ಇಂಥ ಕೆಲಸಕ್ಕೆ ಕರ್ನಾಟಕ ಭವನವನ್ನು ಬಳಸಿಕೊಂಡಿದ್ದು ತಪ್ಪು: ಶಾಸಕ ಯತೀಂದ್ರ ಸಿದ್ದರಾಮಯ್ಯ ಗರಂ

ಇಂಥ ಕೆಲಸಕ್ಕೆ ಕರ್ನಾಟಕ ಭವನವನ್ನು ಬಳಸಿಕೊಂಡಿದ್ದು ತಪ್ಪು. ಬಿಜೆಪಿ ವರಿಷ್ಠರು ಈ ಬಗ್ಗೆ‌ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದರು.

  • TV9 Web Team
  • Published On - 21:27 PM, 2 Mar 2021
ಇಂಥ ಕೆಲಸಕ್ಕೆ ಕರ್ನಾಟಕ ಭವನವನ್ನು ಬಳಸಿಕೊಂಡಿದ್ದು ತಪ್ಪು: ಶಾಸಕ ಯತೀಂದ್ರ ಸಿದ್ದರಾಮಯ್ಯ ಗರಂ
ಯತೀಂದ್ರ ಸಿದ್ದರಾಮಯ್ಯ (ಎಡಚಿತ್ರ)

ಮೈಸೂರು: ರಮೇಶ್ ಜಾರಕಿಹೊಳಿ ಸೆಕ್ಸ್​​ ವಿಡಿಯೋ ಬಯಲಾಗುತ್ತಿದ್ದಂತೆ ಸಚಿವರು ಜಿಲ್ಲೆಯಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿವಾಹ ಆರತಕ್ಷತೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಸಚಿವ ಸಿಡಿ ಪ್ರಸಾರವಾಗುತ್ತಿದ್ದಂತೆ ಜಲದರ್ಶಿನಿ ಅತಿಥಿಗೃಹದಿಂದ ಖಾಸಗಿ ಕಾರಿನಲ್ಲಿ ನಿರ್ಗಮಿಸಿದ್ದಾರೆ. ತಮ್ಮ ಗನ್ ಮ್ಯಾನ್​ಗಳನ್ನು ಬಿಟ್ಟು ತೆರಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತರಾತುರಿಯಲ್ಲಿ ಸಚಿವ ರಮೇಶ್ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

‘ಇಂಥ ಕೆಲಸಕ್ಕೆ ಕರ್ನಾಟಕ ಭವನವನ್ನು ಬಳಸಿಕೊಂಡಿದ್ದು ತಪ್ಪು’
ಸಚಿವ ರಮೇಶ್ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ಮಂತ್ರಿಗಿರಿಗೆ ರಾಜೀನಾಮೆ ನೀಡಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇಂತಹ ಪ್ರಕರಣದಲ್ಲಿ ಬಿಜೆಪಿಯವರು ರಾಜೀನಾಮೆ ಕೇಳಿದ್ರು. ಇದೀಗ ಅವರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಪಡೀಬೇಕು’ ಎಂದು ಆಗ್ರಹಿಸಿದ್ದಾರೆ.

ಜೊತೆಗೆ, ಇಂಥ ಕೆಲಸಕ್ಕೆ ಕರ್ನಾಟಕ ಭವನವನ್ನು ಬಳಸಿಕೊಂಡಿದ್ದು ತಪ್ಪು. ಬಿಜೆಪಿ ವರಿಷ್ಠರು ಈ ಬಗ್ಗೆ‌ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದರು.

‘ನಾನು ಮದುವೆಗೆ ಬಂದಿದ್ದೇನೆ, ನನಗೆ ವಿಚಾರ ಗೊತ್ತಿಲ್ಲ’
ಅತ್ತ, ನಾನು ಮದುವೆಗೆ ಬಂದಿದ್ದೇನೆ ನನಗೆ ವಿಚಾರ ಗೊತ್ತಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್​​ ವಿಡಿಯೋ ಬಗ್ಗೆ ಸಿಎಂ‌ ಪುತ್ರ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದರು. ಬಹಳ ಹೊತ್ತಿನಿಂದ ನಾನು ಮದುವೆಯಲ್ಲೇ ಇದ್ದೇನೆ. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ಏನಾಗಿದೆ ನೋಡ್ತೇನೆ. ಸದ್ಯಕ್ಕೆ ನನಗೆ ಈ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

‘ನೋಡೋಣ ಎಲ್ಲ ಡೀಟೇಲ್ ಬರಲಿ.. ರಮೇಶ್ ಜಾರಕಿಹೊಳಿ ಇನ್ನು ಸ್ಟೇಟ್‌ಮೆಂಟ್ ಕೊಟ್ಟಿಲ್ಲ’
ಇತ್ತ, ನೋಡೋಣ ಎಲ್ಲ ಡೀಟೇಲ್ ಬರಲಿ. ಇನ್ನು ರಮೇಶ್ ಜಾರಕಿಹೊಳಿ ಸ್ಟೇಟ್‌ಮೆಂಟ್ ಕೊಟ್ಟಿಲ್ಲ. ಆ ಹೆಣ್ಣುಮಗಳು ಏನೂ ಹೇಳಿಲ್ಲ. ಎಲ್ಲಾ ಸತ್ಯಾಸತ್ಯತೆ ಹೊರ ಬರಲಿ. ಆ ನಂತರ ನಾನು ಪ್ರತಿಕ್ರಿಯೆ ನೀಡುವೆ ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು.

ನೈತಿಕ ಹೊಣೆ ಹೊರಬೇಕು ನಿಜ. ಆದರೆ ಅವರು ಮಾತನಾಡದೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ. ನನ್ನ ನಿಲುವು ಅಷ್ಟೇ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಗೋಕಾಕ್​ನಲ್ಲಿ ವಿದ್ಯುತ್ ಮರುಪೂರೈಕೆ
ಈ ಮಧ್ಯೆ, ರಮೇಶ್ ಜಾರಕಿಹೊಳಿ ಸೆಕ್ಸ್​​ ವಿಡಿಯೋ ಪ್ರಸಾರ ಆಗುತ್ತಿದ್ದಂತೆ ಸಚಿವರ ತವರೂರಲ್ಲಿ ವಿದ್ಯುತ್ ಕಡಿತವಾಗಿತ್ತು. ಇದೀಗ, ಗೋಕಾಕ್ ತಾಲೂಕಿನಾದ್ಯಂತ ವಿದ್ಯುತ್ ಮರುಪೂರೈಕೆ ಆಗಿದೆ. ಸಿಬ್ಬಂದಿ ವಿದ್ಯುತ್ ಮರುಪೂರೈಕೆ ಮಾಡಿದ್ದಾರೆ.

ಇದನ್ನೂ ಓದಿ: ‘ಸಂತ್ರಸ್ತೆ ಕುಟುಂಬ ಬಹಳ ಭಯದಲ್ಲಿ ಬದುಕುತ್ತಿದ್ದಾರೆ; ಅಧಿವೇಶನದ ಸಂದರ್ಭವೆಂದು ನಾನು ದೂರು ನೀಡಿಲ್ಲ’

ಇದನ್ನೂ ಓದಿ: ‘ಇದು ಪಕ್ಷಕ್ಕೆ ಮುಜುಗರ ತರುವ ಸನ್ನಿವೇಶ, BJPಯಲ್ಲಿ ಇಂಥದ್ದು ಸಹಿಸಲ್ಲ.. ತಪ್ಪು ಸಾಬೀತಾದ್ರೆ ಕ್ರಮ ಖಚಿತ’