Gym Ravi: 50 ದಿನ ಪೂರೈಸಿದ ‘ಪುರುಷೋತ್ತಮ’ ಸಿನಿಮಾ; ಹೀರೋ ಆಗಿ ಗೆಲುವು ಕಂಡ ಜಿಮ್ ರವಿ
Purushothama Kannada Movie: ಜಿಮ್ ರವಿ ನಟನೆಯ ‘ಪುರುಷೋತ್ತಮ’ ಸಿನಿಮಾ ಹಾಫ್ ಸೆಂಚುರಿ ಬಾರಿಸಿದೆ. ಅಂದರೆ, 50 ದಿನ ಪ್ರದರ್ಶನ ಕಂಡಿದೆ. ಈ ಖುಷಿಯನ್ನು ಚಿತ್ರತಂಡ ಸಂಭ್ರಮಿಸಿದೆ.
Updated on:Jun 27, 2022 | 8:06 AM

Gym Ravi and Apurva starrer Purushothama Kannada movie completes 50 days

Gym Ravi and Apurva starrer Purushothama Kannada movie completes 50 days

‘ಪುರುಷೋತ್ತಮ’ ಸಿನಿಮಾದಲ್ಲಿ ಜಿಮ್ ರವಿ ಮತ್ತು ನಟಿ ಅಪೂರ್ವಾ ಅವರು ಜೋಡಿಯಾಗಿ ನಟಿಸಿದ್ದಾರೆ. ಪತಿ-ಪತ್ನಿಗೆ ಒಂದೊಳ್ಳೆಯ ಮೆಸೇಜ್ ನೀಡುವಂತಹ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅಪೂರ್ವಾ ಅವರಿಗೆ ಖುಷಿ ಇದೆ. ಚಿತ್ರದ ಗೆಲುವಿನಲ್ಲಿ ಅವರು ಕೂಡ ಸಂಭ್ರಮಿಸಿದ್ದಾರೆ.

‘ಪುರುಷೋತ್ತಮ’ ಸಿನಿಮಾ 50 ದಿನ ಪೂರೈಸಿದ್ದಕ್ಕಾಗಿ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್ ಅವರು ಅತಿಥಿಯಾಗಿ ಆಗಮಿಸಿದ್ದರು. ಜೈ ಜಗದೀಶ್ ಅವರು ಕೂಡ ಬಂದು ಅಭಿನಂದನೆ ತಿಳಿಸಿದರು.

ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿಯೂ ಜಿಮ್ ರವಿ ಅವರು ಗೆಲುವು ಕಂಡಿದ್ದಾರೆ. ಸಿನಿಮಾಗಾಗಿ ಶ್ರಮಿಸಿದ ಎಲ್ಲರನ್ನೂ ವೇದಿಕೆಗೆ ಕರೆದು ಅವರು ಸ್ಮರಣಿಕೆ ನೀಡಿದರು. ಸಿನಿಮಾ ನೋಡಿದ ಕೆಲವು ಪ್ರೇಕ್ಷಕರು ವೇದಿಕೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು.
Published On - 8:06 am, Mon, 27 June 22



















