ಗಾಜನೂರಿನಲ್ಲಿ ದೀಪಾವಳಿ ಆಚರಿಸಿದ ಶಿವರಾಜ್ ಕುಮಾರ್, ಇಲ್ಲಿವೆ ಚಿತ್ರಗಳು
Shiva Rajkumar: ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ಗಾಜನೂರಿಗೆ ಹೋಗಿ ಅಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ. ಶಿವಣ್ಣ, ಅಲ್ಲಿ ತಮ್ಮ ಸಂಬಂಧಿಗಳನ್ನು ಭೇಟಿಯಾಗಿದ್ದಾರೆ.

- ಶಿವರಾಜ್ ಕುಮಾರ್ ಅವರು ನಗರದ ಜಂಜಾಟಗಳಿಂದ ದೂರಾಗಿ ತಮ್ಮ ಮೂಲ ಊರಾದ ಗಾಜನೂರಿಗೆ ಹೋಗಿ ಅಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ.
- ಗಾಜನೂರಿಗೆ ಹೋಗಿ ಅಲ್ಲ ತಮ್ಮ ಅಜ್ಜಿಯನ್ನು ಭೇಟಿ ಮಾಡಿದ್ದಾರೆ. ಅಜ್ಜಿಯೊಟ್ಟಿಗೆ ಮಾತನಾಡಿದ್ದಾರೆ. ಅವರನ್ನು ಅಪ್ಪಿಕೊಂಡು ಅವರಿಂದ ಆಶೀರ್ವಾದ ಪಡೆದಿದ್ದಾರೆ.
- ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿದ್ದಾರೆ. ಗಾಜನೂರಿಗೆ ಹೋದಾಗಲೆಲ್ಲ ದೇವಾಲಯಕ್ಕೆ ಹೋಗುವುದು ತಪ್ಪಿಸಿಕೊಳ್ಳಲ್ಲ ಶಿವಣ್ಣ.
- ಗಾಜನೂರಿನ ತಮ್ಮ ಹಳೆಯ ಮನೆಯಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ ಶಿವರಾಜ್ ಕುಮಾರ್, ಅಲ್ಲಿ ತಮ್ಮ ಹಿರಿಕರ ಫೋಟೊಗಳಿಗೆ ಪೂಜೆ ಮಾಡಿದ್ದಾರೆ.
- ಗಾಜನೂರಿನ ಹಳೆಯ ಮನೆಯಲ್ಲಿರುವ ತಮ್ಮ ಅಪ್ಪಾಜಿಯವರ ಚಿತ್ರಗಳು, ಚಿಕ್ಕಪ್ಪನ ಚಿತ್ರಗಳು. ತಾತನ ಚಿತ್ರಗಳು ಎಲ್ಲವನ್ನೂ ನೋಡಿ ಖುಷಿ ಪಟ್ಟಿದ್ದಾರೆ.
- ಗಾಜನೂರಿನಲ್ಲಿ ತಮ್ಮ ಕೆಲವು ಹಳೆ ಗೆಳೆಯರನ್ನು ಸಹ ಭೇಟಿ ಆಗಿದ್ದಾರೆ. ತಮ್ಮ ಸಂಬಂಧಿಗಳನ್ನು, ಅವರ ಮಕ್ಕಳನ್ನು ಸಹ ಭೇಟಿ ಆಗಿದ್ದಾರೆ ಶಿವಣ್ಣ.
- ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಆಗಾಗ್ಗೆ ಗಾಜನೂರಿಗೆ ಹೋಗುತ್ತಲೇ ಇರುತ್ತಾರೆ. ಇಂದಿಗೂ ಸಹ ದೊಡ್ಮನೆಯ ಮಂದಿಗೆ ಗಾಜನೂರಿನ ಮೇಲೆ ವಿಶೇಷ ಪ್ರೀತಿ.