- TV9 Kannada Photo gallery Hassan Summer Heat: Belur Halebidu Tourists Struggle; resort to umbrellas and hats
ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ
ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು ಮತ್ತು ಹಳೇಬೀಡಿನಲ್ಲಿ ಬೇಸಿಗೆ ಬಿಸಿಲಿನಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. 30-35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಿಸಿಲಿಗೆ ಕಾದ ದೇಗುಲದ ಕಲ್ಲುಗಳ ಮೇಲೆ ನಡೆಯಲು ಪ್ರವಾಸಿಗರು ಪರದಾಡುತ್ತಿದ್ದಾರೆ. ಬಿಸಿಲ ಝಳಕ್ಕೆ ಪ್ರವಾಸಿಗರು ಛತ್ರಿ ಮತ್ತು ಟೋಪಿ ಮೊರೆ ಹೋಗುತ್ತಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್.
Updated on: Apr 26, 2026 | 3:40 PM
Share

ಬಿಸಿಲಿನಿಂದಾಗಿ ರಾಜ್ಯದ ಜನ ಥರಗುಟ್ಟುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ರಜೆ ಅಂತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಬಿಸಿಲ ಬೇಗೆಗೆ ಬಸವಳಿದಿದ್ದಾರೆ. ಹೀಗಾಗಿ ಬಿಸಿಲ ಝಳಕ್ಕೆ ಛತ್ರಿ, ಟೋಪಿ ಮೊರೆ ಹೋಗುತ್ತಿದ್ದಾರೆ.

ಹಾಸನದಲ್ಲಿ 30-35 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಾರಣ, ಬೇಸಿಗೆ ರಜೆ ಇದ್ದರೂ ಪ್ರವಾಸಿಗರ ಆಗಮನ ಗಣನೀಯವಾಗಿ ಕಡಿಮೆಯಾಗಿದೆ.

ಬೇಲೂರು-ಹಳೇಬೀಡು ದೇವಾಲಯಗಳ ಕಲ್ಲಿನ ನೆಲಹಾಸು ಬಿಸಿಲಿಗೆ ಕಾಯುತ್ತಿದ್ದು, ಪ್ರವಾಸಿಗರು ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ.

ಕಲ್ಲಿನ ಬಿಸಿಯಿಂದ ಪ್ರವಾಸಿಗರ ಪಾದಗಳನ್ನು ರಕ್ಷಿಸಲು ದೇವಾಲಯದ ಆವರಣದಲ್ಲಿ ಮ್ಯಾಟ್ (ಹಾಸು) ಹಾಕುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.

Tourist Cap 5

ಅತಿಯಾದ ತಾಪಮಾನದಿಂದಾಗಿ ಐತಿಹಾಸಿಕ ತಾಣಗಳನ್ನು ವೀಕ್ಷಿಸುವುದು ದುಸ್ತರವಾಗಿದ್ದು, ಪ್ರವಾಸಿಗರು ಹೈರಾಣಾಗುತ್ತಿದ್ದಾರೆ.
Related Photo Gallery
ಇಂದು ಈ ರಾಶಿಯವರು ದೊಡ್ಡ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಇಚ್ಛಿಸರು..
ಒಟಿಟಿ ಸಿನಿಮಾಗಳಿಗೂ ಸೆನ್ಸಾರ್ ಪ್ರಮಾಣಪತ್ರ ಕಡ್ಡಾಯ? ಕೇಂದ್ರದ ಚಿಂತನೆ
ಅಮೆರಿಕದ ಮಾಲ್ನಲ್ಲಿ ಧರ್ಮ ಕೇಳಿ ಭಾರತೀಯನಿಗೆ 15 ಬಾರಿ ಚಾಕು ಇರಿತ
10 ರಾಜ್ಯಗಳಲ್ಲಿ ನಡೆಯಲಿದೆ ಗ್ರಾಮೀಣ ಕ್ರೀಡಾ ಹಬ್ಬ 'ಇಶಾ ಗ್ರಾಮೋತ್ಸವ'
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ಸಿಎಂ ವಿಜಯ್ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್
ಕಾಲ್ತುಳಿತದಲ್ಲಿ ಮೃತ 11 ಜನರ ಸಾವಿಗೆ ಹೊಣೆ ಯಾರು? ಅಶೋಕ್ ಪ್ರಶ್ನೆ
ಬಿವೈ ವಿಜಯೇಂದ್ರ ಆರ್ ಅಶೋಕ್ ಕಾಮಿಡಿ



