಲ್ 2026 ರ ಮೂರನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಲೀಗ್ನ ಮೊದಲೆರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡಗಳು ಪವರ್‌ಪ್ಲೇನಲ್ಲಿ ರನ್ ಮಳೆಯನ್ನೇ ಹರಿಸಿದ್ದವು. ಹೀಗಾಗಿ ಈ ಪಂದ್ಯದಲ್ಲೂ ಅದೇ ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಸಿಎಸ್ಕೆ ಪವರ್‌ಪ್ಲೇನಲ್ಲಿಯೇ ಪವರ್ ಕಳೆದುಕೊಂಡಿದೆ.

ಗುವಾಹಟಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಸಿಎಸ್ಕೆ ಪವರ್‌ಪ್ಲೇನಲ್ಲಿಯೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 41 ರನ್ ಕಲೆಹಾಕಿದೆ. ಇದು ತಂಡವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸಿದೆ.

ಇಂದಿನ ಪಂದ್ಯದಲ್ಲಿ ಸಿಎಸ್ಕೆ ಪರ ಆರಂಭಿಕರಾಗಿ ಬಂದಿದ್ದ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಸಂಜು ಸ್ಯಾಮ್ಸನ್ ಅವರಿಂದ ಉತ್ತಮ ಆರಂಭದ ನಿರೀಕ್ಷೆ ಇಡಲಾಗಿತ್ತು. ಇಬ್ಬರು ಅಪಾರ ಅನುಭವ ಹೊಂದಿದ್ದರಿಂದ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುತ್ತಾರೆ ಎಂದ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಇವರಿಬ್ಬರು 10 ರನ್ಗಳ ಗಡಿ ದಾಟಲಾಗದೆ ಒಂದಂಕಿಗೆ ಸುಸ್ತಾದರು.

ಮೊದಲ ವಿಕೆಟ್ ರೂಪದಲ್ಲಿ ಸಂಜು ಸ್ಯಾಮ್ಸನ್ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು. ನಾಂದ್ರೆ ಬರ್ಗರ್ ಬೌಲ್ ಮಾಡಿದ ಇನ್ನಿಂಗ್ಸ್ನ 2ನೇ ಓವರ್ನ ಕೊನೆಯ ಎಸೆತದಲ್ಲಿ ಸಂಜು ಕ್ಲೀನ್ ಬೌಲ್ಡ್ ಆದರು. ಸಂಜು ತಮ್ಮ ಇನ್ನಿಂಗ್ಸ್ನಲ್ಲಿ 7 ಎಸೆತಗಳನ್ನು ಎದುರಿಸಿ 6 ರನ್ಗಳಿಗೆ ಔಟಾದರು. ಸಂಜು ಅವರ ಈ ಇನ್ನಿಂಗ್ಸ್ನಲ್ಲಿ ಕೇವಲ ಒಂದು ಬೌಂಡರಿ ಸೇರಿತ್ತು.

ಇನ್ನು ಎಂದಿನಂತೆ ನಿಧಾನಗತಿಯ ಆರಂಭ ಮಾಡಿದ ರುತುರಾಜ್ ಗಾಯಕ್ವಾಡ್, ಸಂಜು ವಿಕೆಟ್ ಪತನದ ನಂತರ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಹೊಂದಿದ್ದರು. ಆದರೆ ರುತುರಾಜ್ ಕೂಡ ಸಂಜು ಔಟಾದ ಮುಂದಿನ ಓವರ್ನಲ್ಲೇ ಅಂದರೆ ಮೂರನೇ ಓವರ್ನ ಕೊನೆಯ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ರುತುರಾಜ್ ತಮ್ಮ ಇನ್ನಿಂಗ್ಸ್ನಲ್ಲಿ 11 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 6 ರನ್ ಬಾರಿಸಿ ಔಟಾದರು.

ರುತುರಾಜ್ ವಿಕೆಟ್ ಪತನದ ಬಳಿಕ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ವಿಕೆಟ್ ಕೂ ಪತನವಾಯಿತು. ಆರಂಭಿಕರಿಬ್ಬರು ಖಾತೆ ತೆರೆಯುವಲ್ಲಿ ಯಶಸ್ವಿಯಾದರೆ, ಆಯುಷ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅವರು ಮೊದಲ ಎಸೆತದಲ್ಲೇ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು. ಮತ್ತೊಬ್ಬ ಬ್ಯಾಟ್ಸ್‌ಮನ್ ಮ್ಯಾಟ್ ಶಾರ್ಟ್ ಕೂಡ 2 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು.
