ರಘು ದೀಕ್ಷಿತ್, ವಾರಿಜಶ್ರೀ ಮದುವೆಯ ಸುಂದರ ಕ್ಷಣದ ಫೋಟೋಗಳು
ಪ್ರಸಿದ್ಧ ಗಾಯಕ ರಘು ದೀಕ್ಷಿತ್ ಅವರ 2ನೇ ಮದುವೆ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಇಂದು (ಅಕ್ಟೋಬರ್ 24) ನೆರವೇರಿದೆ. ಕುಟುಂಬದವರು, ಆಪ್ತರು, ಸ್ನೇಹಿತರು ಈ ವಿವಾಹ ಸಮಾರಂಭದದಲ್ಲಿ ಪಾಲ್ಗೊಂಡಿದ್ದಾರೆ. ರಘು ದೀಕ್ಷಿತ್ ಮತ್ತು ವಾರಿಜಶ್ರೀ ಅವರ ಮದುವೆಯ ಫೋಟೋಗಳು ಇಲ್ಲಿವೆ.
Updated on:Oct 24, 2025 | 5:37 PM

ಗಾಯಕಿ ವಾರಿಜಶ್ರೀ ಜೊತೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವರನ್ನು ಮಾತ್ರ ಈ ಮದುವೆಗೆ ಆಹ್ವಾನಿಸಲಾಗಿತ್ತು. ರಘು ದೀಕ್ಷಿತ್ ಮದುವೆಯ ಫೋಟೋಗಳು ಲಭ್ಯವಾಗಿವೆ.

ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಮೊದಲ ಪತ್ನಿ ಮಯೂರಿ ಉಪಾಧ್ಯಗೆ ರಘು ದೀಕ್ಷಿತ್ ವಿಚ್ಚೇದನ ನೀಡಿದ್ದಾರೆ. ಈಗ ರಘು ದೀಕ್ಷಿತ್, ವಾರಿಜಶ್ರೀ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ರಘು ದೀಕ್ಷಿತ್ ಅವರನ್ನು ಮದುವೆ ಆಗಿರುವ ವಾರಿಜಶ್ರೀ ಅವರು ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ. ಪರಸ್ಪರ ಪ್ರೀತಿಸಿ ಈಗ ಮದುವೆ ಆಗಿದ್ದಾರೆ. ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ.

ಯಮುನಾ ಶ್ರೀನಿಧಿ, ಅಯ್ಯೋ ಶ್ರದ್ಧಾ ಮುಂತಾದ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ಫೋಟೋಗೆ ಕಮೆಂಟ್ ಮಾಡುವ ಮೂಲಕ ಅಭಿಮಾನಿಗಳು ನವಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ವಾರಿಜಶ್ರೀ ಮತ್ತು ರಘು ದೀಕ್ಷಿತ್ ನಡುವೆ ವಯಸ್ಸಿನ ಅಂತರ ಇದೆ. ರಘು ದೀಕ್ಷಿತ್ ಅವರಿಗೆ ಈಗ 50 ವರ್ಷ ವಯಸ್ಸು. 34ರ ಪ್ರಾಯದ ವಾರಿಜಶ್ರೀ ವೇಣುಗೋಪಾಲ್ ಜತೆ ರಘು ದೀಕ್ಷಿತ್ ಅವರು ಮದುವೆ ಆಗಿದ್ದಾರೆ.
Published On - 5:34 pm, Fri, 24 October 25




