- Kannada News Photo gallery Dr Vishnuvardhan new house Valmika photos: Celebrities attend housewarming ceremony in Jayanagar
Dr Vishnuvardhan House: ಹೇಗಿದೆ ನೋಡಿ ವಿಷ್ಣುವರ್ಧನ್ ಹೊಸ ಮನೆ; ‘ವಲ್ಮೀಕ’ ಗೃಹ ಪ್ರವೇಶದಲ್ಲಿ ಅನಿರುದ್ಧ್ ಕುಟುಂಬ
Vishnuvardhan New Home Photos: ‘ವಲ್ಮೀಕ’ ಮನೆಯ ಗೇಟಿನಲ್ಲಿ ಕಂಚಿನಿಂದ ಮಾಡಿದ ಸಿಂಹದ ಮುಖ ಇದೆ. ಹೊಸ ಮನೆಗೆ ಕಾಲಿಟ್ಟಿರುವ ವಿಷ್ಣುವರ್ಧನ್ ಕುಟುಂಬದ ಸದಸ್ಯರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
Updated on:Nov 27, 2022 | 12:55 PM

Dr Vishnuvardhan new house Valmika photos: Celebrities attend housewarming ceremony in Jayanagar

Dr Vishnuvardhan new house Valmika photos: Celebrities attend housewarming ceremony in Jayanagar

ವಿಷ್ಣುವರ್ಧನ್ ಅವರ ಈ ಮನೆ ತುಂಬ ಸುಂದರವಾಗಿದೆ. 1976ರಲ್ಲಿ ಈ ಜಾಗವನ್ನು ವಿಷ್ಣು ಖರೀದಿಸಿದ್ದರು. ಈ ಮನೆಯ ಮುಂಭಾಗದಲ್ಲಿ ಕೃಷ್ಣನ ಮೂರ್ತಿ ಇದೆ. ಅದಕ್ಕೆ ಬೆಳ್ಳಿಯ ಮುಖವಾಡ ತೊಡಿಸಿ ಅಲಂಕಾರ ಮಾಡಲಾಗಿದೆ.

ಕಳೆದ ಮೂರು ವರ್ಷದಿಂದ ಹೊಸ ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈಗ ಸಂಭ್ರಮದಿಂದ ಗೃಹ ಪ್ರವೇಶ ಮಾಡಲಾಗಿದೆ. ಚಿತ್ರರಂಗ ಮತ್ತು ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿ ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ.

‘ವಲ್ಮೀಕ’ ಮನೆಯ ಗೇಟಿನಲ್ಲಿ ಕಂಚಿನಿಂದ ಮಾಡಿದ ಸಿಂಹದ ಮುಖ ಇದೆ. ಅದು ಇಡೀ ಮನೆಗೆ ಮೆರುಗು ನೀಡಿದೆ. ಹೊಸ ಮನೆಗೆ ಕಾಲಿಟ್ಟಿರುವ ವಿಷ್ಣುವರ್ಧನ್ ಕುಟುಂಬದ ಸದಸ್ಯರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
Published On - 12:52 pm, Sun, 27 November 22




