ಭಕ್ತರ ಕಷ್ಟ ನಿವಾರಿಸುತ್ತಿದೆ ಯಮ ಧರ್ಮರಾಜನ ಈ ಅಪರೂಪದ ದೇಗುಲ!

ಯಮ ಧರ್ಮರಾಯ ಅಂದ್ರೆ ಸಾಕು ಅದೆಷ್ಟೋ ಜನ್ರಿಗೆ ಭಯ ಉಂಟಾಗುತ್ತೆ. ಯಾಕಂದ್ರೆ ಸಕಲ ಜೀವಿಗಳ ಪ್ರಾಣವನ್ನು ತನ್ನ ಪಾಶದ ಮೂಲಕ ಎಳೆದೊಯ್ತಾನೆ ಯಮಧರ್ಮರಾಯ. ಆದ್ರೆ ಧರ್ಮದ ಪರಿಪಾಲಕನಾದ ಯಮ ಸಜ್ಜನರಿಗೆ ಶಾಂತ ಸ್ವರೂಪಿಯಾಗಿ, ದುರ್ಜನರಿಗೆ ಅತ್ಯಂತ ಭೀಕರ ರೂಪದ ದರ್ಶನ ನೀಡ್ತಾನೆ. ಪುರಾಣಗಳ ಪ್ರಕಾರ, ಸತ್ತ ಮನುಷ್ಯನ ಪ್ರಾಣವನ್ನು ಹಗ್ಗದ ಮೂಲಕ ತೆಗೆದುಕೊಂಡು ಹೋಗುವ ಯಮ ನಂತರ ಯಮಲೋಕಕ್ಕೆ ಹೋಗ್ತಾನೆ. ಹೀಗೆ ಯಮಲೋಕಕ್ಕೆ ಹೋದ ನಂತರ ಸತ್ತ ವ್ಯಕ್ತಿಯ ಪಾಪ ಪುಣ್ಯಗಳ ಲೆಕ್ಕಾಚಾರ ಹಾಕ್ತಾನೆ. ಯಮರಾಜನ ಸೇವಕನಾದ […]

ಭಕ್ತರ ಕಷ್ಟ ನಿವಾರಿಸುತ್ತಿದೆ ಯಮ ಧರ್ಮರಾಜನ ಈ ಅಪರೂಪದ ದೇಗುಲ!
Follow us
|

Updated on:Nov 23, 2020 | 11:43 AM

ಯಮ ಧರ್ಮರಾಯ ಅಂದ್ರೆ ಸಾಕು ಅದೆಷ್ಟೋ ಜನ್ರಿಗೆ ಭಯ ಉಂಟಾಗುತ್ತೆ. ಯಾಕಂದ್ರೆ ಸಕಲ ಜೀವಿಗಳ ಪ್ರಾಣವನ್ನು ತನ್ನ ಪಾಶದ ಮೂಲಕ ಎಳೆದೊಯ್ತಾನೆ ಯಮಧರ್ಮರಾಯ. ಆದ್ರೆ ಧರ್ಮದ ಪರಿಪಾಲಕನಾದ ಯಮ ಸಜ್ಜನರಿಗೆ ಶಾಂತ ಸ್ವರೂಪಿಯಾಗಿ, ದುರ್ಜನರಿಗೆ ಅತ್ಯಂತ ಭೀಕರ ರೂಪದ ದರ್ಶನ ನೀಡ್ತಾನೆ.

ಪುರಾಣಗಳ ಪ್ರಕಾರ, ಸತ್ತ ಮನುಷ್ಯನ ಪ್ರಾಣವನ್ನು ಹಗ್ಗದ ಮೂಲಕ ತೆಗೆದುಕೊಂಡು ಹೋಗುವ ಯಮ ನಂತರ ಯಮಲೋಕಕ್ಕೆ ಹೋಗ್ತಾನೆ. ಹೀಗೆ ಯಮಲೋಕಕ್ಕೆ ಹೋದ ನಂತರ ಸತ್ತ ವ್ಯಕ್ತಿಯ ಪಾಪ ಪುಣ್ಯಗಳ ಲೆಕ್ಕಾಚಾರ ಹಾಕ್ತಾನೆ. ಯಮರಾಜನ ಸೇವಕನಾದ ಚಿತ್ರಗುಪ್ತ ಸತ್ತ ಮನುಷ್ಯ ಜೀವಿತಾವಧಿಯಲ್ಲಿ ಮಾಡಿದ ಪಾಪ ಪುಣ್ಯಗಳ ಲೆಕ್ಕಾಚಾರ ಮಾಡಿ ಯಮನಿಗೆ ತಿಳಿಸ್ತಾನೆ. ಚಿತ್ರಗುಪ್ತ ತಿಳಿಸಿದ ಪಾಪ ಪುಣ್ಯಗಳ ಲೆಕ್ಕಾಚಾರದ ಆಧಾರದ ಮೇಲೆ ಯಮ ಧರ್ಮರಾಯ ಮನುಷ್ಯನಿಗೆ ಶಿಕ್ಷೆ ವಿಧಿಸ್ತಾನೆ.

ಜೀವಿತಾಧಿಯಲ್ಲಿ ಯಾರು ಪುಣ್ಯದ ಕೆಲಸಗಳನ್ನು ಮಾಡ್ತಾರೋ ಅವರು ನೇರ ಸ್ವರ್ಗಲೋಕಕ್ಕೆ ಹೋಗಿ ವೈಭೋಗದ ಜೀವನ ನಡೆಸ್ತಾರೆ. ಪಾಪದ ಕೆಲಸಗಳನ್ನು ಮಾಡಿದವರು ಅತ್ಯಂತ ಭಯಂಕರವಾದ ನರಕ ಲೋಕಕ್ಕೆ ಹೋಗಿ ಭೀಕರ ನರಳಾಟ ಅನುಭವಿಸ್ತಾರೆ ಎನ್ನಲಾಗುತ್ತೆ. ಇಷ್ಟಕ್ಕೂ ಈ ಎಲ್ಲಾ ದೃಶ್ಯಗಳನ್ನು ನಾವು ಪುರಾಣಗಳಲ್ಲಿ ಕೇಳಿದ್ದೇವೆ. ಸಿನಿಮಾಗಳಲ್ಲಿ ನೋಡಿದ್ದೇವೆ. ಆದ್ರೆ ನಿಜ ಜೀವನದಲ್ಲಿ ನಿಜಕ್ಕೂ ಯಮ ಧರ್ಮರಾಯನನ್ನು ನೋಡಿದವರು ಯಾರು? ಯಮ ತನ್ನ ಹಗ್ಗವನ್ನು ಬೀಸಿ ಪ್ರಾಣವನ್ನು ಎತ್ತಿಕೊಂಡು ಹೋಗ್ತಾನಾ? ಇಂತಹ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸಾವಿನ ಅನುಭವವನ್ನು ಪಡೆದ ಹಾಗೂ ಸತ್ತು ಬದುಕಿ ಬಂದ ಅತೀ ಕೆಲವರಷ್ಟೇ ಯಮನನ್ನು ನೋಡಿದ ಬಗ್ಗೆ ಹೇಳಿದ್ದಾರೆ. ಆದ್ರೆ ಭೂಲೋಕದಲ್ಲಿ ಯಮನ ಹೆಸರು ಹೇಳ್ತಿದ್ದಂತೆ ಅನೇಕರಲ್ಲಿ ಭಯ ಉಂಟಾಗುತ್ತೆ. ಯಾಕಂದ್ರೆ ಯಮನ ದರ್ಶನ ಸಿಗೋದು ಕೇವಲ ಸಾವಿಗೆ ಸಮೀಪವಿರುವವರಿಗೆ ಮಾತ್ರ ಅನ್ನೋ ನಂಬಿಕೆ ಇದೆ.

ಸಾವಿಗೆ ಮತ್ತೊಂದು ಹೆಸರೆಂಬಂತಿರುವ, ಹೆಸರು ಕೇಳಿದೊಡನೆ ಭಯವು ಆವರಿಸುವ, ಆತಂಕವು ಆವರಿಸುವ ಯಮಧರ್ಮರಾಯರು ಅದೊಂದು ದಿನ ಭೂಲೋಕದಲ್ಲಿನ ಆ ಮನೆಗೆ ಬಂದು ಹೋಗ್ತಾರೆ.

ಯಮ ಭೂಲೋಕಕ್ಕೆ ಬಂದದ್ದೇಕೆ? ಸಾಮಾನ್ಯವಾಗಿ ಯಮಧರ್ಮರಾಯರು ಪ್ರಾಣಗಳನ್ನು ತೆಗೆದುಕೊಂಡು ಹೋಗಲು ಭೂಲೋಕಕ್ಕೆ ಬರ್ತಾನೆ. ಆದ್ರೆ ಅಂದು ಮಾತ್ರ ಯಮಧರ್ಮರಾಯ ಆ ಮನೆಗೆ ಬರೋ ಕಾರಣವೇ ಬೇರೆಯಾಗಿದೆ. ಅಂದು ಆ ಮನೆಗೆ ಹೋಗುವುದಕ್ಕೂ ಮುಂಚೆ ಯಮಧರ್ಮರಾಯ ಇಲ್ಲಿಗೆ ಬಂದೇ ಬರ್ತಾನೆ. ಆ ಮನೆಗೆ ಹೋಗುವುದಕ್ಕೂ ಮುಂಚೆ ಅಂದು ಯಮಧರ್ಮರಾಯ ಇಲ್ಲಿಗೆ ಬಂದು ಹೋಗೋದಾದ್ರೂ ಯಾಕೆ? ಅಂದ್ರೆ, ಇದುವೇ ಯಮನ ಸಾನಿಧ್ಯವಿರುವ ಯಮನ ಮಂದಿರ.

ಯಮನ ಈ ಮಂದಿರಕ್ಕೆ 1,500 ವರ್ಷಗಳ ಇತಿಹಾಸವಿದೆ. ಆ ವಿಶೇಷ ದೇಗುಲಕ್ಕೆ ಭೇಟಿ ನೀಡಿ ಭಕ್ತಿಯಿಂದ ಯಮನನ್ನು ಆರಾಧಿಸಿದ್ರೆ ಜಾತಕಕ್ಕೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತೆ ಎನ್ನಲಾಗುತ್ತೆ. ಇದಿಷ್ಟೇ ಅಲ್ದೇ, ಜೀವನದಲ್ಲಿ ಎದುರಾಗುವ ಅಪಾಯ, ಆಪತ್ತುಗಳನ್ನು ತಡೆಯಬಹುದು ಎನ್ನಲಾಗುತ್ತೆ.

ಪ್ರತಿ ತಿಂಗಳ ಭರಣಿ ನಕ್ಷತ್ರದಂದು ಈ ದೇಗುಲಕ್ಕೆ ಅಸಂಖ್ಯಾತ ಭಕ್ತರು ಭೇಟಿ ನೀಡ್ತಾರೆ. ಅಂದು ದೇಗುಲಕ್ಕೆ ಭೇಟಿ ನೀಡಿ ದೇಗುಲದ ಪ್ರಸಾದ ಸ್ವೀಕರಿಸಿದ್ರೆ ಸಕಲ ರೋಗಗಳಿಂದಲೂ ಮುಕ್ತಿ ಪಡೆಯಬಹುದು ಅನ್ನೋ ನಂಬಿಕೆ ಇದೆ. ಅಷ್ಟಕ್ಕೂ ಆ ದೇಗುಲ ಇರೋದೆಲ್ಲಿ ಅಂದ್ರೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ. ಕರೀಂನಗರದಲ್ಲಿರುವ ಉಗ್ರ ನರಸಿಂಹನ ದೇವಸ್ಥಾನದಲ್ಲಿ ಯಮನಿಗೆ ಮೀಸಲಾದ ಅಪರೂಪದ ದೇವಾಲಯ ಇದೆ.

ಇಲ್ಲಿನ ಸ್ಥಳ ಪುರಾಣಗಳ ಪ್ರಕಾರ, ದೀಪಾವಳಿ ಹಬ್ಬದ ನಂತರ ಯಮ ಇಲ್ಲಿಗೆ ಬಂದು, ದ್ವಿತೀಯ ದಿನ ತನ್ನ ತಂಗಿ ಯಮುನಾ ಮನೆಗೆ ತೆರಳಿ ಭೋಜನ ಮುಗಿಸಿ ಮರಳಿ ಯಮಲೋಕಕ್ಕೆ ಹೋಗ್ತಾನೆ ಎನ್ನಲಾಗುತ್ತೆ. ಆ ದಿನ ಯಾರಾದರೂ ತಮ್ಮ ಸಹೋದರಿಯ ಮನೆಯಲ್ಲಿ ಭೋಜನ ಮಾಡಿದ್ರೆ ನರಕ ಬಾಧೆಗಳು ಸಂಭವಿಸದಂತೆ ಯಮ ವರವನ್ನು ನೀಡ್ತಾನೆ ಅನ್ನೋ ನಂಬಿಕೆಯೂ ಇದೆ.

ಇಲ್ಲಿನ ಜವರಾಯನ ಮಂದಿರದಲ್ಲಿ ಆಯೂಷ ಸೂಕ್ತಂ ಅನ್ನೋ ವಿಶೇಷ ಪೂಜೆಯನ್ನು ಮಾಡಲಾಗುತ್ತೆ. ಈ ಪೂಜೆ ಮಾಡೋದ್ರಿಂದ ಭಕ್ತರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸು ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದು.

ಮಾರ್ಕಂಡೇಯ, ಸತಿ ಸಾವಿತ್ರಿಗೆ ವರ ನೀಡಿದ ಮಹಾತ್ಮ, ಭಕ್ತರಿಗೂ ವರವನ್ನು ನೀಡ್ತಾನೆ ಅಂತಾ ಹೇಳಲಾಗುತ್ತೆ. ದೇಗುಲದ ಆವರಣದಲ್ಲಿರೋ ಮಂಟಪದ ದೀಪಕ್ಕೆ ಎಣ್ಣೆ ಹಾಕಿ ಯಮನಿಗೆ ಭಕ್ತಿಯಿಂದ ನಮಸ್ಕರಿಸಿದ್ರೆ ಸಮಸ್ಯೆಗಳು ಆಶ್ಚರ್ಯಕರ ರೀತಿಯಲ್ಲಿ ನಿವಾರಣೆಯಾಗುತ್ತವೆ ಎನ್ನಲಾಗುತ್ತೆ. ಇದಿಷ್ಟೇ ಅಲ್ಲದೇ ಈ ದೇಗುಲಕ್ಕೆ ಭೇಟಿ ನೀಡಿ ಭಕ್ತಿಯಿಂದ ಪೂಜಿಸಿದ್ರೆ ಜಾತಕ ದೋಷಗಳು, ಜೀವ ಭಯದಿಂದ ಮುಕ್ತಿ ಪಡೆಯಬಹುದು. ಜವರಾಯನ ಅನುಗ್ರಹವಿದ್ರೆ ದೀರ್ಘಾಯಷಿಗಳಾಗಿರಬಹುದು ಎನ್ನಲಾಗುತ್ತೆ.

Published On - 4:09 pm, Fri, 18 September 20

ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್
ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್
ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ
ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ
ಇಂದಿರಾನಗರದಲ್ಲಿ ವರುಣಾರ್ಭಟ; 17ನೇ ಡಿ ಕ್ರಾಸ್ ಸಂಪೂರ್ಣ ಜಲಾವೃತ
ಇಂದಿರಾನಗರದಲ್ಲಿ ವರುಣಾರ್ಭಟ; 17ನೇ ಡಿ ಕ್ರಾಸ್ ಸಂಪೂರ್ಣ ಜಲಾವೃತ
ಸುರಿವ ಮಳೆಯಿಂದ ಬೆಂಗಳೂರು ನಿವಾಸಿಗಳಿಗೆ ರಾತ್ರಿಯೂ ತಪ್ಪದ ಬವಣೆ
ಸುರಿವ ಮಳೆಯಿಂದ ಬೆಂಗಳೂರು ನಿವಾಸಿಗಳಿಗೆ ರಾತ್ರಿಯೂ ತಪ್ಪದ ಬವಣೆ
ಮಾನ್ಯತಾ ಟೆಕ್ ಪಾರ್ಕ್ ಮುಖ್ಯ ರಸ್ತೆ ಜಲಾವೃತಗೊಳ್ಳಲು ಕಾರಣ ಇದುವೇ ನೋಡಿ!
ಮಾನ್ಯತಾ ಟೆಕ್ ಪಾರ್ಕ್ ಮುಖ್ಯ ರಸ್ತೆ ಜಲಾವೃತಗೊಳ್ಳಲು ಕಾರಣ ಇದುವೇ ನೋಡಿ!
ಹದಗೆಡುತ್ತಲೇ ಇದೆ ಮನೆಯ ವಾತಾವರಣ; ಸಿಟ್ಟಲ್ಲಿ ಕೂಗಾಡಿದ ಬಿಗ್ ಬಾಸ್
ಹದಗೆಡುತ್ತಲೇ ಇದೆ ಮನೆಯ ವಾತಾವರಣ; ಸಿಟ್ಟಲ್ಲಿ ಕೂಗಾಡಿದ ಬಿಗ್ ಬಾಸ್