AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಲಾರ್ಡ್ಸ್‌ನಲ್ಲಿ ತಮ್ಮ ವೃತ್ತಿಜೀವನದ ಮಹದಾಸೆಯನ್ನು ಈಡೇರಿಸಿಕೊಳ್ತಾರಾ ಕೊಹ್ಲಿ

Virat Kohli at Lord's: ಭಾರತ vs ಇಂಗ್ಲೆಂಡ್ ನಡುವಿನ ಸರಣಿ ನಿರ್ಧಾರಕ ODI ಪಂದ್ಯ ಜುಲೈ 19 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನ ಭಾರತಕ್ಕೆ ನಿರ್ಣಾಯಕವಾಗಿದೆ. ಲಾರ್ಡ್ಸ್‌ನಲ್ಲಿ ಕೊಹ್ಲಿಗೆ ಇದುವರೆಗೆ ಅರ್ಧಶತಕದ ದಾಖಲೆ ಇಲ್ಲ. ಈ ಐತಿಹಾಸಿಕ ಮೈದಾನದಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಬರ ನೀಗಿಸಿ, ಭಾರತಕ್ಕೆ ಸರಣಿ ಗೆಲ್ಲಿಸಿಕೊಡುವ ಗುರಿ ಹೊಂದಿದ್ದಾರೆ.

ಪೃಥ್ವಿಶಂಕರ
|

Updated on: Jul 18, 2026 | 5:54 PM

Share
ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಜುಲೈ 19 ರಂದು ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಸರಣಿ ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿದ್ದು, ಎರಡೂ ತಂಡಗಳು ಟ್ರೋಫಿಯನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಈ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಬೇಕಾದರೆ ತಂಡ ಸಾಂಘಿಕ ಪ್ರದರ್ಶನ ನೀಡಬೇಕು. ಅದರಲ್ಲೂ ತಂಡದ ಬ್ಯಾಟಿಂಗ್‌ ಆಧಾರಸ್ತಂಭವಾಗಿರುವ ವಿರಾಟ್ ಕೊಹ್ಲಿಯಿಂದ ಒಂದೊಳ್ಳೆ ಇನ್ನಿಂಗ್ಸ್ ಮೂಡಿಬರಬೇಕು (PC-PTI).

1 / 7
ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಶತಕದತ್ತ ಮುನ್ನುಗ್ಗುತ್ತಿದ್ದ ಅವರು 65 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪತನದ ಬಳಿಕ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ಪರಿಣಾಮವಾಗಿ 178 ರನ್​ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ ಉಳಿದ ವಿಕೆಟ್‌ಗಳನ್ನು ಕೇವಲ 55 ರನ್​​ಗಳಿಗೆ ಕಳೆದುಕೊಂಡಿತು. ಇದರಿಂದಾಗಿ ಅಲ್ಪ ರನ್​ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಸೋತಿತು(PC-PTI).

2 / 7
ಇದೀಗ ಸರಣಿ ನಿರ್ಧಾರಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದರೆ ತಂಡಕ್ಕೆ ಗೆಲುವು ಖಚಿತ. ಹಾಗೆಯೇ ಲಾರ್ಡ್ಸ್‌ನಲ್ಲಿ ಕೊಹ್ಲಿ ಶತಕದ ಇನ್ನಿಂಗ್ಸ್ ಆಡಿದರೆ, ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ನನಸಾಗದ ಕನಸೊಂದನ್ನು ನನಸು ಮಾಡಿಕೊಳ್ಳಲಿದ್ದಾರೆ. ವಾಸ್ತವವಾಗಿ ವಿಶ್ವದ ಬಹುತೇಕ ಕ್ರೀಡಾಂಗಣಗಳಲ್ಲಿ ಶತಕದ ರುಚಿ ನೋಡಿರುವ ಕೊಹ್ಲಿ,  ಲಾರ್ಡ್ಸ್‌ನಲ್ಲಿ ಮಾತ್ರ ಇದುವರೆಗೆ ಒಂದೇ ಒಂದು ಶತಕವನ್ನು ಬಾರಿಸಿಲ್ಲ. ಶತಕವಿರಲಿ, ಕೊಹ್ಲಿ ಬ್ಯಾಟ್​ನಿಂದ ಅರ್ಧಶತಕವೂ ಸಿಡಿದಿಲ್ಲ(PC-PTI).

3 / 7
ಐಕಾನಿಕ್ ಲಾರ್ಡ್ಸ್ ಮೈದಾನದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ ಅಂಕಿಅಂಶಗಳು ಅಷ್ಟು ಉತ್ತಮವಾಗಿಲ್ಲ. ವಿರಾಟ್ ಕೊಹ್ಲಿ ಲಾರ್ಡ್ಸ್‌ನಲ್ಲಿ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ. ಆಶ್ಚರ್ಯಕರವೆಂದರೆ, ಈ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಅವರು ಒಂದೇ ಒಂದು ಅರ್ಧಶತಕವನ್ನು ಬಾರಿಸಿಲ್ಲ. ಈ ಮೈದಾನದಲ್ಲಿ ಕೊಹ್ಲಿಯ ಸರಾಸರಿ ಕೂಡ 22.66 ಆಗಿದೆ, ಇದು ಅವರ ವೃತ್ತಿಜೀವನದ ಸರಾಸರಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ(PC-PTI).

4 / 7
ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ, 25.66 ಸರಾಸರಿಯಲ್ಲಿ ಕೇವಲ 77 ರನ್ ಗಳಿಸಿದ್ದಾರೆ, ಗರಿಷ್ಠ ಸ್ಕೋರ್ 45 ರನ್ ಆಗಿದೆ. ಇದಲ್ಲದೆ, ಅವರು ಲಾರ್ಡ್ಸ್‌ನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 21.16 ಸರಾಸರಿಯಲ್ಲಿ 122 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಟೆಸ್ಟ್ ಸ್ಕೋರ್ ಕೂಡ 42 ಆಗಿದೆ. ಈ ಅವಧಿಯಲ್ಲಿ ಅವರು ಒಮ್ಮೆ ರನ್ ಗಳಿಸದೆಯೇ ಔಟಾಗಿದ್ದಾರೆ(PC-PTI).

5 / 7
ವಿರಾಟ್ ಕೊಹ್ಲಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಮೂರು ಇನ್ನಿಂಗ್ಸ್‌ಗಳಿಗಿಂತ ಹೆಚ್ಚು ಆಡಿರುವ ಮತ್ತು ಒಮ್ಮೆಯೂ 50 ರನ್‌ಗಳ ಗಡಿ ದಾಟಲು ವಿಫಲವಾದ ಏಕೈಕ ಮೈದಾನ ಲಾರ್ಡ್ಸ್ ಕ್ರಿಕೆಟ್ ಮೈದಾನವಾಗಿದೆ. ಕೊಹ್ಲಿ ಇಷ್ಟೊಂದು ಪಂದ್ಯಗಳನ್ನು ಆಡಿರುವ ಮತ್ತು ಒಂದೇ ಒಂದು ಅರ್ಧಶತಕ ಗಳಿಸದ ಮೈದಾನ ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲ(PC-PTI).

6 / 7
ಭಾನುವಾರ ನಡೆಯಲಿರುವ ಈ ಪಂದ್ಯವು ಸರಣಿಯನ್ನು ನಿರ್ಧರಿಸುವುದಲ್ಲದೆ, ಭಾರತಕ್ಕೆ 22 ವರ್ಷಗಳ ಬರಗಾಲವನ್ನು ಕೊನೆಗೊಳಿಸಲು ಒಂದು ಅವಕಾಶವಾಗಿದೆ. ಆದ್ದರಿಂದ, ಟೀಂ ಇಂಡಿಯಾ ಇಂಗ್ಲಿಷ್ ನೆಲದಲ್ಲಿ ಸರಣಿಯನ್ನು ಗೆಲ್ಲಬೇಕಾದರೆ, ವಿರಾಟ್ ಕೊಹ್ಲಿ ತಮ್ಮ ಹಿಂದಿನ ಕಳಪೆ ದಾಖಲೆಯನ್ನು ಮೀರಿಸಿ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಬೇಕಾಗುತ್ತದೆ(PC-PTI).

7 / 7
Follow Us