- Kannada News Photo gallery Rashmika Mandanna sheds tears of joy at the wedding with Vijay Deverakonda
ವಿಜಯ್ ದೇವರಕೊಂಡ ತಾಳಿ ಕಟ್ಟುವಾಗ ರಶ್ಮಿಕಾ ಮಂದಣ್ಣ ಆನಂದ ಭಾಷ್ಪ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಜಯ್ ದೇವರಕೊಂಡ ತಾಳಿ ಕಟ್ಟುವಾಗ ರಶ್ಮಿಕಾ ಮಂದಣ್ಣ ಅವರು ಆನಂದ ಭಾಷ್ಪ ಸುರಿಸಿದರು.
Updated on: Feb 26, 2026 | 10:24 PM

ರಾಜಸ್ಥಾನದ ಉದಯಪುರದಲ್ಲಿ ಇರುವ ಖಾಸಗಿ ಹೋಟೆಲ್ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ನಡೆದಿದೆ. ಫೆಬ್ರವರಿ 26ರಂದು ನಡೆದ ಈ ವಿವಾಹ ಸಮಾರಂಭದ ಫೋಟೋಗಳು ವೈರಲ್ ಆಗಿವೆ.

ರಶ್ಮಿಕಾ ಮಂದಣ್ಣ ಅವರು ಹಸೆಮಣೆಯಲ್ಲಿ ಕುಳಿತಾಗ ಭಾವುಕರಾದರು. ತಾಳಿ ಕಟ್ಟಿಸಿಕೊಳ್ಳುವ ಸಂದರ್ಭದಲ್ಲಿ ಅವರ ಕಣ್ಣುಗಳು ತುಂಬಿ ಬಂದವು. ರಶ್ಮಿಕಾ ಮಂದಣ್ಣ ಅವರ ಜೀವನದಲ್ಲಿ ಈ ದಿನ ಬಹಳ ಮಹತ್ವದ್ದಾಗಿದೆ.

ವಿಜಯ್ ದೇವರಕೊಂಡ ಅವರು ರಶ್ಮಿಕಾ ಜೀವನದಲ್ಲಿ ಅತಿ ಮುಖ್ಯ ವ್ಯಕ್ತಿ. ವೃತ್ತಿಬದುಕಿಗೆ ಬೆಂಬಲವಾಗಿ ನಿಂತ ಗೆಳೆಯನ ಜೊತೆಗೆ ದಾಂಪತ್ಯ ಜೀವನ ಆರಂಭಿಸಿದ ರಶ್ಮಿಕಾ ಅವರು ಹಸೆಮಣೆಯಲ್ಲಿ ಎಮೋಷನಲ್ ಆದರು.

ಸಿನಿಮಾದಲ್ಲಿ ಜೋಡಿಯಾಗಿದ್ದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ನಿಜ ಜೀವನದಲ್ಲೂ ಜೋಡಿಯಾಗಲಿ ಎಂಬುದು ಅಭಿಮಾನಿಗಳ ಬಯಕೆ ಆಗಿತ್ತು. ಅದರಂತೆಯೇ ಈಗ ಎಲ್ಲವೂ ನಡೆದಿದೆ.

ಕೆಲವೇ ಕೆಲವು ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ನಡೆದಿದೆ. ಇನ್ನುಳಿದ ಸ್ನೇಹಿತರಿಗಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲಾಗುವುದು.




