ಭಾರತದ ಬ್ರಹ್ಮಾಸ್ತ್ರ ಈ ‘ಸ್ಪೆಷಲ್ ಫೋರ್ಸ್ 22’ ಹೇಗೆ ಕಾರ್ಯ ನಿರ್ವಹಿಸುತ್ತೆ ಗೊತ್ತಾ ?
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಮತ್ತೆ ಗಡಿ ತಂಟೆ ವಿವಾದ ಭುಗಿಲೇಳುತ್ತಿದೆ. ಇದಕ್ಕೆ ಕಾರಣ ಮತ್ತೊಮ್ಮೆ ಗಡಿ ಉಲ್ಲಂಘನೆ ಮಾಡಲು ಸ್ಕೇಚ್ ಹಾಕಿದ್ದ ದುರುಳ ಚೀನಾಕ್ಕೆ ಚಳ್ಳೇ ಹಣ್ಣು ತಿನ್ನಿಸಿರುವ ಭಾರತದ ವಿಶೇಷ ಸೇನಾ ಪಡೆ. ಈ ಪಡೆಯ ಯೋಧರು ಈಗ ಕೋಟ್ಯಾಂತರ ಭಾರತೀಯರ ಪಾಲಿಗೆ ಹೀರೋಗಳಾಗಿ ಪರಿಣಮಿಸಿದ್ದಾರೆ. ಯಾರು ಈ ವಿಶೇಷ ಸೇನಾ ಪಡೆ 22 ? ಹಾಗಾದ್ರೆ ಭಾರತಕ್ಕೆ ಬಲ ತಂದುಕೊಟ್ಟ ಈ ವಿಶೇಷ ಪಡೆ ಯಾವುದು? ಅದು ಹೇಗೆ ಕಾರ್ಯನಿರ್ವಹಿಸುತ್ತೆ? ಇದು […]
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಮತ್ತೆ ಗಡಿ ತಂಟೆ ವಿವಾದ ಭುಗಿಲೇಳುತ್ತಿದೆ. ಇದಕ್ಕೆ ಕಾರಣ ಮತ್ತೊಮ್ಮೆ ಗಡಿ ಉಲ್ಲಂಘನೆ ಮಾಡಲು ಸ್ಕೇಚ್ ಹಾಕಿದ್ದ ದುರುಳ ಚೀನಾಕ್ಕೆ ಚಳ್ಳೇ ಹಣ್ಣು ತಿನ್ನಿಸಿರುವ ಭಾರತದ ವಿಶೇಷ ಸೇನಾ ಪಡೆ. ಈ ಪಡೆಯ ಯೋಧರು ಈಗ ಕೋಟ್ಯಾಂತರ ಭಾರತೀಯರ ಪಾಲಿಗೆ ಹೀರೋಗಳಾಗಿ ಪರಿಣಮಿಸಿದ್ದಾರೆ.
ಯಾರು ಈ ವಿಶೇಷ ಸೇನಾ ಪಡೆ 22 ? ಹಾಗಾದ್ರೆ ಭಾರತಕ್ಕೆ ಬಲ ತಂದುಕೊಟ್ಟ ಈ ವಿಶೇಷ ಪಡೆ ಯಾವುದು? ಅದು ಹೇಗೆ ಕಾರ್ಯನಿರ್ವಹಿಸುತ್ತೆ? ಇದು ಆರಂಭವಾಗಿದ್ದು ಯಾವಾಗ? ಈ ಎಲ್ಲ ಪ್ರಶ್ನೆಗಳು ಈಗ ಭಾರತೀಯರನ್ನು ಕಾಡುತ್ತಿವೆ. ಇಲ್ಲಿದೆ ನೋಡಿ ಈ ವಿಶೇಷ ಪಡೆಯ ಕಿರು ಪರಿಚಯ. 1962ರಲ್ಲಿ ಆರಂಭವಾಯಿತು ಸ್ಪೇಷಲ್ ಫ್ರಂಟೀಯರ್ ಫೋರ್ಸ್ ಸ್ಪೇಷಲ್ ಫ್ರಂಟೀಯರ್ ಫೋರ್ಸ್ ಅಥವಾ ಎಸ್ಟಾಬ್ಲಿರ್ಶಮೆಂಟ್ 22 ಅಥವಾ ವಿಕಾಸ್ ಬಟಾಲಿಯನ್ ಎಂದೇ ಖ್ಯಾತಿಯಾಗಿರುವ ಈ ವಿಶೇಷ ಪಡೆ ಆರಂಭವಾಗಿದ್ದು 1962ರಲ್ಲಿ. ಚೀನಾದೊಂದಿಗಿನ ಆ ಯುದ್ಧದಲ್ಲಿ ಸೋಲುನುಭವಿಸಿದ ನಂತರ ಭಾರತ ರೆಡ್ ಡ್ರಾಗನ್ ಕಂಟ್ರೋಲ್ ಮಾಡಲು ವಿಶೇಷ ತಂಡ ರಚಿಸಿತು. ಅದರ ಫಲವೇ ಈ ಎಸ್ಟಾಬ್ಲಿಶ್‌ಮೆಂಟ್ 22 ಅಥವಾ ಸ್ಪೆಷಲ್ ಫ್ರಂಟೀಯರ್ ಫೋರ್ಸ್. ಟಿಬೇಟಿಯನ್ ಮತ್ತು ಗೋರ್ಖಾ ರೈಫಲ್ಸ್ ರೆಜಿಮೆಂಟ್ಸ್‌ಗಳಿಂದ ಮಾತ್ರ ಆಯ್ಕೆ ಅಂದಿನ ಮೌಂಟೇನ್ ರೆಜಿಮೆಂಟ್ 22ರ ಮುಖ್ಯಸ್ಥರಾಗಿದ್ದ ಮೇಜರ್ ಜನರ್ ಸುಜನ್ ಸಿಂಗ್ ಉಬನ್ ಇದರ ಮೊದಲು ಮುಖ್ಯಸ್ಥ. ಈ ವಿಶೇಷ ಸೇನಾ ಪಡೆಯನ್ನು ಟಿಬೇಟಿಯನ್ ಮತ್ತು ಗೋರ್ಖಾ ರೈಫಲ್ಸ್‌ಗಳಿಂದ ಮಾತ್ರ ರೆಜಿಮೆಂಟ್‌ಗೆ ಯೋಧರನ್ನು ನೇಮಿಸಿಕೊಳ್ಳಲಾಗುತ್ತೆ. ಅದ್ರಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿ ಪರಿಣಿತಿ ಹೊಂದಿದವರನ್ನೇ ನೇಮಕಾತಿ ಮಾಡಿಕೊಳ್ಳಲಾಗುತ್ತೆ. ನೇರವಾಗಿ RAW ಅಧೀನದಲ್ಲಿ ಕಾರ್ಯನಿರ್ವಹಣೆ ಇದರ ವಿಶಷತೆ ಅಂದ್ರೆ ಇದು ಭಾರತೀಯ ಸೇನೆಯ ಅಧೀನದಲ್ಲಿಲ್ಲ. ಅಂದ್ರೆ ನೇರವಾಗಿ ಕೇಂದ್ರ ಸರ್ಕಾರದ ಕ್ಯಾಬಿನೇಟ್ ಸೆಕ್ರೆಟರಿಯವರ ಅಧೀನದಲ್ಲಿರುತ್ತೆ. ಆದ್ರೆ ಇದರ ಅಧಿಕಾರಿಗಳು ಮಾತ್ರ ಸೇನೆಯವರೇ ಆಗಿರುತ್ತಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದ್ರೆ ಇದನ್ನು ನೇರವಾಗಿ ಅಂದ್ರೆ ಭಾರತೀಯ ಗುಪ್ತಚರ ಸಂಸ್ಥೆ ರಿಸರ್ಚ್ ಌಂಡ್ ಅನಾಲೀಸಸ್‌ನ (RAW) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಚೀನಾ ಕೇಂದ್ರೀಕೃತ ಕಾರ್ಯಾಚರಣೆ ಇದರ ಕಾರ್ಯಚರಣೆ ಭಾರತ ಮತ್ತು ಚೀನಾ ಗಡಿಯಲ್ಲಿ ಕೇಂದ್ರಿಕೃತವಾಗಿರುತ್ತೆ. ಆದ್ರೆ ವಿಶೇಷ ಸಂದರ್ಭಗಳಲ್ಲಿ ಇತರ ಸ್ಪೇಷಲ್ ಕಾರ್ಯಾಚರಣೆಗಳಿಗೂ ಈ ರೆಜಿಮೆಂಟ್ ಅನ್ನು ಬಳಸಿಕೊಳ್ಳಲಾಗಿದೆ. ಇಷ್ಟೇ ಅಲ್ಲ ಹಲವಾರು ಕೋವರ್ಟ್ ಕಾರ್ಯಾಚರಣೆಗಳನ್ನ ಇದು ದೇಶದ ಒಳಗೂ ಮತ್ತು ಹೊರಗೂ ನಡೆಸಿದೆ. ಆದ್ರೆ ಅದೆಲ್ಲವೂ ಕ್ಲಾಸಿಫೈಡ್ ಆಗಿರೋದ್ರಿಂದ ಬಹಿರಂಗಪಡಿಸೋಕೆ ಆಗೋಲ್ಲ. 1971ರಲ್ಲಿ ಪಾಕ್ ಸೋಲಿಸುವಲ್ಲಿ ಪ್ರಮುಖ ಪಾತ್ರ ಆದ್ರೆ ಈ ವಿಕಾಸ್ ಬಟಾಲಿಯನ್ 1971ರಲ್ಲಿ ನಡೆದ ಬಾಂಗ್ಲಾ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆಯನ್ನ ಹಿಮ್ಮೆಟ್ಟಿಸಿದ್ದಲ್ಲದೇ ಅವರು ಪಕ್ಕದ ಬರ್ಮಾ ಅಂದ್ರೆ ಈಗಿನ ಮಯನ್ಮಾರ್‌ನೊಳಗೆ ಓಡಿ ಹೋಗಲು ಪ್ರಯತ್ನಿಸಿದಾಗ, ಅವರನ್ನು ಸದೆಬಡಿದು ಸೆರೆ ಹಿಡಿದಿದ್ದು ಈ ಮೌಂಟೇನ್ ರೆಜಿಮೆಂಟ್. ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ಮಾಡಿದ್ದೇ ಈ ಸ್ಪೇಷಲ್ ಫೋರ್ಸ್ ಅಷ್ಟೇ ಅಲ್ಲ ಭಾರತದ ಕೆಲವೆಡೆ ಅಂದ್ರೆ ಪಂಜಾಬ್‌ನ ಅಮೃತಸರ್‌ದ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ಆಪರೇಷನ್ ಬ್ಲೂಸ್ಟಾರ್, ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವನ್ನು ಸದೆ ಬಡಿದಿದ್ದು ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇರಿದಂತೆ ಹಲವೆಡೆ ಹಲವಾರು ಕೋವರ್ಟ್ ಆಪರೇಶನ್ ನಡೆಸಿದೆ. ಆದ್ರೆ ಅವೆಲ್ಲವೂ ಗುಪ್ತ್ ಗುಪ್ತ್ ಕಾರ್ಯಾಚರಣೆ ಎಲ್ಲಿಯೂ ಈ ಪಡೆಯ ಬಗ್ಗೆ ಬಹಿರಂಗ ಪಡಿಸಿಲ್ಲ.
Also Read:ಡ್ರ್ಯಾಗನ್ ಕಣ್ತಪ್ಪಿಸಿ ಮಹತ್ವದ ಶಿಖರಗಳು ಭಾರತೀಯ ಸೇನೆ ವಶಕ್ಕೆ, ಚೀನಾಗೆ ಮುಖಭಂಗ
Published On - 6:26 pm, Tue, 1 September 20