Catch the Rain: ನಮಗೆ ನಮ್ಮದೇ ನೆಲದ ನೀರಿನ ಎಂಜಿನಿಯರ್​ಗಳು ಬೇಕು; ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಬರಹ

Catch the Rain: ಭಗೀರಥ ಭೂಮಿಗೆ ಗಂಗೆ ತಂದರೆ‌ ನಮ್ಮ ಬಳಿ‌ ಗಂಗೆಯನ್ನು ಹರಿಸಲಂತೂ ಆಗದು. ಆದರೆ ಬಿದ್ದ ನೀರನ್ನು ಹಿಡಿದಿರುವ, ಮಿತಬಳಕೆ‌ ಮಾಡುವ ದಾರಿಯಲ್ಲಿ‌ ನಡೆಯಬೇಕು. ಪ್ರಾದೇಶಿಕವಾಗಿ ಭಿನ್ನವಾಗಿರುವ ನೀರಿನ ಸಮಸ್ಯೆಗಳಿಗೆ ಪ್ರಾದೇಶಿಕವಾಗಿ ಭಿನ್ನವಾಗಿರುವ ಉಪಾಯಗಳೇ ಬೇಕು. ಭೂಮಿಗೆ ಸ್ಟೆತಾಸ್ಕೋಪ್ ಇಟ್ಟು ನೋಡಬಲ್ಲ ಹಿರಿಯರ ಪದ್ಧತಿಗಳನ್ನು ನೆನೆಸಿಕೊಳ್ಳಬೇಕು.

Catch the Rain: ನಮಗೆ ನಮ್ಮದೇ ನೆಲದ ನೀರಿನ ಎಂಜಿನಿಯರ್​ಗಳು ಬೇಕು; ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಬರಹ
ಭೂಮಿಯ ಎದೆಗೆ ಸ್ಟೇತಾಸ್ಕೋಪ್ ಇಟ್ಟು ನೋಡೋಣವೇ? (ಚಿತ್ರಕೃಪೆ: ಶಿವಾನಂದ ಕಳವೆ)
Follow us
guruganesh bhat
| Updated By: ರಾಜೇಶ್ ದುಗ್ಗುಮನೆ

Updated on:Mar 01, 2021 | 8:28 PM

Catch the Rain!  ಇದೇ ಮಾತನ್ನು 30 ವರ್ಷಗಳಿಂದ ನಾಡಿನ‌ ಉದ್ದಗಲದಲ್ಲಿ ಪಸರಿಸುತ್ತಿದ್ದೇವೆ ಎಂದರು ಶಿವಾನಂದ ಕಳವೆ.

Catch the Rain, ಪ್ರಧಾನಿ‌ ನರೇಂದ್ರ ಮೋದಿ ಅವರು ನಿನ್ನೆ ತಮ್ಮ‌ 74 ನೇ ಮನ್ ಕಿ‌ ಬಾತ್ ನಲ್ಲಿ ಪ್ರಸ್ತಾಪಿಸಿದ ಆಕರ್ಷಕ ಘೋಷಣೆ. ಮಳೆ ಎಲ್ಲಿ, ಎಂದು ಬೀಳುವುದೋ ಅಲ್ಲೇ ಹಿಡಿದಿಟ್ಟುಕೊಳ್ಳಿ ಎಂದು ಪ್ರಧಾನಿ ವಿನಂತಿಸಿದ್ದರು. ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಅವರು ಹೇಳಿದ್ದು ಇದೇ ಕ್ಯಾಚ್ ದಿ ರೇನ್ ಅಭಿಯಾನದ ಬಗ್ಗೆ.‌  ಏನಿದು Catch the Rain? ನಾಡಿನ ಉದ್ದಗಲಕ್ಕೂ ‘ನಾಳೆಯ ನೀರಿಗಾಗಿ’ ಅನವರತ ಓಡಾಡುವ ಹಿರಿಯ ಪರಿಸರ ಕಾರ್ಯಕರ್ತ ಶಿವಾನಂದ ಕಳವೆಯವರು Tv9Kannada Digital ಗಾಗಿ ವಿವರಿಸಿದ್ದಾರೆ. 

ಮಲೆನಾಡಿನ ತಾಯೊಬ್ಬಳು ತನ್ನ ಮಗುವಿಗೆ ನೆಗಡಿಯಾದರೆ ಮನೆಯಲ್ಲೇ ಕಷಾಯ ಕುದಿಸಿ ಕೊಡುತ್ತಾಳೆ. ಬಿಸಿಲುನಾಡಿನ ಅಮ್ಮ ಮಗುವಿನ ನೆಗಡಿ ಕಡಿಮೆ‌ ಮಾಡಲು ಬೇರೊಂದು ಔಷಧ ಕೊಡಬಹುದು. ಮಕ್ಕಳಿಗೆ ನೆಗಡಿಯಾದರೆ ಒಂದೊಂದು ಪ್ರದೇಶದ ಅಮ್ಮಂದಿರು ಹೇಗೆ ಬೇರೆ ಬೇರೆ ಔಷಧ ಬಳಸುತ್ತಾರೋ.. ನೀರಿಂಗಿಸುವ ಉಪಾಯಗಳು ಹಾಗೇ. ಅವರವರ ಪ್ರದೇಶ ಮಣ್ಣು, ಮಳೆಯ ಪ್ರಮಾಣ, ವಾತಾವರಣಗಳಿಗೆ ಅನುಗುಣವಾಗಿ ನೀರಿಂಗಿಸಲೇಬೇಕು ಎನ್ನುತ್ತಾರೆ ಶಿವಾನಂದ ಕಳವೆ. ಬಿದ್ದ‌ ಮಳೆಯನ್ನು ಇಂಗಿಸುವಲ್ಲಿ ಪ್ರಾದೇಶಿಕ ಪದ್ಧತಿಗಳೊಂದೇ ನಮ್ಮ ಕೈಹಿಡಿಯಬಲ್ಲವು. ಬಿದ್ದ ಮಳೆಯನ್ನು ಬಿದ್ದಲ್ಲೇ ಇಂಗಿಸಬಲ್ಲವು.

ಮಲೆನಾಡಲ್ಲಿ ಸಾಮಾನ್ಯವಾಗಿ ಬೀಳುವ ಮಳೆಯ ಪ್ರಮಾಣ 3500- 4000 ಮಿಲಿಮೀಟರ್. ಮಲೆನಾಡಿನ ಅಲ್ಲಿಯ ಭೂಪದರಗಳೇ ನೀರನ್ನು ಕುಡಿದು ತಮ್ಮ ಅಗಾಧ ಸಾಮರ್ಥ್ಯದ ಹೊಟ್ಟೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ. ಬೇರೆ ಬೇರೆ ಪ್ರದೇಶಕ್ಕೆ ಹೋದಂತೆ ಮಳೆಯ ಪ್ರಮಾಣವೂ ಹಂಚಿಕೆಯಾಗುತ್ತದೆ. ಹಾಸನದಲ್ಲಿ  ಸುಮಾರು 800 ಮಿಲಿಮೀಟರ್ ಮಳೆ ಆಗುತ್ತದೆ. ಇದೇ ಹಂಚಿಕೆ ಪ್ರಕಾರ 350 ಮಿಲಿಮೀಟರ್ ಮಳೆ ಆಗುವ ಪ್ರದೇಶಗಳೂ ಇವೆ.‌ ಸುಲಭವಾಗಿ ಹೇಳುವುದಿದ್ದರೆ 1ಚದರ್ ಅಡಿ ಜಾಗದಲ್ಲಿ 1ಮಿಲಿಮೀಟರ್ ಮಳೆ ಆದರೆ 1 ಲೀಟರ್ ಮಳೆ ಸುರಿಯಿತು ಎಂದರ್ಥ.‌ ಇದೇ ಲೆಕ್ಕದ ಪ್ರಕಾರ ಒಂದು ಚದರ ಅಡಿಯಲ್ಲಿ 350 ಮಿಲಿಮೀಟರ್ ಮಳೆ ಬಿದ್ದರೆ 350 ಲೀಟರ್ ಮಳೆ ಸುರಿಯಿತು ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಅಂದರೆ ಮಲೆನಾಡಿನ ಒಂದು ಚದರ ಅಡಿಯಲ್ಲಿ ಸಾಮಾನ್ಯವಾಗಿ 114 ದಿನದ ಮಳೆ ದಿನಗಳಲ್ಲಿ ಬೀಳುವ ಮಳೆಯನ್ನು ಇಂಗಿಸುವಲ್ಲಿ ಹಿಂದೆ ಬೀಳಬಾರದು ಅಲ್ಲವೇ..”

30 ಸೆಂ.ಮೀ. ಮಳೆಗೆ ಸಮೃದ್ಧ ಬೆಳೆ ಕೊಡುವವಳು ನಮ್ಮ‌ ಭೂತಾಯಿ

ಚಿತ್ರದುರ್ಗದ ಮಳೆ ಇಲ್ಲದ ಪ್ರದೇಶಗಳಲ್ಲಿ ಈ ವರ್ಷ ಮಳೆ ಬಂದು ಬೆಳೆ ಹಾಳಾಯಿತು ಎಂದು ಅಲ್ಲಿಯ ರೈತರು ನೋವು ತೋಡಿಕೊಂಡರು. ಆದರೆ, ಅಲ್ಲಿಯ ಕೆರೆಗಳಲ್ಲಿ ಹೂಳು ತುಂಬಿಹೋಗಿತ್ತು. ಹೊಲಗಳು ಬದು ಹೊಂದಿರಲಿಲ್ಲ. ಹೊಲಗಳ ಪಕ್ಕ ಮರಗಳಿರಲಿಲ್ಲ. ಇವೆಲ್ಲವೂ ಮಳೆಯಿಂದ ಬೆಳೆ ಹಾಳಾಗಲು ಕಾರಣವಾಯಿತು. ಬಿದ್ದ ಮಳೆಯನ್ನು ಬಿದ್ದಲ್ಲೇ ಇಂಗಿಸಿದ್ದರೆ ಬೆಳೆ ಹಾಳಾಗುವ ಪ್ರಮೇಯವೇ ಬರುತ್ತಿರಲಿಲ್ಲ.

ನಮ್ಮ‌ ನೆಲದ ವೈವಿಧ್ಯತೆಗೆ ಅನುಗುಣವಾಗಿ ನೀರಿಂಗಿಸುವ ಪದ್ಧತಿ ಅನುಸರಿಬೇಕು. 30 ಸೆಂಟಿಮೀಟರ್ ಮಳೆಗೆ ಸಮೃದ್ಧ ಬೆಳೆ ಕೊಡುವವಳು ನಮ್ಮ‌ ಭೂತಾಯಿ. ಇದು ಆಯಾ ಪ್ರದೇಶಕ್ಕೆ ಅಗತ್ಯವಿರುವ ಮಳೆ ಬೀಳುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ಆದರೆ ಬಿದ್ದಷ್ಟೂ ಮಳೆಯನ್ನು ಹಿಡಿದಿಟ್ಟುಕೊಂಡು ಕೃಷಿ ಮಾಡುವುದು ಇಂದಿನ‌ ಅಗತ್ಯ. 80 ಸೆಂಟಿಮೀಟರ್ ಮಳೆ ಬೀಳುವ ಪ್ರದೇಶಗಳಲ್ಲಿ ಬಹು ಹಿಂದೆಯೇ ಸರಣಿ‌ ಕೃಷಿ ಹೊಂಡಗಳನ್ನು ತೆಗೆದು ನಿರಂತರ ಅಂತರ್ಜಲ ಚಿಗುರಿಸಿದ ಮಾದರಿಗಳು ನಮ್ಮಲ್ಲಿಯೇ ಇವೆ.

WATER HARVESTING By Shivananda Kalave

ಬಿದ್ದ ಮಳೆಯನ್ನು ಸಮರ್ಥವಾಗಿ ಶೇಖರಿಸಿದರೆ ಸಾಕು. ಇದರಷ್ಟು ಸಾರ್ವಕಾಲಿಕ ಉತ್ತಮ ಉಪಾಯ ಬೇರೊಂದಿಲ್ಲ. (ಚಿತ್ರಕೃಪೆ: ಶಿವಾನಂದ ಕಳವೆ)

ನೀರಿನ ಎಂಜಿನಿಯರ್​ಗಳು  ಬೇಕು ನೀರು ಇಂಗಿಸುವ ಮಾದರಿಗಳನ್ನು ನಾವು ಹೇಳಬಹುದು, ಆದರೆ ಅದನ್ನು ತಮ್ಮ ಭೂಮಿಯಲ್ಲಿ ಅನುಷ್ಠಾನಕ್ಕೆ ತರುವ ಕಾರ್ಯಕರ್ತರು ಬೇಕು. ನೀರನ್ನು ಹಿಡಿದಿಟ್ಟುಕೊಳ್ಳುವ ಜತೆಗೆ ಮಿತಬಳಕೆಯ ಪಾಠ ಅನುಸರಿಸುವವರು ಬೇಕು. ಎಲ್ಲಿ ಕೆರೆ ತೆಗೆಯಬಾರದು, ಎಲ್ಲಿ ಹೇಗೆ ತೆಗೆಯಬೇಕು ಎಂಬುದನ್ನು ತಿಳಿದು ನೆಲದಲ್ಲಿ ನಿಂತು ಅನುಷ್ಠಾನ ಮಾಡುವವರು ಬೇಕು. ಬಿದ್ದ ಮಳೆ‌ ನೀರನ್ನು ಅಡಿಟ್ ಮಾಡಿ, ಒಂದು ಮನೆ, ಹೊಲಕ್ಕೆ ಅಗತ್ಯವಿರುವ ನೀರನ್ನು ಅಳೆಯುವವ ವಾಟರ್ ಎಂಜಿನಿಯರ್ ಗಳು ನಮಗೆ ಈಗ ಬೇಕಾಗಿರುವುದು. ಈ ನಿಟ್ಟಿನಲ್ಲಿ ನಾನು ಬಾಗಲಕೋಟೆಯ ಹುನಗುಂದದ ಮಲ್ಲಣ್ಣ ನಾಗರಾಳ ಅವರ ಹೆಸರನ್ನು ನೆನೆಸಿಕೊಳ್ಳಲೇಬೇಕು. ಮಲ್ಲಣ್ಣ ನಾಗರಾಳ ಅನುಸರಿಸಿದ ನೀರಿಂಗಿಸುವ ಪದ್ಧತಿಯಿಂದ ಅತ್ಯಂತ ಬರಗಾಲದಲ್ಲೂ ಅವರ ಭೂಮಿ ತೇವವಾಗಿದೆ ಹಸಿರಾಗಿದೆ. ಇಂತವರ ಸಂಖ್ಯೆ ಹೆಚ್ಚಾಗಬೇಕು.

ನಾವಿರುವ ವಾತಾವರಣದ ಜತೆ ಸಹಬಾಳ್ವೆಯಿಂದ ಬದುಕುವುದರಿಂದಲೇ ನೀರಿಂಗಿಸುವ ಪದ್ಧತಿಯ ಕಲಿಯಬಹುದು. ಕೊಡದಿಂದ ಚೆಲ್ಲಿದ ಒಂದು ಹನಿ‌ ನೀರು ಇಂಗುವುದನ್ನು ಸೂಕ್ಷ್ಮವಾಗಿ ಗಮನಿಸಿ. ಘಟ್ಟಿ ಮಣ್ಣು ಮತ್ತು ಅಗೆದ ಮಣ್ಣಿಲ್ಲಿ ನೀರು ಇಂಗುವ ಕ್ರಮ ಹೇಗೆ ಎಂದು ನೋಡಿ..ದಿನನಿತ್ಯದ ಚಿಕ್ಕಚಿಕ್ಕ ವಿಷಯಗಳು ನೀರು ಇಂಗಿಸುವ ರೀತಿಯನ್ನು ಕಲಿಸುತ್ತವೆ. ಎಸಿ ರೂಮಿನಲ್ಲಿ ಕುಳಿತು ನೀರು ಇಂಗಿಸುವ ಯೋಜನೆ ರೂಪಿಸುವ ಅಧಿಕಾರಿಗಳಿಗಿಂತ ಸಾಂಪ್ರದಾಯಿಕ ಕ್ರಮದ ಅನುಸರಣೆ ಸೂಕ್ತ.‌ ನಮ್ಮ ನೀರಿಂಗಿಸುವಿಕೆ ಹೊಳೆಯಲ್ಲಿ ಬಾಂದಾರು ಕಟ್ಟಿದಂತೆ ಆಗಬಾರದು.

ಕಡಿದಾದ ಬೆಟ್ಟ ಇದ್ದಲ್ಲಿ ಸ್ಥಳೀಯ ಸಸ್ಯಗಳ ಅರಣ್ಯ ಬೆಳೆಸಿದರೆ ಸಾಕು. ಕಡಿಮೆ ಕೃಷಿ ಭೂಮಿ ಇದ್ದವರು ಕೆರೆ ಅಗೆಯಲು ಮುಂದೆ ಬರುವುದಿಲ್ಲ. ಆಗ ಸರ್ಕಾರವೇ ಸಮುದಾಯ ಕೆರೆ ನಿರ್ಮಿಸಿಕೊಡಬೇಕು.

ಹತ್ತು ಎಕರೆ ಇದ್ದರೂ ಲಕ್ಷ ಗಳಿಸದವರಿದ್ದಾರೆ

ಚಿತ್ರದುರ್ಗದ ಕೆಲವೆಡೆ ಹತ್ತಾರು ಎಕರೆ ಕೃಷಿ ಭೂಮಿ ಇದ್ದೂ ವರ್ಷಕ್ಕೆ ಲಕ್ಷ ಆದಾಯ ಗಳಿಸಲು ಕಷ್ಟಪಡುತ್ತಿರುವ ಕೃಷಿಕರಿದ್ದಾರೆ. ಮಂಗಳನ ಅಂಗಳಕ್ಕೆ ನೌಕೆ ಹಾರಿಸುವ ನಮಗೆ ನಮ್ಮದೇ ನೆಲದಲ್ಲಿ ಇನ್ನೂ ಇಷ್ಟು ಕಠಿಣ ಪರಿಸ್ಥಿತಿಯಿರುವುದು ನೆನಪಾಗಬೇಕಲ್ಲವೇ? ಪ್ರಾಕೃತಿಕ ನೀರಿನ‌ ಸರಪಳಿಗೆ ವಿರುದ್ಧವಾದ ನದಿ ತಿರುವು, ಎತ್ತಿನಹೊಳೆಯಂತಹ ಬೃಹತ್ ಯೋಜನೆಗಳಿಗಿಂದ ಕೆರೆ ನಿರ್ಮಿಸುವ ಸರಳ ಯೋಜನೆಯೇ ಯಾವಾಗಲೂ ಬೆಸ್ಟ್.‌ ಬಿದ್ದ ಮಳೆಯನ್ನು ಸಮರ್ಥವಾಗಿ ಶೇಖರಿಸಿದರೆ ಸಾಕು. ಇದರಷ್ಟು ಸಾರ್ವಕಾಲಿಕ ಉತ್ತಮ ಉಪಾಯ ಬೇರೊಂದಿಲ್ಲ.

ಭಗೀರಥ ಭೂಮಿಗೆ ಗಂಗೆ ತಂದರೆ‌ ನಮ್ಮ ಬಳಿ‌ ಗಂಗೆಯನ್ನು ಹರಿಸಲಂತೂ ಆಗದು. ಆದರೆ ಬಿದ್ದ ನೀರನ್ನು ಹಿಡಿದಿರುವ, ಮಿತಬಳಕೆ‌ ಮಾಡುವ ದಾರಿಯಲ್ಲಿ‌ ನಡೆಯಬಹುದು. ಪ್ರಾದೇಶಿಕವಾಗಿ ಭಿನ್ನವಾಗಿರುವ ನೀರಿನ ಸಮಸ್ಯೆಗಳಿಗೆ ಪ್ರಾದೇಶಿಕ ಉಪಾಯಗಳೇ ಬೇಕು. ಭೂಮಿಗೆ ಸ್ಟೆತಾಸ್ಕೋಪ್ ಇಟ್ಟು ನೋಡಬಲ್ಲ ಹಿರಿಯರ ಪದ್ಧತಿಗಳನ್ನು ನೆನೆಸಿಕೊಳ್ಳಬೇಕು.

ಇದ್ದ ಕೃಷಿ ಹೊಂಡಗಳಿಗೆ ಮರುಜೀವ ನೀಡುವುದು ಮೊದಲ‌ ಆದ್ಯತೆ. ಸರಣಿ ಕೆರೆ ಜೋಡಣೆ ಮಾಡಬಹುದು, ಇದು ಪ್ರವಾಹ ತಡೆಯುವ ಮಾದರಿಯೂ ಹೌದು. ಕದಂಬರು, ಚಾಲುಕ್ಯರು ಕಲಿಸಿದ ಹಳೆಯ ಮಾದರಿಗಳು ನಮಗೆ ಮರು ರೂಢಿಗೆ ಬರಬೇಕು. ನಮ್ಮಲ್ಲಿನ ಈ ಮಾದರಿಗಳನ್ನು ದೇಶಕ್ಕೆ ತಿಳಿಸಬೇಕು.

ನಮ್ಮ ಅಧಿಕಾರಿಗಳು ಕೆರೆ ನಿರ್ಮಿಸುವುದನ್ನು ಕಲಿಯಲು ಸಿಂಗಪೂರಕ್ಕೆ ಹೋಗುವ ಕಷ್ಟ ಪಡಬೇಕಿಲ್ಲ. ನಮ್ಮ ನೆಲದ ಹಳ್ಳಿಗಳಿಗೆ ಪಾದ ಬೆಳೆಸಿದರೆ ಸಾಕು.

– ನಿರೂಪಣೆ: ಗುರುಗಣೇಶ ಭಟ್ ಡಬ್ಗುಳಿ

ಇದನ್ನೂ ಓದಿ: ನಾನೆಂಬ ಪರಿಮಳದ ಹಾದಿಯಲಿ: ನಾನೊಬ್ಬ ರೈತ ಮಹಿಳೆ ಮತ್ತಿದೇ ನನ್ನ ಅಸ್ತಿತ್ವ

ವಸುಧೇಂದ್ರ, ಶಿವಾನಂದ ಕಳವೆ ಸೇರಿ ಹಲವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ

Published On - 3:54 pm, Mon, 1 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ