ಈ ಪ್ರಾಣಿ, ಪಕ್ಷಿಗಳು ಅಡ್ಡ ಬಂದ್ರೆ ಶುಭ ಶಕುನ ಎಂದೇ ತಿಳಿಯಿರಿ
ನಂಬಿಕೆಗಳ ಮೇಲೆ ಮನುಷ್ಯನ ಜೀವನ ನಿಂತಿದೆ. ಅದು ಮನುಷ್ಯನ ವ್ಯವಹಾರಿಕ ವಿಚಾರಗಳಾಗಿರಬಹುದು ಇಲ್ಲವೇ ಬೇರೆ ರೀತಿಯ ನಂಬಿಕೆಗಳಾಗಿರಬಹುದು. ಜೀವನದಲ್ಲಿ ನಂಬಿಕೆಯಿಲ್ಲದೇ ಇದ್ದರೆ ಏನೂ ಮಾಡಲು ಆಗಲ್ಲ. ಕೆಲವೊಂದು ನಂಬಿಕೆಗಳು ನಮಗೆ ತುಂಬಾ ವಿಚಿತ್ರ ಅನಿಸಿದರೂ ಅವುಗಳ ಹಿಂದೆ ಕಾರಣಗಳಿರುತ್ತವೆ. ಕೆಟ್ಟ ಶಕುನವು ಎದುರಾದಾಗ ಮನಸ್ಸಿನಲ್ಲಿ ಒಂದು ರೀತಿಯಾದ ಭಯ ಪ್ರಾರಂಭವಾಗುತ್ತೆ. ಹೀಗಾಗಿ ಆ ಕೆಟ್ಟ ಶಕುನದಿಂದಲೇ ನಮ್ಮ ಕೆಲಸ ಹಾಳಾಯ್ತು ಎಂದುಕೊಳ್ಳುತ್ತೇವೆ. ಹಾಗೆಯೇ ಒಳ್ಳೆಯ ಶಕುನ ಎದುರಾದಾಗ ಒಳ್ಳೆಯದೇ ನಡೆಯುತ್ತೆಂಬ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಕಾರಣ ಎಲ್ಲವೂ ಒಳ್ಳೆಯದೇ […]
ನಂಬಿಕೆಗಳ ಮೇಲೆ ಮನುಷ್ಯನ ಜೀವನ ನಿಂತಿದೆ. ಅದು ಮನುಷ್ಯನ ವ್ಯವಹಾರಿಕ ವಿಚಾರಗಳಾಗಿರಬಹುದು ಇಲ್ಲವೇ ಬೇರೆ ರೀತಿಯ ನಂಬಿಕೆಗಳಾಗಿರಬಹುದು. ಜೀವನದಲ್ಲಿ ನಂಬಿಕೆಯಿಲ್ಲದೇ ಇದ್ದರೆ ಏನೂ ಮಾಡಲು ಆಗಲ್ಲ. ಕೆಲವೊಂದು ನಂಬಿಕೆಗಳು ನಮಗೆ ತುಂಬಾ ವಿಚಿತ್ರ ಅನಿಸಿದರೂ ಅವುಗಳ ಹಿಂದೆ ಕಾರಣಗಳಿರುತ್ತವೆ.
ಕೆಟ್ಟ ಶಕುನವು ಎದುರಾದಾಗ ಮನಸ್ಸಿನಲ್ಲಿ ಒಂದು ರೀತಿಯಾದ ಭಯ ಪ್ರಾರಂಭವಾಗುತ್ತೆ. ಹೀಗಾಗಿ ಆ ಕೆಟ್ಟ ಶಕುನದಿಂದಲೇ ನಮ್ಮ ಕೆಲಸ ಹಾಳಾಯ್ತು ಎಂದುಕೊಳ್ಳುತ್ತೇವೆ. ಹಾಗೆಯೇ ಒಳ್ಳೆಯ ಶಕುನ ಎದುರಾದಾಗ ಒಳ್ಳೆಯದೇ ನಡೆಯುತ್ತೆಂಬ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಕಾರಣ ಎಲ್ಲವೂ ಒಳ್ಳೆಯದೇ ಆಗುತ್ತೆ. ಒಳ್ಳೆಯದು, ಕೆಟ್ಟದ್ದು ಎನ್ನುವುದು ನಮ್ಮ ಆಲೋಚನಾ ವಿಧಾನದಿಂದ, ನಂಬಿಕೆಯ ಮೇಲೆ ಆಧಾರವಾಗಿರುತ್ತೆ.
ಶುಭ ಶಕುನಗಳು: * ಬೆಕ್ಕು ಅಡ್ಡ ಬಂದರೆ ಆಗ ನೀವು ಆ ಜಾಗದಲ್ಲಿ ಸ್ವಲ್ಪ ಸಮಯ ನಿಂತು ಬಳಿಕ ಪ್ರಯಾಣಿಸಬೇಕು. ಅದೇ ರೀತಿಯಲ್ಲಿ ಪ್ರಕೃತಿಯು ನಮಗೆ ಕೆಲವೊಂದು ಸೂಚನೆಗಳನ್ನು ನೀಡಲು ಪ್ರಾಣಿ ಹಾಗೂ ಪಕ್ಷಿಗಳನ್ನು ದಾರಿಗೆ ಅಡ್ಡ ಬರುವಂತಹ ಮಾಡುತ್ತದೆ ಎಂದು ಹೇಳಲಾಗುತ್ತೆ. * ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಹಲ್ಲಿಯು ತುಂಬಾ ಅದೃಷ್ಟ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ದಾರಿಗೆ ಅಡ್ಡವಾಗಿ ಬಂದರೆ ಆಗ ಮುಂದಿನ ದಿನಗಳಲ್ಲಿ ನಿಮಗೆ ತುಂಬಾ ಒಳ್ಳೆಯದಾಗಲಿದೆ ಎಂದು ತಿಳಿದುಕೊಳ್ಳಬೇಕು.
* ಗೂಬೆಯು ನಿಮ್ಮ ದಾರಿಗೆ ಅಡ್ಡ ಬಂದರೆ ಅಥವಾ ಇದು ನಿಮ್ಮ ಕಣ್ಣಿಗೆ ಪದೇ ಪದೆ ಕಾಣಿಸಿಕೊಂಡರೆ ಅದು ಶುಭ ಶಕುನವೆಂದು ತಿಳಿದುಕೊಳ್ಳಬೇಕು. ಗೂಬೆಯು ಜ್ಞಾನ ಹಾಗೂ ಸ್ವಾತಂತ್ರ್ಯದ ಸಂಕೇತ. ಯಾವುದೇ ಪರಿಸ್ಥಿತಿಯಲ್ಲೂ ಬೇರೆಯವರು ನಿಮ್ಮನ್ನು ದಾರಿ ತಪ್ಪಿಸುವುದನ್ನು ತಡೆಯಿರಿ ಎನ್ನುವುದರ ಸೂಚನೆ ಇದಾಗಿರುತ್ತೆ. * ಗಿಳಿಯು ನಿಮ್ಮ ದಾರಿಗೆ ಅಡ್ಡ ಬರುವುದು ಅಥವಾ ಪದೇ ಪದೆ ನಿಮ್ಮ ಕಣ್ಣಿಗೆ ಕಾಣಿಸುವುದು ಶುಭ ಶಕುನವೆಂದು ಪರಿಗಣಿಸಲಾಗಿದೆ. ಗಿಣಿಯು ನಿಮಗೆ ಪಿತೃಗಳ ಆಶೀರ್ವಾದದ ಸೂಚನೆಯಾಗಿದೆ. ಮತ್ತು ನಿಮ್ಮ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ಆತ್ಮವಿಶ್ವಾಸದಿಂದ ಜೀವನದಲ್ಲಿ ಮುಂದುವರಿಯಬೇಕೆಂದು ಇದು ಹೇಳುತ್ತೆ.
* ಗಿಡುಗನ ದೊಡ್ಡ ಕಣ್ಣುಗಳು ಕುತೂಹಲದ ಸಂಕೇತ. ಗಿಡುಗ ನಿಮ್ಮ ದಾರಿಗೆ ಅಡ್ಡ ಬಂದರೆ ಅಥವಾ ಪದೇ ಪದೆ ನಿಮ್ಮ ಕಣ್ಣಿಗೆ ಗೋಚರಿಸಿದರೆ ಮುಂದಿನ ದಿನಗಳಲ್ಲಿ ಜೀವನವು ನಿಮಗೆ ದೊಡ್ಡ ಪಾಠ ಕಲಿಸಲಿದೆ ಅನ್ನೋದು ಪ್ರಕೃತಿಯ ಸೂಚನೆ. * ಪ್ರವಾಸಕ್ಕೆ ಅಥವಾ ಉತ್ತಮ ಕೆಲಸ ಕಾರ್ಯಗಳಿಗೆ ಹೋಗುವಾಗ ವಿವಾಹಿತ ಸ್ತ್ರೀ, ತಲೆಯಲ್ಲಿ ಹೂವು ಹಾಗೂ ಹಣೆಯಲ್ಲಿ ಕುಂಕುಮವನ್ನು ಧರಿಸಿ, ಎದುರಿಗೆ ಬಂದರೆ ಪ್ರವಾಸ ಹಾಗೂ ಕೆಲಸಗಳು ಯಶಸ್ವಿಯಾಗುತ್ತೆ ಎನ್ನುವ ನಂಬಿಕೆಯಿದೆ. * ನೀವು ನಿಮ್ಮ ಅಗತ್ಯ ಕೆಲಸಗಳಿಗೆ ಅಥವಾ ಇನ್ಯಾವುದೋ ಉದ್ದೇಶಕ್ಕೆ ಪ್ರಯಾಣಿಸುತ್ತಿರುವಾಗ ದಾರಿಯಲ್ಲಿ ಆನೆಯನ್ನು ನೋಡಿದರೆ ಉದ್ದೇಶಗಳು ಫಲಪ್ರದವಾಗುತ್ತವೆ. ಭಾರತೀಯ ಪುರಾಣಗಳ ಪ್ರಕಾರ, ಆನೆಯು ಗಣೇಶನ ಸ್ವರೂಪ. ದಾರಿಯಲ್ಲಿ ಗಣೇಶನ ದರ್ಶನವಾದರೆ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. * ಮನೆಯ ಸಮೀಪ ಕಾಗೆಯು ಕುಳಿತು ಕೂಗುತ್ತಿದ್ದರೆ, ಮನೆಗೆ ಅತಿಥಿಗಳು ಅಥವಾ ಹೊಸ ವ್ಯಕ್ತಿಗಳ ಆಗಮನವಾಗುತ್ತೆ ಎಂದು ಹೇಳಲಾಗುತ್ತೆ.
ಮೂಢನಂಬಿಕೆ: ಮೂಢನಂಬಿಕೆ ಎನ್ನುವುದು ವ್ಯಕ್ತಿಯ ಭಾವನೆಗಳ ಮೇಲೆ ಮಿಶ್ರ ಪ್ರಭಾವಗಳನ್ನು ಬೀರುತ್ತೆ. ಮೂಢ ನಂಬಿಕೆ ಪೀಳಿಗೆಯಿಂದ ಪೀಳಿಗೆಗೆ ಕುರುಡು ನಂಬಿಕೆಗಳ ಮೂಲಕವೇ ರವಾನೆಯಾಗುತ್ತವೆ. ಇವುಗಳಿಗೆ ಯಾವುದೇ ಸಾಕ್ಷಿ-ಆಧಾರಗಳಿಲ್ಲ. ಕೇವಲ ನಂಬಿಕೆಯ ಮೂಲಕವೇ ಮುಂದೆ ಸಾಗಬೇಕಾಗುತ್ತೆ.
ಅನೇಕ ಮೂಢನಂಬಿಕೆಗಳು ದುಷ್ಟಶಕ್ತಿಯಿಂದ ರಕ್ಷಣೆ ಪಡೆದುಕೊಳ್ಳಲು ಹುಟ್ಟಿಕೊಂಡಿವೆ ಎನ್ನಲಾಗುತ್ತೆ. ಇನ್ನೂ ಕೆಲವು ಮೂಢನಂಬಿಕೆಗಳು ವ್ಯಕ್ತಿಯನ್ನು ಸನ್ಮಾರ್ಗದಲ್ಲಿ ನಡೆಸಲು ಉತ್ತೇಜಿಸುತ್ತವೆ. ಮೂಢನಂಬಿಕೆಗಳಲ್ಲಿ ಕೆಲವು ಅದೃಷ್ಟವನ್ನು ಸೂಚಿಸುತ್ತವೆ. ಕೆಲವು ದುರಾದೃಷ್ಟವನ್ನು ಸೂಚಿಸುತ್ತವೆ. ಅದೇನೇ ಇದ್ರೂ ಇವುಗಳನ್ನು ಆಚರಿಸೋದು ಮಾತ್ರ ಅವರವರ ನಂಬಿಕೆ ಬಿಟ್ಟ ವಿಚಾರ.
Published On - 2:34 pm, Thu, 14 November 19