AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ

ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು ಮತ್ತು ಹಳೇಬೀಡಿನಲ್ಲಿ ಬೇಸಿಗೆ ಬಿಸಿಲಿನಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. 30-35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಿಸಿಲಿಗೆ ಕಾದ ದೇಗುಲದ ಕಲ್ಲುಗಳ ಮೇಲೆ ನಡೆಯಲು ಪ್ರವಾಸಿಗರು ಪರದಾಡುತ್ತಿದ್ದಾರೆ. ಬಿಸಿಲ ಝಳಕ್ಕೆ ಪ್ರವಾಸಿಗರು ಛತ್ರಿ ಮತ್ತು ಟೋಪಿ ಮೊರೆ ಹೋಗುತ್ತಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್​.

ಮಂಜುನಾಥ ಕೆಬಿ
| Edited By: |

Updated on: Apr 26, 2026 | 3:40 PM

Share
ಬಿಸಿಲಿನಿಂದಾಗಿ ರಾಜ್ಯದ ಜನ ಥರಗುಟ್ಟುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ರಜೆ ಅಂತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಬಿಸಿಲ ಬೇಗೆಗೆ ಬಸವಳಿದಿದ್ದಾರೆ. ಹೀಗಾಗಿ ಬಿಸಿಲ ಝಳಕ್ಕೆ ಛತ್ರಿ, ಟೋಪಿ ಮೊರೆ ಹೋಗುತ್ತಿದ್ದಾರೆ.

1 / 6
ಹಾಸನದಲ್ಲಿ 30-35 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಾರಣ, ಬೇಸಿಗೆ ರಜೆ ಇದ್ದರೂ ಪ್ರವಾಸಿಗರ ಆಗಮನ ಗಣನೀಯವಾಗಿ ಕಡಿಮೆಯಾಗಿದೆ.

ಹಾಸನದಲ್ಲಿ 30-35 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಾರಣ, ಬೇಸಿಗೆ ರಜೆ ಇದ್ದರೂ ಪ್ರವಾಸಿಗರ ಆಗಮನ ಗಣನೀಯವಾಗಿ ಕಡಿಮೆಯಾಗಿದೆ.

2 / 6
ಬೇಲೂರು-ಹಳೇಬೀಡು ದೇವಾಲಯಗಳ ಕಲ್ಲಿನ ನೆಲಹಾಸು ಬಿಸಿಲಿಗೆ ಕಾಯುತ್ತಿದ್ದು, ಪ್ರವಾಸಿಗರು ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ.

ಬೇಲೂರು-ಹಳೇಬೀಡು ದೇವಾಲಯಗಳ ಕಲ್ಲಿನ ನೆಲಹಾಸು ಬಿಸಿಲಿಗೆ ಕಾಯುತ್ತಿದ್ದು, ಪ್ರವಾಸಿಗರು ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ.

3 / 6
ಕಲ್ಲಿನ ಬಿಸಿಯಿಂದ ಪ್ರವಾಸಿಗರ ಪಾದಗಳನ್ನು ರಕ್ಷಿಸಲು ದೇವಾಲಯದ ಆವರಣದಲ್ಲಿ ಮ್ಯಾಟ್ (ಹಾಸು) ಹಾಕುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಕಲ್ಲಿನ ಬಿಸಿಯಿಂದ ಪ್ರವಾಸಿಗರ ಪಾದಗಳನ್ನು ರಕ್ಷಿಸಲು ದೇವಾಲಯದ ಆವರಣದಲ್ಲಿ ಮ್ಯಾಟ್ (ಹಾಸು) ಹಾಕುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.

4 / 6
ಇನ್ನು ಬಿಸಿಲಿನ ಝಳ ತಾಳಲಾರದೆ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಛತ್ರಿ ಮತ್ತು ಟೋಪಿಗಳನ್ನು ಧರಿಸಿಯೇ ದೇವಾಲಯ ವೀಕ್ಷಿಸುತ್ತಿದ್ದಾರೆ.

Tourist Cap 5

5 / 6
ಅತಿಯಾದ ತಾಪಮಾನದಿಂದಾಗಿ ಐತಿಹಾಸಿಕ ತಾಣಗಳನ್ನು ವೀಕ್ಷಿಸುವುದು ದುಸ್ತರವಾಗಿದ್ದು, ಪ್ರವಾಸಿಗರು ಹೈರಾಣಾಗುತ್ತಿದ್ದಾರೆ.

ಅತಿಯಾದ ತಾಪಮಾನದಿಂದಾಗಿ ಐತಿಹಾಸಿಕ ತಾಣಗಳನ್ನು ವೀಕ್ಷಿಸುವುದು ದುಸ್ತರವಾಗಿದ್ದು, ಪ್ರವಾಸಿಗರು ಹೈರಾಣಾಗುತ್ತಿದ್ದಾರೆ.

6 / 6
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Follow Us