- Kannada News Photo gallery Samantha Ruth Prabhu and Raj Nidimoru marriage photo from Isha Foundation
ತುಂಬಾ ಸರಳವಾಗಿ ನಡೆಯಿತು ಸಮಂತಾ ಮದುವೆ: ಫೋಟೋ ಗ್ಯಾಲರಿ ನೋಡಿ..
ಖ್ಯಾತ ನಟಿ ಸಮಂತಾ ಅವರು ನಿರ್ದೇಶಕ ರಾಜ್ ನಿಡಿಮೋರು ಜೊತೆ ಮದುವೆ ಆಗಿದ್ದಾರೆ. ಬಹಳ ಸರಳವಾಗಿ ವಿವಾಹ ಶಾಸ್ತ್ರ ನಡೆದಿದೆ. ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋ ಗ್ಯಾಲರಿ ಇಲ್ಲಿದೆ ನೋಡಿ..
Updated on: Dec 01, 2025 | 8:51 PM

ಪರಸ್ಪರ ಪ್ರೀತಿಸಿ ರಾಜ್ ನಿಡಿಮೋರು ಮತ್ತು ಸಮಂತಾ ರುತ್ ಪ್ರಭು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಸರಳ ವಿವಾಹ ಸಮಾರಂಭದ ಫೋಟೋಗಳು ಲಭ್ಯವಾಗಿವೆ.

ಇಷ್ಟು ದಿನಗಳ ಕಾಲ ಸಮಂತಾ ಹಾಗೂ ರಾಜ್ ನಿಡಿಮೋರು ಬಗ್ಗೆ ಗಾಸಿಪ್ ಕೇಳಿಬರುತ್ತಿತ್ತು. ಇಂದು (ಡಿ.1) ಮದುವೆ ಆಗುವ ಮೂಲಕ ಎಲ್ಲ ಅಂತೆ-ಕಂತೆಗಳಿಗೆ ಸಮಂತಾ ಮತ್ತು ರಾಜ್ ಪೂರ್ಣ ವಿರಾಮ ಇಟ್ಟಿದ್ದಾರೆ.

ಕೆಲವೇ ಕೆಲವು ಆಪ್ತರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಮದುವೆಯಲ್ಲಿ ಊಟ ಕೂಡ ಬಹಳ ಸರಳವಾಗಿತ್ತು. ಈ ಎಲ್ಲ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ತಮಿಳುನಾಡಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ನಲ್ಲಿ ಸಮಂತಾ, ರಾಜ್ ಮದುವೆ ಆಗಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಕಮೆಂಟ್ಗಳ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.

‘ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ಹಾಗೂ ರಾಜ್ ನಿಡಿಮೋರು ಅವರು ಒಟ್ಟಿಗೆ ಕೆಲಸ ಮಾಡಿದ್ದರು. ಆ ಬಳಿಕ ಅವರಿಬ್ಬರ ನಡುವೆ ಆಪ್ತತೆ ಬೆಳೆಯಿತು. ಜೊತೆಯಾಗಿ ಈಗ ಹೊಸ ಜೀವನ ಆರಂಭಿಸಿದ್ದಾರೆ.




