Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆಯಲ್ಲೇ ಮುನ್ನಲೆಗೆ ಬಂದ ರಾಮನಗರ ರಾಮಮಂದಿರ, ಬಿಜೆಪಿಗೆ ಟಾಂಗ್

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂಬಂಧ ಪರ-ವಿರೋಧ ಚರ್ಚೆಗಳು ನಡೆದಿವೆ. ಮತ್ತೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯೆ ರಾಮನರದ ರಾಮಮಂದಿರ ಮುನ್ನಲೆಗೆ ಬಂದಿದೆ. ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಈ ಬಗ್ಗೆ ಪ್ರಸ್ತಾಪಿಸಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆಯಲ್ಲೇ ಮುನ್ನಲೆಗೆ ಬಂದ ರಾಮನಗರ ರಾಮಮಂದಿರ, ಬಿಜೆಪಿಗೆ ಟಾಂಗ್
ಇಕ್ಬಾಲ್ ಹುಸೇನ್, ರಾಮನಗರ ಕಾಂಗ್ರೆಸ್ ಶಾಸಕ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 12, 2024 | 10:17 PM

ರಾಮನಗರ, (ಜನವರಿ 12): ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಉದ್ಘಾಟನೆಯಾಗಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ. ಮತ್ತೊಂದೆಡೆ ಈ ರಾಮಮಂದಿರ ರಾಜಕೀಯ ಸ್ವರೂಪಪಡೆದುಕೊಂಡಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಇದರ ಮಧ್ಯೆ ಇದೀಗ ರಾಮನಗರದ (Ramanagara)ರಾಮಮಂದಿರ ನಿರ್ಮಾಣ ಮುನ್ನಲೆಗೆ ಬಂದಿದೆ.

ರಾಮನಗರದಲ್ಲಿ ಬೃಹತ್ ರಾಮಮಂದಿರ ನಿರ್ಮಾಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಇಕ್ಬಾಲ್‌ ಹುಸೇನ್, ರಾಮನಗರದ ರಾಮದೇವರಬೆಟ್ಟದಲ್ಲಿ ರಾಮಮಂದಿರ‌ ನಿರ್ಮಾಣವಾಗಲಿದೆ. ಕ್ಯಾಬಿನೆಟ್ ನಲ್ಲೂ ರಾಮಮಂದಿರ‌ ಕುರಿತಂತೆ ಚರ್ಚೆ ಆಗಿದ್ದು, ಮೂರು ದಿನದಲ್ಲಿ‌ ಮಂದಿರ ನಿರ್ಮಾಣ ಕುರಿತ ಸಭೆ ನಡೆಯಲಿದೆ. ರಾಮೋತ್ಸವಕ್ಕೂ ಸಿದ್ಧತೆ ನಡೆಯುತ್ತಿದೆ. ದಿನಾಂಕವನ್ನೂ ಘೋಷಣೆ ಮಾಡುತ್ತೇವೆ ಎಂದರು. ಈ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತೇನೆ: ಸಿದ್ದರಾಮಯ್ಯ

ಇನ್ನು ಇದೇ ವೇಳೆ ಅಯೋಧ್ಯೆ ರಾಮಮಂದಿರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರ ಗೈರಿಗೆ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ರಾಮನ ವಿಚಾರ ಹೊಸದು. ನಮಗಲ್ಲ. ಈ ಮಣ್ಣಿನಲ್ಲಿ ಎಲ್ಲಾ ಧರ್ಮಕ್ಕೂ ಗೌರವವಿದೆ. ಆದ್ರೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ತಿರುಗೇಟು ನೀಡಿದರು.

ಬಜೆಟ್​ನಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಘೋಷಣೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ 2023-24ನೇ ಸಾಲಿನ ರಾಜ್ಯ ಬಜೆಟ್‌ (Karnataka Budget 2023) ಮಂಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ರಾಮನಗರದ ರಾಮದೇವರ ಬೆಟ್ಟದಲ್ಲಿ ಒಂದು ಭವ್ಯವಾದ ರಾಮಮಂದಿರವನ್ನು (Ram Mandir) ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು.

ಈ ಹಿಂದೆ ಸಚಿವ ಅಶ್ವಥ್‌ ನಾರಾಯಣ (Ashwath Narayan) ಅವರು, ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ಲಾನ್‌ ಮಾಡಲಾಗಿದೆ ಎಂದು ತಿಳಿಸಿದ್ದರು. ಅದರಂತೆ ಬಜೆಟ್‌ನಲ್ಲಿ, ರಾಮಮಂದಿರ ನಿರ್ಮಾಣ ಕುರಿತು ಪ್ರಸ್ತಾಪಿಸಲಾಗಿತ್ತು. ಇದೀಗ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಮನಗರದ ರಾಮಮಂದಿರದ ಸುದ್ದಿ ಮುನ್ನಲೆಗೆ ಬಂದಿದೆ. ಅದು ಕಾಂಗ್ರೆಸ್ ಶಾಸಕ ಈ ವಿಚಾರವನ್ನು ಎತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು?
ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು?
Daily Horoscope: ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ
Daily Horoscope: ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ
ಧ್ರುವ ಸರ್ಜಾ ಫ್ಯಾನ್ಸ್ ರೀತಿಯೇ ಪ್ರಥಮ್ ಅಭಿಮಾನಿಗಳಿಂದ ವಿಚಿತ್ರ ಹಾಡು
ಧ್ರುವ ಸರ್ಜಾ ಫ್ಯಾನ್ಸ್ ರೀತಿಯೇ ಪ್ರಥಮ್ ಅಭಿಮಾನಿಗಳಿಂದ ವಿಚಿತ್ರ ಹಾಡು
ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ: ಡಿಕೆ ಶಿವಕುಮಾರ್
ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ: ಡಿಕೆ ಶಿವಕುಮಾರ್