ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಸಬರಮತಿ ನದಿಯ ಪ್ರಸಿದ್ಧ ‘ಅಟಲ್ ಸೇತುವೆ’ಯನ್ನು (Atal Bridge) ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಉದ್ಘಾಟಿಸಿದರು.
1 / 6
ಎರಡು ದಿನಗಳ ಪ್ರವಾಸದ ಅಂಗವಾಗಿ ಗುಜರಾತ್ ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಹಮದಾಬಾದ್‌ನ ಸಬರಮತಿ ನದಿಯ ಮುಂಭಾಗದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸಲು ಅಟಲ್ ಸೇತುವೆಯನ್ನು ನಿರ್ಮಿಸಲಾಗಿದೆ.
2 / 6
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಲಾದ ಈ ಸೇತುವೆ ಪಾದಚಾರಿಗಳಿಗೆ ಮಾತ್ರ. ಸುಮಾರು ಸುಮಾರು 300 ಮೀಟರ್ ಉದ್ದ ಮತ್ತು ಮಧ್ಯದಲ್ಲಿ 14 ಮೀಟರ್ ಅಗಲವಿದೆ. ವಿಶೇಷ ವಿನ್ಯಾಸದೊಂದಿಗೆ ಇದನ್ನು ನಿರ್ಮಿಸಲಾಗಿದೆ.
3 / 6
ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಬರಮತಿ ನದಿಗೆ ನಿರ್ಮಿಸಲಾಗಿರುವ ಅಟಲ್ ಸೇತುವೆಗೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿದರು.
4 / 6
ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಿಂದ ರಿಮೋಟ್ ಕಂಟ್ರೋಲ್ ಸಹಾಯದಿಂದ ಅಟಲ್ ಸೇತುವೆಯನ್ನು ಉದ್ಘಾಟಿಸಿದರು. ಬಳಿಕ ಅಟಲ್ ಸೇತುವೆಗೆ ದಿಢೀರ್ ಭೇಟಿ ನೀಡಿದ್ದರು.
5 / 6
ಕಣ್ಮನ ಸೆಳೆಯುವ ವಿನ್ಯಾಸ ಮತ್ತು ಎಲ್ಇಡಿ ಲೈಟಿಂಗ್ ಹೊಂದಿರುವ ಈ ಸೇತುವೆ 2,600 ಮೆಟ್ರಿಕ್ ಟನ್ ಉಕ್ಕಿನ ಕೊಳವೆಗಳನ್ನು ಬಳಸಿ ನಿರ್ಮಿಸಲಾಗಿದೆ.