WPL 2025: 2 ತಂಡಗಳಿಗೆ ಹೊಸ ಕ್ಯಾಪ್ಟನ್ಸ್: 5 ಟೀಮ್ಗಳ ನಾಯಕಿಯರ ಪಟ್ಟಿ ಇಲ್ಲಿದೆ
WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ ಫೆಬ್ರವರಿ 14 ರಿಂದ ಶುರುವಾಗಲಿದೆ. 5 ತಂಡಗಳ ನಡುವಣ ಈ ಕದನದ ಫೈನಲ್ ಪಂದ್ಯವು ಮಾರ್ಚ್ 15 ರಂದು ನಡೆಯಲಿದೆ. ಇನ್ನು ಈ ಟೂರ್ನಿಯ ಉದ್ಘಾಟನಾ ಪಂದ್ಯವು ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದರೆ, ಫೈನಲ್ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಜರುಗಲಿದೆ.
Updated on: Feb 11, 2025 | 9:04 AM

ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಫೆಬ್ರವರಿ 14 ರಿಂದ ಶುರುವಾಗಲಿರುವ WPL ಸೀಸನ್-3 ಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ನಾಯಕಿಯರನ್ನು ಘೋಷಿಸಿದೆ. ಅದರಂತೆ ಈ ಬಾರಿ 2 ತಂಡಗಳನ್ನು ಹೊಸ ಕ್ಯಾಪ್ಟನ್ಗಳು ಮುನ್ನಡೆಸಲಿದ್ದಾರೆ. ಹಾಗಿದ್ರೆ ಯಾವ ತಂಡಕ್ಕೆ ಯಾರು ನಾಯಕಿ ಎಂದು ನೋಡೋಣ...

ಮುಂಬೈ ಇಂಡಿಯನ್ಸ್: ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ತಂಡವನ್ನು ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಹರ್ಮನ್ಪ್ರೀತ್ ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಹೀಗಾಗಿ ಈ ಬಾರಿ ಕೂಡ ಅವರನ್ನೇ ನಾಯಕಿಯಾಗಿ ಮುಂದುವರೆಸಲಾಗಿದೆ.

ಯುಪಿ ವಾರಿಯರ್ಸ್: ಉತ್ತರ ಪ್ರದೇಶ ವಾರಿಯರ್ಸ್ ತಂಡವನ್ನು ಕಳೆದ ಬಾರಿ ಅಲಿಸ್ಸಾ ಹೀಲಿ ಮುನ್ನಡೆಸಿದ್ದರು. ಆದರೆ ಗಾಯದ ಕಾರಣ ಈ ಬಾರಿಯ ಟೂರ್ನಿಯಿಂದ ಹೀಲಿ ಹೊರಗುಳಿದಿದ್ದಾರೆ. ಅದರಂತೆ ಇದೀಗ ಯುಪಿ ವಾರಿಯರ್ಸ್ ತಂಡದ ಹೊಸ ನಾಯಕಿಯಾಗಿ ದೀಪ್ತಿ ಶರ್ಮಾ ಆಯ್ಕೆಯಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್: ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ್ತಿ ಮೆಗ್ ಲ್ಯಾನಿಂಗ್ ಈ ಬಾರಿ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಾರಥ್ಯವಹಿಸಿಕೊಳ್ಳಲಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಲ್ಯಾನಿಂಗ್ ಮುಂದಾಳತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ಗೆ ಪ್ರವೇಶಿಸಿತ್ತು. ಹಾಗಾಗಿ ಈ ಬಾರಿ ಸಹ ಅನುಭವಿ ಆಟಗಾರ್ತಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.

ಗುಜರಾತ್ ಜೈಂಟ್ಸ್: ಈ ಬಾರಿಯ ಟೂರ್ನಿಗಾಗಿ ಗುಜರಾತ್ ಜೈಂಟ್ಸ್ ತಂಡ ನಾಯಕಿಯನ್ನು ಬದಲಿಸಿದೆ. ಆಸ್ಟ್ರೇಲಿಯಾ ಆಟಗಾರ್ತಿ ಬೆತ್ ಮೂನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವ ಗುಜರಾತ್ ಜೈಂಟ್ಸ್ ಫ್ರಾಂಚೈಸಿ, ಆಸೀಸ್ ಆಲ್ರೌಂಡರ್ ಆಶ್ಲೀ ಗಾರ್ಡ್ನರ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಹಾಲಿ ಚಾಂಪಿಯನ್ ಆರ್ಸಿಬಿ ತಂಡವನ್ನು ಈ ಬಾರಿ ಕೂಡ ಸ್ಮೃತಿ ಮಂಧಾನ ಅವರೇ ಮುನ್ನಡೆಸಲಿದ್ದಾರೆ. ಕಳೆದ ಬಾರಿ ರಾಯಲ್ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸ್ಮೃತಿ ಈ ಸಲ ಕೂಡ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



