- Kannada News Photo gallery Milana Actress Parvathy's Stunning Viral Photos: See Her Transformed Look Now
ಈಗ ಹೇಗಾಗಿದ್ದಾರೆ ನೋಡಿ ‘ಮಿಲನ’ ಸಿನಿಮಾ ನಟಿ ಪಾರ್ವತಿ; ಹೊಸ ಫೋಟೋಸ್ ವೈರಲ್
‘ಮಿಲನ’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ತೆರೆಹಂಚಿಕೊಂಡ ಪಾರ್ವತಿ ಮೆನನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ವಿಷಯದಲ್ಲಿ ಚ್ಯೂಸಿ ಆಗಿರೋ ಅವರು, ಅಲ್ಲೊಂದು, ಇಲ್ಲೊಂದು ಸಿನಿಮಾ ಮಾಡುತ್ತಾರೆ. ಈಗ ಅವರ ಹೊಸ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಆ ಫೋಟೋಗಳು ಇಲ್ಲಿವೆ.
Updated on: Feb 03, 2026 | 3:06 PM

ನಟಿ ಪಾರ್ವತಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ‘ಮಿಲನ’ ಸಿನಿಮಾ ನೋಡಿದ ಎಲ್ಲರಿಗೂ ಅವರ ಪರಿಚಯ ಇರುತ್ತದೆ. ಪುನೀತ್ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಈಗ ‘ಮಿಲನ’ ಸಿನಿಮಾ ನಾಯಕಿ ತುಂಬಾನೇ ಬದಲಾಗಿದ್ದಾರೆ.

‘ಮಿಲನ’ ಸಿನಿಮಾ ತೆರೆಗೆ ಬಂದಿದ್ದು 2007ರಲ್ಲಿ. ಅಂದರೆ, ಚಿತ್ರ ಬಂದು 20 ವರ್ಷಗಳು ಕಳೆಯುತ್ತಾ ಬಂದಿವೆ. ಈಗ ಅವರ ಹೊಸ ಫೋಟೋಗಳು ಗಮನ ಸೆಳೆದಿವೆ. ಈ ಫೋಟೋದಲ್ಲಿ ಅವರು ಮಿರಮಿರ ಮಿಂಚಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ಪಾರ್ವತಿ ಮೆನನ್ ಅವರು ಕಾರ್ಯಕ್ರಮ ಒಂದಕ್ಕಾಗಿ ಇತ್ತೀಚೆಗೆ ವೇದಿಕೆ ಏರಿದ್ದಾರೆ. ಈ ವೇದಿಕೆ ಮೇಲೆ ಕರಿ ಬಣ್ಣದ ಡ್ರೆಸ್ ಹಾಕಿ ಗಮನ ಸೆಳೆದಿದ್ದಾರೆ. ಪಾರ್ವತಿ ಮೆನನ್ ಅವರ ಲುಕ್ ಗಮನ ಸೆಳೆಯೋ ರೀತಿಯಲ್ಲಿ ಇದೆ.

ನಟಿಯರು ಲುಕ್ ಬಗ್ಗೆ ಸಾಕಷ್ಟು ಗಮನ ಹರಿಸುತ್ತಾರೆ. ಇದರಲ್ಲಿ ಕೊಂಚ ವ್ಯತ್ಯಾಸ ಆದರೂ ಟ್ರೋಲ್ಗೆ ಒಳಗಾಗಬೇಕಾಗುತ್ತದೆ. ಈಗ ನಟಿಯ ದೇಹದ ತೂಕ ಹೆಚ್ಚಿದ್ದಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಇದಕ್ಕೆ ಪಾರ್ವತಿ ತಲೆಕೆಡಿಸಿಕೊಂಡಿಲ್ಲ.

ಸಾಕಷ್ಟು ನಟಿಯರು ಬಾಡಿ ಶೇಮಿಂಗ್ ಸಂತ್ರಸ್ತೆ ಆದ ಉದಾಹರಣೆ ಇದೆ. ಆದರೆ, ಮಿಲನ ನಟಿ ಪಾರ್ವತಿ ಮಾತ್ರ ಈ ರೀತಿಯ ವಿಷಯಗಳಿಗೆ ಸೊಪ್ಪು ಹಾಕುವ ಯೋಚನೆಯನ್ನೂ ಮಾಡಿಲ್ಲ. ಅವರ ಕಟ್ಟಾಭಿಮಾನಿಗಳು ನಟಿಯನ್ನು ಹೊಗಳಿದ್ದಾರೆ.




