AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಆಫ್ರಿಕಾ ಸರಣಿ ಬಳಿಕ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ‘ಎದುರಾಳಿಗಳು’

Virat Kohli - Rohit Sharma: ವಿಜಯ ಹಝಾರೆ ಏಕದಿನ ಟೂರ್ನಿಯು ಡಿಸೆಂಬರ್ 24 ರಿಂದ ಶುರುವಾಗಲಿದೆ. 32 ತಂಡಗಳ ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ದಿಗ್ಗಜರು ದೇಶೀಯ ಅಂಗಳದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 04, 2025 | 3:08 PM

Share
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿಯು ಡಿಸೆಂಬರ್ 6 ರಂದು ಮುಗಿಯಲಿದೆ. ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದರಂತೆ ಡಿಸೆಂಬರ್ 24 ರಿಂದ ಶುರುವಾಗಲಿರುವ ವಿಜಯ ಹಝಾರೆ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಹಾಗೂ ಹಿಟ್​ಮ್ಯಾನ್ ಕಾಣಿಸಿಕೊಳ್ಳಲಿದ್ದಾರೆ.

1 / 5
ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದರೆ, ರೋಹಿತ್ ಶರ್ಮಾ ಮುಂಬೈ ಪರ ಆಡಲಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಎಷ್ಟು ಪಂದ್ಯಗಳನ್ನಾಡಲಿದ್ದಾರೆ ಎಂಬುದು ಇನ್ನೂ ಸಹ ಖಚಿತವಾಗಿಲ್ಲ. ಇದಾಗ್ಯೂ ನ್ಯೂಝಿಲೆಂಡ್ ವಿರುದ್ಧದ ಸರಣಿಯವರೆಗೆ ದೇಶೀಯ ಟೂರ್ನಿಯಲ್ಲಿ  ಮುಂದುವರೆಯುವ ಸಾಧ್ಯತೆಯಿದೆ.

2 / 5
ಇನ್ನು  ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿ ಆಡಿದ್ದು 2010 ರಲ್ಲಿ. ಅಂದು ದೆಹಲಿ ಪರ ಐದು ಮ್ಯಾಚ್​ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ 45.80 ಸರಾಸರಿಯಲ್ಲಿ 229 ರನ್ ಗಳಿಸಿದ್ದರು. ಈ ವೇಳೆ ಎರಡು ಅರ್ಧಶತಕಗಳನ್ನು ಸಹ ಬಾರಿಸಿದ್ದರು.

3 / 5
ರೋಹಿತ್ ಶರ್ಮಾ ವಿಜಯ ಹಝಾರೆ ಟೂರ್ನಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು 2019 ರಲ್ಲಿ. ಮುಂಬೈ ಪರ ಎರಡು ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದ ಹಿಟ್​ಮ್ಯಾನ್ ಒಟ್ಟು 50 ರನ್​ ಕಲೆಹಾಕಿದ್ದರು. ಇದಾದ ಬಳಿಕ ದೇಶೀಯ ಏಕದಿನ ಟೂರ್ನಿಯಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿರಲಿಲ್ಲ.

4 / 5
ಇದೀಗ ವಿರಾಟ್ ಕೊಹ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಹಾಗೂ ರೋಹಿತ್ ಶರ್ಮಾ 7 ವರ್ಷಗಳ ನಂತರ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಟೂರ್ನಿಯಲ್ಲಿ ದೆಹಲಿ ಮತ್ತು ಮುಂಬೈ ತಂಡಗಳು ನಾಕೌಟ್​ಗೆ ಪ್ರವೇಶಿಸಿದರೆ ಕಿಂಗ್ ಕೊಹ್ಲಿ ಹಾಗೂ ಹಿಟ್​ಮ್ಯಾನ್ ಮುಖಾಮುಖಿಯಾಗಬಹುದು.

5 / 5
Follow Us
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!

ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್

ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ

ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು

ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ

ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ

ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ

ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ

ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್

ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು