- Kannada News Photo gallery Sanya Iyer And Samarjit Lankesh Starrer Gowri Movie team come with New Photoshoot
ಪ್ರೇಮಿಗಳ ದಿನದ ಸಂದರ್ಭದಲ್ಲಿ ಹೊಸ ಫೋಟೋಶೂಟ್ನಲ್ಲಿ ಮಿಂಚಿದ ಸಾನ್ಯಾ ಅಯ್ಯರ್-ಸಮರ್ಜಿತ್
ಪ್ರೇಮಿಗಳ ದಿನ ಸಮೀಪಿಸಿದೆ. ಈ ಕಾರಣಕ್ಕೆ ಇತ್ತೀಚೆಗೆ ಸಮರ್ಜಿತ್ ಹಾಗೂ ಸಾನ್ಯಾ ಅಯ್ಯರ್ ‘ಬುಕ್ ಮೈ ಕ್ಯಾಪ್ಚರ್’ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕೆನಡಾದ ಖ್ಯಾತ ಛಾಯಾಗ್ರಾಹಕ ರೋಹಿತ್ ಅವರು ಈ ಶೂಟ್ ಮಾಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
Updated on: Feb 13, 2024 | 8:44 AM

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹಲವು ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದಾರೆ. ಈಗ ಅವರ ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಗೌರಿ’ ಸಿನಿಮಾ ಅವರ ಮೊದಲ ಚಿತ್ರವಾಗಿದ್ದು, ಸಾನ್ಯಾ ಅಯ್ಯರ್ ನಾಯಕಿ ಆಗಿ ನಟಿಸಿದ್ದಾರೆ.

ಪ್ರೇಮಿಗಳ ದಿನ ಸಮೀಪಿಸಿದೆ. ಈ ಕಾರಣಕ್ಕೆ ಇತ್ತೀಚೆಗೆ ಸಮರ್ಜಿತ್ ಹಾಗೂ ಸಾನ್ಯಾ ಅಯ್ಯರ್ ‘ಬುಕ್ ಮೈ ಕ್ಯಾಪ್ಚರ್’ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕೆನಡಾದ ಖ್ಯಾತ ಛಾಯಾಗ್ರಾಹಕ ರೋಹಿತ್ ಅವರು ಈ ಶೂಟ್ ಮಾಡಿದ್ದಾರೆ.

ಈ ಜೋಡಿಗೆ ಮೇಕಪ್ ಮಾಡಿದ್ದು ಗೌರಿ ಕಪೂರ್. ಅವರು ಬಾಲಿವುಡ್ನ ದೀಪಿಕಾ ಪಡುಕೋಣೆ ಸೇರಿ ಅನೇಕ ಸೆಲೆಬ್ರಿಟಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಸಾನ್ಯಾ ಹಾಗೂ ಸಮರ್ಜಿತ್ ಫೋಟೋಗಳು ಗಮನ ಸೆಳೆಯುತ್ತಿವೆ.

‘ಗೌರಿ’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಇತ್ತೀಚೆಗೆ ಸಾನ್ಯಾ ಅವರು ಡಬ್ಬಿಂಗ್ ಕೆಲಸ ಕೂಡ ಪೂರ್ಣಗೊಳಿಸಿದ್ದಾರೆ ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ಬಿಗ್ ಬಾಸ್ ಟಿವಿ ಸೀಸನ್ ಮೂಲಕ ಸಾನ್ಯಾ ಖ್ಯಾತಿ ಹೆಚ್ಚಿಸಿಕೊಂಡರು.

‘ಗೌರಿ’ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಗನನ್ನು ಪರಿಚಯಿಸುವ ಜವಾಬ್ದಾರಿಯನ್ನು ಅವರೇ ತೆಗೆದುಕೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ಪತ್ನಿ ಅರ್ಪಿತಾ ಬಂಡವಾಳ ಹೂಡಿದ್ದಾರೆ.

ಸಾನ್ಯಾ ಅಯ್ಯರ್ ಕಿರುತೆರೆ ಮೂಲಕ ಫೇಮಸ್ ಆದವರು. ಅವರು ಈಗ ಸಮರ್ಜಿತ್ ಜೊತೆ ಮೊದಲ ಬಾರಿಗೆ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಶೀಘ್ರವೇ ಸಿನಿಮಾ ರಿಲೀಸ್ ಆಗಲಿದೆ.




