ಪ್ರಯಾಣಿಕರ ಗಮನಕ್ಕೆ: ಬೆಂಗಳೂರಿನಿಂದ ಮಡಗಾಂವ್, ಕಾರವಾರಕ್ಕೆ ವಿಶೇಷ ರೈಲು
ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯು ಏಖಮುಖವಾಗಿ ಎರಡು ವಿಶೇಷ ರೈಲುಗಳುನ್ನು ಓಡಿಸಲು ನಿರ್ಧರಿಸಿದೆ. ಮಡಗಾಂವ್-ಬೆಂಗಳೂರು ಮತ್ತು ಕಾರವಾರ-ಬೆಂಗಳೂರು ಮಧ್ಯೆ ವಿಶೇಷ ರೈಲು ಓಡಿಸಲಾಗುತ್ತದೆ.
Updated on: Jul 30, 2024 | 8:06 AM

ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯು ಏಖಮುಖವಾಗಿ ಎರಡು ವಿಶೇಷ ರೈಲುಗಳುನ್ನು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 01696 ಮಡಗಾಂವ್-ಕೆಎಸ್ಆರ್ ಬೆಂಗಳೂರು ವಿಶೇಷ ರೈಲು ಮಡಗಾಂವ್ ರೈಲು ನಿಲ್ದಾಣದಿಂದ ಜುಲೈ 30 ರಂದು ಸಾಯಂಕಾಲ 4:30ಕ್ಕೆ ಹೊರಡಲಿದ್ದು, ಮರುದಿನ ಜುಲೈ 31ರ ಸಾಯಂಕಾಲ 5:30ಕ್ಕೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.

ರೈಲು ಸಂಖ್ಯೆ 01656 ಕಾರವಾರ-ಯಶವಂತಪುರ ವಿಶೇಷ ರೈಲು ಜುಲೈ 31 ರಂದು ಕಾರವಾರ ರೈಲು ನಿಲ್ದಾಣದಿಂದ ಬೆಳಗ್ಗೆ 5:30ಕ್ಕೆ ಹೊರಟು ಮರುದಿನ ಆಗಸ್ಟ್ 1 ರಂದು ಮಧ್ಯರಾತ್ರಿ 2:15ಕ್ಕೆ ತಲುಪಲಿದೆ.

ಇತ್ತೀಚಿಗೆ ಆರಂಭವಾಗದ ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ರೈಲು ಸಂಖ್ಯೆ 22231 ಕಲಬುರಗಿ- ಎಸ್ಎಮ್ವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್, ಆಗಸ್ಟ್ 6 ರಂದು ಕಲಬುರಗಿಯಿಂದ ಹೊರಟು ಅನಂತಪುರ, ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಬೆಂಗಳೂರು ತಲುಪಲಿದೆ.

ರೈಲು ಸಂಖ್ಯೆ 22232 ಎಸ್ಎಮ್ವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್, ಆಗಸ್ಟ್ 11, 2024 ರಂದು ಬೆಂಗಳೂರಿನಿಂದ ಹೊರಟು ಯಲಹಂಕ, ಪೆನುಕೊಂಡ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮಾವರಂ ಮತ್ತು ಅನಂತಪುರ ನಿಲ್ದಾಣಗಳ ಮೂಲಕ ಕಲಬುರಗಿಗೆ ಬಂದು ತಲುಪಲಿದೆ.

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.
Read More




