AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷರ್ ಪಟೇಲ್​ಗೆ ಓವರ್​ ನೀಡದ ಸೂರ್ಯ: ಅನುಮಾನಕ್ಕೆ ಕಾರಣವಾದ ನಾಯಕನ ನಡೆ

South Africa vs India: ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ ಎರಡನೇ ಮ್ಯಾಚ್​ನಲ್ಲಿ ಮುಗ್ಗರಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ಸಜ್ಜಾಗಿದ್ದು, ಈ ಪಂದ್ಯವು ನವೆಂಬರ್ 13 ರಂದು ಸೆಂಚುರಿಯನ್​ನಲ್ಲಿ ನಡೆಯಲಿದೆ.

ಝಾಹಿರ್ ಯೂಸುಫ್
|

Updated on: Nov 12, 2024 | 11:11 AM

Share
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 4 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಮ್ಯಾಚ್​ಗಳು ಮುಗಿದಿವೆ. ಈ ಎರಡೂ ಪಂದ್ಯಗಳಲ್ಲೂ ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದರು. ಆದರೆ ಈ ಎರಡು ಮ್ಯಾಚ್​ಗಳಲ್ಲಿ ಅಕ್ಷರ್ ಎಸೆದಿದ್ದು ಕೇವಲ 2 ಓವರ್​ಗಳು ಎಂದರೆ ನಂಬಲೇಬೇಕು.

1 / 5
ಟೀಮ್ ಇಂಡಿಯಾದ ಸ್ಪಿನ್ ಆಲ್​ರೌಂಡರ್ ಆಗಿರುವ ಅಕ್ಷರ್ ಪಟೇಲ್ ತಮ್ಮ ಅನಿರೀಕ್ಷಿತ ಎಸೆತಗಳಿಂದ ವಿಕೆಟ್ ಕಬಳಿಸಬಲ್ಲ ಬೌಲರ್. ಇದಾಗ್ಯೂ ಸೂರ್ಯಕುಮಾರ್ ಯಾದವ್ ಅಕ್ಷರ್ ಅವರನ್ನು ಎರಡೂ ಪಂದ್ಯಗಳಲ್ಲಿ ಬಳಸಿಕೊಳ್ಳದಿರುವುದು ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

2 / 5
ಮೊದಲ ಟಿ20 ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಡೆಯಿಂದ ಸೂರ್ಯಕುಮಾರ್ ಯಾದವ್ ಹಾಕಿಸಿದ್ದು ಕೇವಲ ಒಂದು ಓವರ್ ಮಾತ್ರ. ಅದು ಕೂಡ 6ನೇ ಬೌಲರ್ ಆಗಿ ಬಳಸಿಕೊಂಡಿದ್ದರು. ಅಂದರೆ ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ ಕಡೆಯಿಂದ ಒಟ್ಟು 8 ಓವರ್​ಗಳನ್ನು ಹಾಕಿಸಿದ್ದ ಸೂರ್ಯ, ಅನುಭವಿ ಅಕ್ಷರ್​ಗೆ ಕೇವಲ ಒಂದು ಓವರ್ ಎಸೆಯಲು ಮಾತ್ರ ಅವಕಾಶ ನೀಡಿದ್ದರು.

3 / 5
ಇನ್ನು ದ್ವಿತೀಯ ಟಿ20 ಪಂದ್ಯದಲ್ಲೂ ಇದು ಪುನರಾವರ್ತನೆಯಾಯಿತು. ವರುಣ್ ಚಕ್ರವರ್ತಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಿದ್ದರೂ, ಅನುಭವಿ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಬಳಸಿಕೊಳ್ಳಲು ಸೂರ್ಯಕುಮಾರ್ ಯಾದವ್ ಮುಂದಾಗಲೇ ಇಲ್ಲ. ಅಲ್ಲದೆ ಈ ಪಂದ್ಯದಲ್ಲೂ 6ನೇ ಬೌಲರ್​ ಆಗಿ ಬಳಸಿಕೊಂಡು ಕೇವಲ ಒಂದು ಓವರ್ ಮಾತ್ರ ನೀಡಿದ್ದರು. ಪರಿಣಾಮ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್​ಗಳಿಂದ ಸೋಲಬೇಕಾಯಿತು.

4 / 5
ಅಂದರೆ ಎರಡು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಎಸೆದಿದ್ದು ಕೇವಲ 2 ಓವರ್​ಗಳು ಮಾತ್ರ. ಪರಿಪೂರ್ಣ ಸ್ಪಿನ್ ಆಲ್​ರೌಂಡರ್ ಆಗಿರುವ ಅಕ್ಷರ್ ಪಟೇಲ್ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿ, ನಾಯಕ ಸೂರ್ಯಕುಮಾರ್ ಯಾದವ್ ಓವರ್ ನೀಡುತ್ತಿಲ್ಲವೇಕೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದರ ಜೊತೆಗೆ ಟೀಮ್ ಇಂಡಿಯಾ ನಾಯಕ ನಡೆಯು ಅನುಮಾನಕ್ಕೆ ಕಾರಣವಾಗಿದೆ.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​

ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ

ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ

ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್

ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು

‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು