AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs GT: ಶತಕದ ಮೇಲೆ ಶತಕ.. ಗಿಲ್- ಸುದರ್ಶನ್ ಜೊತೆಯಾಟಕ್ಕೆ ದಾಖಲೆಗಳೆಲ್ಲ ಧ್ವಂಸ

Sai Sudharsan and Shubman Gill Break IPL Record: ಐಪಿಎಲ್ 2026ರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ 118 ರನ್‌ಗಳ ಶತಕದ ಜೊತೆಯಾಟವಾಡಿ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಇದು ಇವರಿಬ್ಬರ ಆರನೇ ಶತಕದ ಆರಂಭಿಕ ಜೊತೆಯಾಟವಾಗಿದ್ದು, ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ, ರಾಜಸ್ಥಾನ್ ವಿರುದ್ಧ ಗುಜರಾತ್‌ನ ಅತಿ ಹೆಚ್ಚು ಜೊತೆಯಾಟವೂ ಇದಾಗಿದೆ.

ಪೃಥ್ವಿಶಂಕರ
|

Updated on: May 09, 2026 | 9:26 PM

Share
ಐಪಿಎಲ್ 2026 ರ 52 ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಗಿಲ್ ಹಾಗೂ ಸುದರ್ಶನ್ ಮೊದಲ ವಿಕೆಟ್​ಗೆ ಶತಕದ ಜೊತೆಯಾಟ ಕಟ್ಟಿದರು. ಈ ಮೂಲಕ ಐಪಿಎಲ್‌ನಲ್ಲಿ ಇದುವರೆಗೆ ಯಾರೂ ಮಾಡದ ದಾಖಲೆಯನ್ನು ನಿರ್ಮಿಸಿದರು (PC- PTI).

1 / 6
ವಾಸ್ತವವಾಗಿ ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿಗಳಲ್ಲಿ ಒಂದಾಗಿದೆ. ಗುಜರಾತ್ ಟೈಟಾನ್ಸ್‌ಗೆ ಉತ್ತಮ ಆರಂಭ ಒದಗಿಸಿ ಕೊಡುವುದಕ್ಕೆ ಈ ಜೋಡಿ ಹೆಸರುವಾಸಿಯಾಗಿದೆ. ಈ ಸೀಸನ್‌ನಲ್ಲಿ ಗುಜರಾತ್ ತಂಡ ಗೆದ್ದಿರುವ ಪಂದ್ಯಗಳಲ್ಲಿ ಈ ಜೋಡಿಯ ಜೊತೆಯಾಟ ನಿರ್ಣಾಯಕ ಪಾತ್ರವಹಿಸಿದೆ. ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ ಈ ಜೋಡಿ ಅದೇ ಪ್ರದರ್ಶನ ನೀಡಿದೆ (PC- PTI).

2 / 6
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಮೊದಲ ವಿಕೆಟ್‌ಗೆ 118 ರನ್‌ಗಳ ಜೊತೆಯಾಟವಾಡಿತು. ಇದಕ್ಕೆ ತೆಗೆದುಕೊಂಡಿದ್ದು ಕೇವಲ 65 ಎಸೆತಗಳು ಮಾತ್ರ. ಅದಾಗ್ಯೂ ಸುದರ್ಶನ್ ಅವರ ವಿಕೆಟ್ ಪತನದೊಂದಿಗೆ ಇವರಿಬ್ಬರ ಜೊತೆಯಾಟ ಮುರಿದು ಬಿತ್ತು. ಆದಾಗ್ಯೂ ಈ ಜೊತೆಯಾಟದೊಂದಿಗೆ ಐಪಿಎಲ್‌ನಲ್ಲಿ ಪ್ರಮುಖ ದಾಖಲೆಯನ್ನು ನಿರ್ಮಿಸಿದರು (PC- PTI).

3 / 6
ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಆರನೇ ಬಾರಿಗೆ ಮೊದಲ ವಿಕೆಟ್‌ಗೆ 100 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ಕಟ್ಟಿದ ಆರಂಭಿಕ ಜೋಡಿಗಳ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನಕ್ಕೇರಿದ್ದಾರೆ (PC- PTI).

4 / 6
ಗಮನಾರ್ಹವಾಗಿ, ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಕೇವಲ 28 ಪಂದ್ಯಗಳಲ್ಲಿ ಆರು ಶತಕ ಪಾಲುದಾರಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ, ಇವರಿಬ್ಬರ ನಡುವೆ ಇದುವರೆಗೆ 9 ಶತಕದ ಜೊತೆಯಾಟಗಳು ನಡೆದಿವೆ. ಆದರೆ ಉಳಿದ 3 ಶತಕದ ಜೊತೆಯಾಟಗಳು ಅರಂಭಿಕ ವಿಕೆಟ್​ಗೆ ಬಂದಿಲ್ಲ (PC- PTI).

5 / 6
ಇದರ ಜೊತೆಗೆ ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಮತ್ತೊಂದು ದಾಖಲೆ ನಿರ್ಮಿಸಿತು. ಈ ಪಂದ್ಯದಲ್ಲಿ 118 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ರಾಜಸ್ಥಾನ ವಿರುದ್ಧ ಗುಜರಾತ್‌ ಪರ ಯಾವುದೇ ವಿಕೆಟ್‌ಗೆ ದಾಖಲಿಸಿದ ಅತ್ಯಧಿಕ ಜೊತೆಯಾಟ ಎಂಬ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು (PC- PTI).

6 / 6
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ

ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ

40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?

ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ

ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ