ಮೈಸೂರು: ನರಸಿಂಹಸ್ವಾಮಿ ಹೋಮದಲ್ಲಿ ಭಾಗಿಯಾದ ವಿದೇಶಿಗರು, ಫೋಟೋಸ್ ನೋಡಿ
ಅವರೆಲ್ಲ ದೂರದ ಅಮೆರಿಕಾದವರು. ಆದರೂ ನಮ್ಮ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹೊಂದಿರುವವರು. ಅಷ್ಟೇ ಅಲ್ಲ ನಮ್ಮ ಸಂಸ್ಕೃತಿಯನ್ನು ಅಪಾರ ಗೌರವಿಸುವವರು. ಇವರ ಅಭಿಮಾನ ಎಂತಹದ್ದು ಅಂತ ತಿಳಿಯಬೇಕಾದರೆ ಫೋಟೋಸ್ ನೋಡಿ.
Updated on: Oct 18, 2024 | 7:47 AM

ಅವರೆಲ್ಲ ದೂರದ ಅಮೆರಿಕಾದವರು. ಆದರೂ ನಮ್ಮ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹೊಂದಿರುವವರು. ಅಷ್ಟೇ ಅಲ್ಲ ನಮ್ಮ ಸಂಸ್ಕೃತಿಯನ್ನು ಅಪಾರ ಗೌರವಿಸುವವರು. ಇವರ ಅಭಿಮಾನ ಎಂತಹದ್ದು ಅಂತ ತಿಳಿಯಬೇಕಾದರೆ ಫೋಟೋಸ್ ನೋಡಿ.

ಪ್ರಜ್ವಲಿಸುವ ಹೋಮದ ಅಗ್ನಿ ಸುತ್ತ ಕುಳಿತ ಯತಿಗಳು ವಿದೇಶಿಗರು. ವೇದ ಘೋಷ ಮಂತ್ರ ಪಠಣ. ಇದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರ ಮನೆಯಲ್ಲಿ ಕಂಡು ಬಂದ ದೃಶ್ಯಗಳು.

ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರ ಮನೆಯಲ್ಲಿ ಅಮೆರಿಕಾದ ಪ್ರಜೆಗಳಿಗಾಗಿ ನರಸಿಂಹ ಹೋಮ ನೆರವೇರಿಸಲಾಯಿತು. ವಿಶೇಷ ಅಂದರೇ ಈ ನರಸಿಂಹ ಹೋಮದ ನೇತೃತ್ವ ವಹಿಸಿದ್ದು ಅಮೆರಿಕಾದ ಪ್ರಜೆ ಕಲ್ಕಿ. ವೇದ, ಆಗಮ ಶಾಸ್ತ್ರ ಮಂತ್ರ ಘೋಷ ಕಲಿತು ಅವರೇ ಖುದ್ದು ಹೋಮ ಮಾಡಿಸಿದರು.

ಕಲ್ಕಿ ಜೊತೆಗೆ ಅಮೆರಿಕಾದಿಂದ ಬಂದ 10ಕ್ಕೂ ಹೆಚ್ಚು ಮಹಿಳೆಯರು ಹೋಮದಲ್ಲಿ ಭಾಗಿಯಾಗಿದ್ದರು. ಭಾರತೀಯ ನಾರಿಯರಂತೆ ಸೀರೆ ತೊಟ್ಟ ಎಲ್ಲರೂ ಅಪ್ಪಟ ಭಾರತೀಯರಾಗಿ ಮಿಂಚಿದರು. ಮೊದಲು ವಿಜಯಲಕ್ಷ್ಮಿ ಪೂಜೆ ನೆರವೇರಿಸಲಾಯ್ತು. ನಂತರ ನಾರಸಿಂಹ ಹೋಮ ನಡೆಸಲಾಯ್ತು.

ಡಾ. ಶೆಲ್ವಪಿಳೈ ಅಯ್ಯಂಗಾರ್ ಮತ್ತು ಅವರ ಶಿಷ್ಯರು ಸಹ ಹೋಮ ನೆರವೇರಿಸಿಕೊಟ್ಟರು. ನರಸಿಂಹ ಹೋಮ ನಡೆಸಿದ್ದು ವಿದೇಶಗರಿಗೆ ಸಖತ್ ಥ್ರಿಲ್ ನೀಡಿತು.

ಈ ಹೋಮದಿಂದ ಮನಸ್ಸಿಗೆ ಶಾಂತಿ ಲಭಿಸಿತು ಎಂದು ವಿದೇಶಿಗರು ತಮ್ಮ ಅನುಭವ ಹಂಚಿಕೊಂಡರು. ಹೋಮ ನಡೆಸಿಕೊಟ್ಟ ಡಾ. ಶೆಲ್ವಪಿಳೈ ಅಯ್ಯಂಗಾರ್ ಮತ್ತು ಅವರ ಶಿಷ್ಯರಿಗೆ ವಿದೇಶಗರು ಧನ್ಯವಾದ ಹೇಳಿದರು.

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.
Read More



