AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH All Captains List: SRH ತಂಡವನ್ನು ಮುನ್ನಡೆಸಿದ 8 ನಾಯಕರುಗಳು​ ಯಾರು ಗೊತ್ತಾ?

SRH All Captains List: ಎಸ್​ಆರ್​ಹೆಚ್ ತಂಡದ 9ನೇ ನಾಯಕ ಎಂಬ ಹೆಗ್ಗಳಿಕೆಗೆ ಐಡೆನ್ ಮಾರ್ಕ್ರಾಮ್ ಪಾತ್ರರಾಗಿದ್ದಾರೆ. ಹಾಗಿದ್ರೆ ಇದಕ್ಕೂ ಮುನ್ನ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಮುನ್ನಡೆಸಿದ 8 ನಾಯಕಗಳು ಯಾರೆಂದು ನೋಡೋಣ...

TV9 Web
| Updated By: ಝಾಹಿರ್ ಯೂಸುಫ್|

Updated on: Feb 23, 2023 | 9:23 PM

Share
ಐಪಿಎಲ್ ಸೀಸನ್​ 16 ಗಾಗಿ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಸೌತ್ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಆಯ್ಕೆಯಾಗಿದ್ದಾರೆ. ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಮಾರ್ಕ್ರಾಮ್ ಎಸ್​ಆರ್​ಹೆಚ್ ಫ್ರಾಂಚೈಸಿಯ ಸನ್​ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ತಂಡವಾಗಿ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡ ಹೊರಹೊಮ್ಮಿತ್ತು.

1 / 11
ಇದೀಗ ನಿರೀಕ್ಷೆಯಂತೆ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿಯು ಯಶಸ್ವಿ ನಾಯಕನಿಗೆ ಐಪಿಎಲ್​ ತಂಡದ ಸಾರಥ್ಯವನ್ನು ನೀಡಿದ್ದಾರೆ. ಇದರೊಂದಿಗೆ ಎಸ್​ಆರ್​ಹೆಚ್ ತಂಡದ 9ನೇ ನಾಯಕ ಎಂಬ ಹೆಗ್ಗಳಿಕೆಗೆ ಐಡೆನ್ ಮಾರ್ಕ್ರಾಮ್ ಪಾತ್ರರಾಗಿದ್ದಾರೆ. ಹಾಗಿದ್ರೆ ಇದಕ್ಕೂ ಮುನ್ನ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಮುನ್ನಡೆಸಿದ 8 ನಾಯಕಗಳು ಯಾರೆಂದು ನೋಡೋಣ...

2 / 11
1- ಕುಮಾರ್ ಸಂಗಾಕ್ಕರ: 2013 ರಲ್ಲಿ ನೂತನ ಮಾಲೀಕತ್ವದ ಹಾಗೂ ಹೊಸ ಹೆಸರಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡದ ಮೊದಲ ನಾಯಕ ಶ್ರೀಲಂಕಾದ ಕುಮಾರ್ ಸಂಗಾಕ್ಕರ. 9 ಪಂದ್ಯಗಳಲ್ಲಿ ಎಸ್​ಆರ್​​ಹೆಚ್​ ತಂಡವನ್ನು ಮುನ್ನಡೆಸಿದ್ದ ಸಂಗಾಕ್ಕರ 4 ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಇನ್ನು 4 ಪಂದ್ಯಗಳಲ್ಲಿ ಎಸ್​ಆರ್​​ಹೆಚ್​ ಸೋತರೆ, 1 ಪಂದ್ಯವು ಟೈ ಆಗಿತ್ತು.

3 / 11
2- ಕ್ಯಾಮರೋನ್ ವೈಟ್: ಕುಮಾರ್ ಸಂಗಾಕ್ಕರ ಅನುಪಸ್ಥಿತಿಯಲ್ಲಿ ಎಸ್​ಆರ್​ಹೆಚ್ ತಂಡವನ್ನು 2013 ರಲ್ಲಿ ಆಸ್ಟ್ರೇಲಿಯಾದ ಕ್ಯಾಮರೋನ್ ವೈಟ್ ಕೂಡ ಮುನ್ನಡೆಸಿದ್ದರು. ಒಟ್ಟು 8 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ವೈಟ್ 5 ಬಾರಿ ಗೆಲುವಿನ ರುಚಿ ನೋಡಿದ್ದರು. ಇನ್ನು 3 ಪಂದ್ಯಗಳಲ್ಲಿ ಎಸ್​ಆರ್​ಹೆಚ್ ತಂಡ ಸೋಲನುಭವಿಸಿತ್ತು.

4 / 11
3- ಶಿಖರ್ ಧವನ್: ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಶಿಖರ್ ಧವನ್ ಕೂಡ ಮುನ್ನಡೆಸಿದ್ದಾರೆ. 2013 ಹಾಗೂ 2014 ರ ನಡುವೆ ಎಸ್​ಆರ್​ಹೆಚ್ ಪರ ಆಡಿದ್ದ ಧವನ್ ಒಟ್ಟು 16 ಪಂದ್ಯಗಳಲ್ಲಿ ನಾಯಕರಾಗಿದ್ದರು. ಈ ವೇಳೆ ಎಸ್​ಆರ್​​ಹೆಚ್ ತಂಡವು 9 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಹಾಗೆಯೇ ಧವನ್ ನಾಯಕತ್ವದಲ್ಲಿ 5 ಗೆಲುವು ದಾಖಲಿಸಿತ್ತು.

5 / 11
4- ಡಾರೆನ್ ಸಮಿ: ವೆಸ್ಟ್ ಇಂಡೀಸ್​ನ ಮಾಜಿ ನಾಯಕ ಡಾರೆನ್ ಸಮಿ 2014 ರಲ್ಲಿ ಎಸ್​ಆರ್​ಹೆಚ್​ ತಂಡವನ್ನು 4 ಪಂದ್ಯಗಳನ್ನು ಮುನ್ನಡೆಸಿದ್ದರು. ಈ ವೇಳೆ ಸನ್​ರೈಸರ್ಸ್​ ತಂಡವು 2 ಪಂದ್ಯಗಳಲ್ಲಿ ಸೋತರೆ, 2 ಪಂದ್ಯಗಳನ್ನು ಗೆದ್ದುಕೊಂಡಿತ್ತು.

6 / 11
5- ಡೇವಿಡ್ ವಾರ್ನರ್: ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ದೀರ್ಘಾವಧಿಯವರೆಗೆ ಮುನ್ನಡೆಸಿದ ನಾಯಕನೆಂದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್. 2015 ರಿಂದ 2021ರವರೆಗೆ 67 ಪಂದ್ಯಗಳಲ್ಲಿ ವಾರ್ನರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಎಸ್​ಆರ್​ಹೆಚ್​ ತಂಡವು 35 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಹಾಗೆಯೇ 30 ಪಂದ್ಯಗಳಲ್ಲಿ ಸೋತರೆ, 2 ಪಂದ್ಯ ಟೈ ಆಗಿತ್ತು. ವಿಶೇಷ ಎಂದರೆ ಡೇವಿಡ್ ವಾರ್ನರ್ ಅವರ ನಾಯಕತ್ವದಲ್ಲಿ 2016 ರಲ್ಲಿ ಎಸ್​ಆರ್​ಹೆಚ್​ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

7 / 11
6- ಕೇನ್ ವಿಲಿಯಮ್ಸನ್: 2018 ರಲ್ಲಿ ವಾರ್ನರ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಎಸ್​ಆರ್​ಹೆಚ್ ತಂಡವನ್ನು ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ ಮುನ್ನಡೆಸಿದ್ದರು. ಹಾಗೆಯೇ 2021 ಹಾಗೂ 2022 ರಲ್ಲೂ ತಂಡದ ಸಾರಥ್ಯವಹಿಸಿದ್ದ ವಿಲಿಯಮ್ಸನ್ 46 ಪಂದ್ಯಗಳಲ್ಲಿ 22 ಗೆಲುವು ತಂದುಕೊಟ್ಟಿದ್ದರು. ಹಾಗೆಯೇ 23 ಪಂದ್ಯಗಳಲ್ಲಿ ಸೋತರೆ, 1 ಪಂದ್ಯವು ಟೈ ಆಗಿತ್ತು.

8 / 11
7- ಭುವನೇಶ್ವರ್ ಕುಮಾರ್: 2019 ಹಾಗೂ 2022 ರ ನಡುವೆ ಭುವನೇಶ್ವರ್ ಕುಮಾರ್ ಎಸ್​ಆರ್​ಹೆಚ್​ ತಂಡವನ್ನು 7 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ 5 ಪಂದ್ಯಗಳಲ್ಲಿ ಎಸ್​​ಆರ್​ಹೆಚ್​ ಸೋತರೆ, 2 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿತ್ತು.

9 / 11
8- ಮನೀಷ್ ಪಾಂಡೆ: 2021 ರಲ್ಲಿ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಎಸ್​ಆರ್​ಹೆಚ್ ತಂಡವನ್ನು 1 ಪಂದ್ಯದಲ್ಲಿ ಮನೀಷ್ ಪಾಂಡೆ ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಸೋಲನುಭವಿಸಿತ್ತು.

10 / 11
ಇದೀಗ ಸನ್​ರೈಸರ್ಸ್ ಹೈದರಾಬಾದ್ ತಂಡದ 9ನೇ ನಾಯಕರಾಗಿ ಐಡೆನ್ ಮಾರ್ಕ್ರಾಮ್ ಆಯ್ಕೆಯಾಗಿದ್ದಾರೆ. ಅತ್ತ ಸೌತ್ ಆಫ್ರಿಕಾ ಟಿ20 ಲೀಗ್​ನ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿರುವ ಮಾರ್ಕ್ರಾಮ್ ಐಪಿಎಲ್​ನಲ್ಲೂ ತಮ್ಮ ಕ್ಯಾಪ್ಟನ್ ಮೋಡಿಯನ್ನು ಮಾಡಲಿದ್ದಾರಾ ಕಾದು ನೋಡಬೇಕಿದೆ.

11 / 11
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?