- Kannada News Photo gallery Hassan Summer Heat: Belur Halebidu Tourists Struggle; resort to umbrellas and hats
ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ
ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು ಮತ್ತು ಹಳೇಬೀಡಿನಲ್ಲಿ ಬೇಸಿಗೆ ಬಿಸಿಲಿನಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. 30-35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಿಸಿಲಿಗೆ ಕಾದ ದೇಗುಲದ ಕಲ್ಲುಗಳ ಮೇಲೆ ನಡೆಯಲು ಪ್ರವಾಸಿಗರು ಪರದಾಡುತ್ತಿದ್ದಾರೆ. ಬಿಸಿಲ ಝಳಕ್ಕೆ ಪ್ರವಾಸಿಗರು ಛತ್ರಿ ಮತ್ತು ಟೋಪಿ ಮೊರೆ ಹೋಗುತ್ತಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್.
Updated on: Apr 26, 2026 | 3:40 PM
Share

ಬಿಸಿಲಿನಿಂದಾಗಿ ರಾಜ್ಯದ ಜನ ಥರಗುಟ್ಟುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ರಜೆ ಅಂತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಬಿಸಿಲ ಬೇಗೆಗೆ ಬಸವಳಿದಿದ್ದಾರೆ. ಹೀಗಾಗಿ ಬಿಸಿಲ ಝಳಕ್ಕೆ ಛತ್ರಿ, ಟೋಪಿ ಮೊರೆ ಹೋಗುತ್ತಿದ್ದಾರೆ.

ಹಾಸನದಲ್ಲಿ 30-35 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಾರಣ, ಬೇಸಿಗೆ ರಜೆ ಇದ್ದರೂ ಪ್ರವಾಸಿಗರ ಆಗಮನ ಗಣನೀಯವಾಗಿ ಕಡಿಮೆಯಾಗಿದೆ.

ಬೇಲೂರು-ಹಳೇಬೀಡು ದೇವಾಲಯಗಳ ಕಲ್ಲಿನ ನೆಲಹಾಸು ಬಿಸಿಲಿಗೆ ಕಾಯುತ್ತಿದ್ದು, ಪ್ರವಾಸಿಗರು ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ.

ಕಲ್ಲಿನ ಬಿಸಿಯಿಂದ ಪ್ರವಾಸಿಗರ ಪಾದಗಳನ್ನು ರಕ್ಷಿಸಲು ದೇವಾಲಯದ ಆವರಣದಲ್ಲಿ ಮ್ಯಾಟ್ (ಹಾಸು) ಹಾಕುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.

Tourist Cap 5

ಅತಿಯಾದ ತಾಪಮಾನದಿಂದಾಗಿ ಐತಿಹಾಸಿಕ ತಾಣಗಳನ್ನು ವೀಕ್ಷಿಸುವುದು ದುಸ್ತರವಾಗಿದ್ದು, ಪ್ರವಾಸಿಗರು ಹೈರಾಣಾಗುತ್ತಿದ್ದಾರೆ.
Related Photo Gallery
ಪಂಚಮಸಾಲಿ ಪೀಠ ಸಂಘರ್ಷ: 3 ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ
ನನ್ನ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಐರನ್ ಲೇಡಿ
ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ
ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು
ಅಭಿಮಾನಿ ಸಂಘದ ಹೆಸರಲ್ಲಿ ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ: ಚೇತನ್
ದೊಣ್ಣೆ ಹಿಡಿದು ಕಾರಿನ ಗಾಜು ಒಡೆಯಲು ಬಂದ ವ್ಯಕ್ತಿ
ಬೇಸಿಗೆ ಧಗೆ ಹೆಚ್ಚಾಗುತ್ತಿದ್ದಂತೆ ಚಿಲ್ ಬಿಯರ್‌ಗೆ ಭಾರಿ ಡಿಮ್ಯಾಂಡ್
ಪ್ರತಿಕೃತಿ ಸುಡುವಾಗ ಬಿಜೆಪಿ ಶಾಸಕಿ ಕೂದಲಿಗೆ ಹೊತ್ತಿದ ಬೆಂಕಿ
ಡಾ. ರಾಜ್ ಸಮಾಧಿ ವಿವಾದ: ನಾನು ಹೇಳಿದ ವಿಚಾರ ಸುಳ್ಳಲ್ಲ ಎಂದ ಚೇತನ್ ಅಹಿಂಸಾ
ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಮಹಿಳೆ



