ಬಿಡುಗಡೆಗೆ ಸಜ್ಜಾಗಿದೆ ಅಣ್ಣ ತಂಗಿ ಬಾಂಧವ್ಯದ ಕಥೆ ಇರುವ ‘ಗಿಡುಗ’ ಸಿನಿಮಾ
ರತೀಶ್ ಕೂರ್ಗ್, ಭವಾನಿ, ಭಾನು ಮುಂತಾದವರು ನಟಿಸಿದ ‘ಗಿಡುಗ’ ಸಿನಿಮಾದ ಬಿಡುಗಡೆಗೆ ಸಜ್ಜಾಗಿದೆ. ಬೆಂಗಳೂರು, ಮಾಗಡಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲೇ ತೆರೆಕಾಣಿಸಲು ಚಿತ್ರತಂಡ ತಯಾರಾಗುತ್ತಿದೆ. ರಾಮಚಂದ್ರ ಕುಲಕರ್ಣಿ ಅವರು ಈ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ‘ಗಿಡುಗ’ ತಂಡದ ಬಗ್ಗೆ ಇಲ್ಲಿದೆ ಮಾಹಿತಿ..
Updated on: Nov 20, 2025 | 4:08 PM

‘ರಾಜ ರಾಣಿ ರೋರರ್ ರಾಕೆಟ್’ ಖ್ಯಾತಿಯ ಕೆಂಪೆಗೌಡ ಮಾಗಡಿ ಅವರು ‘ಗಿಡುಗ’ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಅವರೇ ಈ ಸಿನಿಮಾಗೆ ಬಂಡವಾಳ ಕೂಡ ಹೂಡಿದ್ದಾರೆ.

‘ಶ್ರೀ ಸಿನಿಮಾಸ್ ಬ್ಯಾನರ್’ ಮೂಲಕ ಈ ಚಿತ್ರ ಸಿದ್ಧವಾಗಿದೆ. ಸಂಕರ ನಾರಾಯಣ ನಂಬುದಿರಿ ಹಾಗೂ ವಿ.ಎ. ರತೀಶ್ ಹುದಿಕೇರಿ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ‘ದ ಹಂಟರ್’ ಎಂಬ ಅಡಿಬರಹ ಈ ಚಿತ್ರಕ್ಕಿದೆ.

ಈ ಸಿನಿಮಾದಲ್ಲಿ ಅಣ್ಣ-ತಂಗಿ ಬಾಂಧವ್ಯದ ಕಥೆ ಇದೆ ಎಂದು ಚಿತ್ರತಂಡ ಹೇಳಿದೆ. ಸೆಸ್ಪೆನ್ಸ್, ಮರ್ಡರ್ ಮಿಸ್ಟರಿ ಅಂಶಗಳು ಕೂಡ ಇವೆ. ರತೀಶ್ ಕೂರ್ಗ್ ಅವರು ಈ ಚಿತ್ರಕ್ಕೆ ಹೀರೋ. ತಂಗಿಯಾಗಿ ಭವಾನಿ ಅಭಿನಯಿಸಿದ್ದಾರೆ.

ಭಾನು, ಮೋಹನ್, ರೇವಣ್ಣ ಮಾಗಡಿ, ಚಾಮರಾಜು, ಚೆನ್ನಬಸವ, ಕಿಶೋರ್, ಸಂಜೀವ್, ಮಾಸ್ಟರ್ ಪುನೀತ್. ಮಾಸ್ಟರ್ ಹೃದಯನ್ ಗೌಡ ಮುಂತಾದವರು ‘ಗಿಡುಗ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ವಿನ್ಸೆಂಟ್ ಮುಕೇಶ್ ಸಂಗೀತ ನೀಡಿದ್ದಾರೆ. ದೀಪು ಅರಸಿಕೆರೆ, ಸಂಗಮೇಶ್, ರವಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಆದಿ ಆದರ್ಶ್ ಸಂಕಲನ ಮಾಡಿದ್ದಾರೆ. ಮಾರುತಿ ಮಾಗಡಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕೆ.




