Updated on:Jun 16, 2023 | 4:56 PM
ಕರ್ನಾಟಕದ ಮುಧೋಳ ಶ್ವಾನಗಳು ಸಾಕಷ್ಟು ಪ್ರಸಿದ್ಧಿ. ಈಗಾಗಲೆ ಈ ಶ್ವಾನಗಳು ದೇಶ ಸೇವೆ ಮಾಡುತ್ತಿವೆ. ಅದರಂತೆ ಇದೀಗ ಉತ್ತರ ಕನ್ನಡ ಜಿಲ್ಲೆಯ 17 ನಾಯಿ ಮರಿಗಳು ದೇಶ ಸೇವೆಗೆ ತೆರಳಿವೆ.
ಇದೀಗ ರಾಘವೇಂದ್ರ ಭಟ್ ಅವರು ಸಾಕಿದ್ದ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ಶ್ವಾನ ಮರಿಗಳನ್ನು ದೇಶ ಸೇವೆಗೆ ಕೊಂಡೊಯ್ಯಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ರಾಘವೇಂದ್ರ ಭಟ್ ಅವರು ಈ ಶ್ವಾನಗಳನ್ನು ಸಾಕಿದ್ದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಶ್ವಾನಗಳು ಅಸ್ಸಾಂಗೆ ಹೋಗಿವೆ.
ಸೇನೆಯ ಕಮಾಂಡರ್ ಮತ್ತು ಸೈನಿಕರು ಆಗಮಿಸಿ ಎಸಿ ಬಸ್‌ನಲ್ಲಿ ಶ್ವಾನಗಳನ್ನ ಕೊಂಡಯ್ಯದಿದ್ದಾರೆ.
45 ದಿನಗಳಿಂದ ಶ್ವಾನಗಳ ಆಹಾರ ಪದ್ಧತಿ, ಬುದ್ದಿಮಟ್ಟ, ಆರೋಗ್ಯ ಗಮನಿಸಿ ಸೇನೆಗೆ ಕೊಂಡಯ್ಯಲಾಗಿದೆ.
ರಾಘವೇಂದ್ರ ಭಟ್ ಅವರು ತಮ್ಮ ಪೇಸ್‌ಬುಕ್ ಪೇಜ್ನಲ್ಲಿ ಶ್ವಾನಗಳ ಕುರಿತು ಹಾಕಿದ್ದ ಪೋಸ್ಟ್ಗಳನ್ನು ಗಮನಿಸಿ ಕೊಂಡೊಯ್ಯಲು ಸೇನಾ ತಂಡ ತೀರ್ಮಾನ ಮಾಡಿತ್ತು.
ಒಂದು ಬೆಲ್ಜಿಯಂ ಮೆಲಿನೋಯ್ಸ್ ಶ್ವಾನದ ಮರಿ 80 ಸಾವಿರದಿಂದ 2 ಲಕ್ಷ ರೂ.ದವರೆಗೆ ಬೆಲೆ ಬಾಳುತ್ತದೆ.
ರಾಘವೇಂದ್ರ ಭಟ್ ಕಳೆದ 25 ವರ್ಷಗಳಿಂದ ಶ್ವಾನಗಳನ್ನ ಸಾಕುತ್ತಿದ್ದಾರೆ.
Published On - 4:54 pm, Fri, 16 June 23