- Kannada News Photo gallery Hollywood Actor Robert De Niro becomes father to his seventh child at the age of 79
7ನೇ ಮಗುವಿಗೆ ತಂದೆಯಾದ ಖುಷಿಯಲ್ಲಿ 79ನೇ ವಯಸ್ಸಿನ ಹಾಲಿವುಡ್ ನಟ
ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ ಎಂದು ನಟ ರಾಬರ್ಟ್ ಡಿ ನಿರೋ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
Updated on:May 11, 2023 | 2:45 PM

ಮೊಮ್ಮಕ್ಕಳೊಂದಿಗೆ ಸಮಯ ಕಳೆಯಬೇಕಾದ ಸಮಯದಲ್ಲಿ 7ನೇ ಮಗುವಿಗೆ ತಂದೆಯಾಗುತ್ತಿರುವ ಖುಷಿಯನ್ನು ಹಾಲಿವುಡ್ ನಟ ರಾಬರ್ಟ್ ಡಿ ನಿರೋ ಹಂಚಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಇನ್ನೇನು ತೆರೆಕಾಣಲಿರುವ ' ಎಬೌಟ್ ಮೈ ಫಾದರ್ ' ಸಿನಿಮಾ ಪ್ರಚಾರದ ವೇಳೆ ತಾನು 79 ವಯಸ್ಸಿನಲ್ಲಿ ತಂದೆಯಾಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇದೀಗಾ ಹಾಲಿವುಡ್ ಆಸ್ಕರ್ ವಿಜೇತ ನಟ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿರುವುದು ಎಲ್ಲೆಡೆ ಬಾರೀ ವೈರಲ್ ಆಗಿದೆ.

ಐರಿಷ್ ಮ್ಯಾನ್ ಸಿನಿಮಾದ ಮೂಲಕ ಸಾಕಷ್ಟು ಚಿರಪರಿಚಿತ ನಟ ರಾಬರ್ಟ್ ಡಿ ನಿರೋ. 7 ಸಲ ಆಸ್ಕರ್ಗೆ ನಾಮಿನೇಟ್ ಆಗಿ ಎರಡು ಸಲ ಆಸ್ಕರ್ ಗೆದ್ದಿದ್ದಾರೆ.

ನಟ ರಾಬರ್ಟ್ ಡಿ ನಿರೋ ' ಎಬೌಟ್ ಮೈ ಫಾದರ್ ' ಸಿನಿಮಾ ಮೇ 26 ರಂದು ಅಮೇರಿಕಾದಾದ್ಯಂತ ತೆರೆಕಾಣಲಿದೆ.
Published On - 2:45 pm, Thu, 11 May 23

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More




