ಗದಗ: ಶರಣರ ಬುತ್ತಿ ಕಟ್ಟಿಕೊಂಡು ಹೊರಟ್ಟ ಮಹಿಳೆಯರು
ಗದಗ ಜಿಲ್ಲೆಯ ರೋಣ ತಾಲೂಕಿನ ಬಳಗಾನೂರ ಗ್ರಾಮದ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಜಾತ್ರೆ ಬಹಳ ಅದ್ಧೂರಿಯಾಗಿ ನಡೆಯುತ್ತದೆ. ಫೆ. 16 ರಂದು ನಡೆಯುವ ಜಾತ್ರೆಗೆ ಭಕ್ತರು ಶರಣರ ಬುತ್ತಿ ತೆಗೆದುಕೊಂಡು ಹೋಗುತ್ತಾರೆ. ಜಿಲ್ಲೆ ರೋಣ ತಾಲೂಕಿನ ಮೇಲ್ಮಮಠ ಗ್ರಾಮದ ಗ್ರಾಮಸ್ಥರಿಂದ ಪದಯಾತ್ರೆ ಮಾಡುತ್ತಾರೆ.
Updated on: Feb 12, 2024 | 11:05 PM

ಗದಗ ಜಿಲ್ಲೆಯ ರೋಣ ತಾಲೂಕಿನ ಬಳಗಾನೂರ ಗ್ರಾಮದ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಜಾತ್ರೆ ಬಹಳ ಅದ್ಧೂರಿಯಾಗಿ ನಡೆಯುತ್ತದೆ. ಫೆ. 16 ರಂದು ನಡೆಯುವ ಜಾತ್ರೆಗೆ ಭಕ್ತರು ಶರಣರ ಬುತ್ತಿ ತೆಗೆದುಕೊಂಡು ಹೋಗುತ್ತಾರೆ.

ಜಿಲ್ಲೆ ರೋಣ ತಾಲೂಕಿನ ಮೇಲ್ಮಮಠ ಗ್ರಾಮದ ಗ್ರಾಮಸ್ಥರಿಂದ ಪದಯಾತ್ರೆ ಮಾಡುತ್ತಾರೆ.

ಶರಣರ ಬುತ್ತಿಯಲ್ಲಿ ಖಡಕ್ ಜೋಳದ ರೊಟ್ಟಿ, ಪಲ್ಯ, ಕರ್ಚಿಕಾಯಿ, ಶೇಂಗಾ ಹೋಳಿಗೆ ವಿವಿಧ ಖಾದ್ಯಗಳಿರುತ್ತವೆ. ಗ್ರಾಮದ ಮನೆ ಮನೆಯಿಂದ ಶರಣರ ಬುತ್ತಿ ತಯಾರಿಸಲಾಗುತ್ತದೆ.

ಗ್ರಾಮದಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಮಹಿಳೆಯರು ತಲೆಯ ಮೇಲೆ ಬುತ್ತಿ ಹೊತ್ತುಕೊಂಡು ವಾದ್ಯಮೇಳದೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಗುತ್ತದೆ.

ಮೇಲ್ಮಠದಿಂದ ಬಳಗಾನೂರ ಗ್ರಾಮದ ಚಿಕ್ಕೇನಕೊಪ್ಪದ ಶರಣರ ಮಠಕ್ಕೆ ಬುತ್ತಿ ಕಳುಸಿದರೆ ಮಳೆ ಬೆಳೆ ಸಮೃದ್ಧವಾಗುತ್ತದೆ ಎಮಬ ನಂಬಿಕೆ ಇದೆ.

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...
Read More



