ಬೇರೆಯವ್ರ ಬಟ್ಟೆ, ಒಡವೆ ಧರಿಸಿದ್ರೆ ಏನಾಗುತ್ತೆ? ಇದರ ಬಗ್ಗೆ ಧರ್ಮಶಾಸ್ತ್ರದಲ್ಲೇನಿದೆ?

sadhu srinath

sadhu srinath |

Updated on: Nov 08, 2019 | 4:27 PM

ಹಣ, ಆಸ್ತಿ ಮಾಡಲು ಯಾರು ತಾನೇ ಬಯಸೋದಿಲ್ಲ ಹೇಳಿ. ಅದಕ್ಕಾಗಿ ಜೀವ ಇರುವವರೆಗೂ ಶ್ರಮ ಪಡ್ತಾರೆ. ಆದ್ರೆ ನಾವೇ ಮಾಡುವ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಕೈಯಲ್ಲಿ ಹಣ ನಿಲ್ಲೋದಿಲ್ಲ. ಶಾಸ್ತ್ರಗಳ ಪ್ರಕಾರ, ನಾವು ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆಯಬಾರದು ಮತ್ತೆ ಕೆಲವು ವಸ್ತುಗಳನ್ನು ಬೇರೆಯವರಿಗೆ ನೀಡಬಾರದು. ಬೇರೆಯವರಿಂದ ಆ ವಸ್ತುಗಳನ್ನು ಪಡೆದ್ರೆ ನಮ್ಮ ಅಭಿವೃದ್ಧಿಗೆ ಅಡ್ಡಿಯುಂಟಾಗುತ್ತೆ ಎನ್ನುತ್ತೆ ನಮ್ಮ ಧರ್ಮಶಾಸ್ತ್ರ. ಹೀಗೆ ಬೇರೆಯವರಿಂದ ಪಡೆಯಬಾರದೆಂದು ನಮ್ಮ ಶಾಸ್ತ್ರಗಳು ಹೇಳುವ ಆ ವಸ್ತುಗಳ ಪಟ್ಟಿಯಲ್ಲಿ ಬಟ್ಟೆ ಕೂಡ ಒಂದು. […]

ಬೇರೆಯವ್ರ ಬಟ್ಟೆ, ಒಡವೆ ಧರಿಸಿದ್ರೆ ಏನಾಗುತ್ತೆ? ಇದರ ಬಗ್ಗೆ ಧರ್ಮಶಾಸ್ತ್ರದಲ್ಲೇನಿದೆ?

ಹಣ, ಆಸ್ತಿ ಮಾಡಲು ಯಾರು ತಾನೇ ಬಯಸೋದಿಲ್ಲ ಹೇಳಿ. ಅದಕ್ಕಾಗಿ ಜೀವ ಇರುವವರೆಗೂ ಶ್ರಮ ಪಡ್ತಾರೆ. ಆದ್ರೆ ನಾವೇ ಮಾಡುವ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಕೈಯಲ್ಲಿ ಹಣ ನಿಲ್ಲೋದಿಲ್ಲ.

ಶಾಸ್ತ್ರಗಳ ಪ್ರಕಾರ, ನಾವು ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆಯಬಾರದು ಮತ್ತೆ ಕೆಲವು ವಸ್ತುಗಳನ್ನು ಬೇರೆಯವರಿಗೆ ನೀಡಬಾರದು. ಬೇರೆಯವರಿಂದ ಆ ವಸ್ತುಗಳನ್ನು ಪಡೆದ್ರೆ ನಮ್ಮ ಅಭಿವೃದ್ಧಿಗೆ ಅಡ್ಡಿಯುಂಟಾಗುತ್ತೆ ಎನ್ನುತ್ತೆ ನಮ್ಮ ಧರ್ಮಶಾಸ್ತ್ರ. ಹೀಗೆ ಬೇರೆಯವರಿಂದ ಪಡೆಯಬಾರದೆಂದು ನಮ್ಮ ಶಾಸ್ತ್ರಗಳು ಹೇಳುವ ಆ ವಸ್ತುಗಳ ಪಟ್ಟಿಯಲ್ಲಿ ಬಟ್ಟೆ ಕೂಡ ಒಂದು.

ಹೌದು, ಒಬ್ಬರು ಧರಿಸಿದ ಬಟ್ಟೆಯನ್ನು ಮತ್ತೊಬ್ಬರು ಧರಿಸೋದನ್ನು ಶಾಸ್ತ್ರಗಳು ನಿಷೇಧಿಸುತ್ತವೆ. ತಮ್ಮ ಬಳಿ ಎಷ್ಟೇ ಬಟ್ಟೆ ಇದ್ದರೂ ಬೇರೆಯವರ ಬಟ್ಟೆ ಧರಿಸುವ ಹವ್ಯಾಸ ಕೆಲವರಿಗಿರುತ್ತೆ. ಆದ್ರೆ ಬೇರೆಯವರ ಬಟ್ಟೆಯನ್ನು ಧರಿಸುವುದು ಒಳ್ಳೆಯ ಅಭ್ಯಾಸವಲ್ಲ. ಈ ಅಭ್ಯಾಸ ಹೆಚ್ಚಾಗಿ ಹೆಂಗಸರಲ್ಲಿರುತ್ತೆ. ಸ್ತ್ರೀಯರು ಸೌಂದರ್ಯಕ್ಕೆ ಬಳಸೋ ವಸ್ತುಗಳಿಂದ ಹಿಡಿದು ಬಟ್ಟೆ, ಒಡವೆ ಹೀಗೆ ಎಲ್ಲವನ್ನು ಸ್ನೇಹಿತರು, ಸಂಬಂಧಿಕರ ಜೊತೆ ಬದಲಾಯಿಸಿಕೊಳ್ಳುತ್ತಿರುತ್ತಾರೆ.

ಹೀಗೆ ಬದಲಾಯಿಸಿಕೊಳ್ಳುತ್ತಿರುವುದು ಕೇವಲ ಒಡವೆ, ಸೀರೆ, ಬಟ್ಟೆಗಳು ಮಾತ್ರವಲ್ಲ, ರೋಗಗಳು ಸಹ ಬದಲಾಗುತ್ತವೆ. ಅದು ಹೇಗೆ ಅಂದ್ರೆ, ನೀವು ಬಟ್ಟೆಗಳನ್ನು ಎಷ್ಟೇ ಒಗೆದರೂ ಅದರಲ್ಲಿ ಶರೀರದ ಅಂಶವಿದ್ದೇ ಇರುತ್ತೆ. ಬೇರೆಯವರು ಧರಿಸಿದ ಕೂಡಲೇ ಅವು ಆನಂದವಾಗಿ ತಮ್ಮ ಕೆಲಸ ತಾವು ಆರಂಭಿಸಿ ರೋಗವನ್ನು ಹರಡುತ್ತವೆ.

ಒಡವೆ!? ಬೇರೊಬ್ಬರ ಒಡವೆ ಹಾಕಿಕೊಳ್ಳಬುದಾ? ಇನ್ನು ಒಡವೆ ವಿಷಯಕ್ಕೆ ಬಂದರೆ ಒಡವೆಯ ರಂಧ್ರಗಳಲ್ಲಿ ಅವರ ಶರೀರದ ಮೇಲಿನ ಧೂಳಿನ ಕ್ರಿಮಿಗಳು ಅಡಗಿರುತ್ತವೆ. ಬೇರೆಯವರು ಅದನ್ನು ಧರಿಸಿದಾಗ ಆ ಕ್ರಿಮಿಗಳು ಅವರ ದೇಹವನ್ನು ಸೇರುತ್ತವೆ. ಇದಿಷ್ಟೇ ಅಲ್ಲದೇ ಧರ್ಮಶಾಸ್ತ್ರ ಹೇಳುವ ಈ ಕೆಲವು ಕೆಲಸಗಳನ್ನು ಮಾಡಬಾರದು.

ಧರ್ಮಶಾಸ್ತ್ರದ ಪ್ರಕಾರ ಮಾಡಬಾರದ ಕೆಲಸಗಳು -ಬೇರೆಯವರ ಹಣವನ್ನು ಇಟ್ಟುಕೊಳ್ಳಬಾರದು. ಬೇರೆಯವರ ಹಣಕ್ಕೆ ಆಸೆ ಪಟ್ಟರೆ ನಮ್ಮಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. -ಬೇರೆಯವರ ಹಣಕ್ಕೆ ಆಸೆ ಪಟ್ಟರೆ ಧರ್ಮವನ್ನು ಪಾಲಿಸಿದಂತೆ ಆಗೋದಿಲ್ಲ. ಎಲ್ಲಿ ಧರ್ಮವಿರುವುದಿಲ್ಲವೋ ಅಲ್ಲಿ ಲಕ್ಷ್ಮೀ ಇರುವುದಿಲ್ಲ. ಶಂಖ ಸ್ಮೃತಿ ಪ್ರಕಾರ, ಬೇರೆಯವರ ಹಾಸಿಗೆಯಲ್ಲಿ ಮಲಗಿದರೂ ನಷ್ಟ ನಿಶ್ಚಿತ. ಹಣ ಮಾಡಲು ಇಚ್ಛಿಸುವ ವ್ಯಕ್ತಿ ಬೇರೆಯವರು ಮಲಗಿದ ಹಾಸಿಗೆಯಲ್ಲಿ ಮಲಗಬಾರದು. -ಅನ್ಯ ಮಹಿಳೆಯ ಸಂಬಂಧ ಹೊಂದುವುದರಿಂದ ಕಷ್ಟ ಅನುಭವಿಸಬೇಕಾಗುವುದಲ್ಲದೇ, ಹಣ ವ್ಯಯವಾಗುತ್ತೆ. ಸ್ನೇಹಿತರ ಅಥವಾ ಸಂಬಂಧಿಕರ ಕಾರು, ವಾಹನವನ್ನು ಕೆಲವರು ಪಡೆಯುತ್ತಾರೆ. ಶಾಸ್ತ್ರಗಳ ಪ್ರಕಾರ, ಹೀಗೆ ಮಾಡುವುದರಿಂದ ಪಡೆದವನು ಹಣಕಾಸಿನ ಮುಗ್ಗಟ್ಟಿಗೊಳಗಾಗುತ್ತಾನೆ. -ಇತರರ ಆಹಾರವನ್ನು ಸೇವಿಸಬಾರದು. ಹೀಗೆ ಮಾಡಿದ್ರೆ ಬಡತನ ಬೆನ್ನಿಗಂಟಿಕೊಳ್ಳುತ್ತೆ ಎನ್ನಲಾಗುತ್ತೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಸುಧಾಮ, ಶ್ರೀಕೃಷ್ಣನ ಅನ್ನದ ಭಾಗವನ್ನು ಸೇವಿಸಿದ್ನಂತೆ. ಪರಿಣಾಮ ಆತ ಬಡತನದಲ್ಲಿ ಜೀವಿಸಬೇಕಾಯ್ತು. -ಯಾವಾಗಲೂ ಸ್ವಂತ ಮನೆಯಲ್ಲಿ ವಾಸಿಸಲು ಪ್ರಯತ್ನಿಸಿ. ಬೇರೆಯವರ ಮನೆಯಲ್ಲಿ ವಾಸ ಮಾಡಿದ್ರೆ ನಮ್ಮ ಬಳಿ ಹಣ ಸಂಗ್ರಹವಾಗುವುದಿಲ್ಲ ಎನ್ನುತ್ತೆ ನಮ್ಮ ಧರ್ಮಶಾಸ್ತ್ರ.

ಹೀಗೆ ಕೆಲವೊಂದು ಆಚರಣೆಗಳ ಹಿಂದೆ ನಮಗೆ ಗೊತ್ತಿರದ ಎಷ್ಟೋ ವೈಜ್ಞಾನಿಕ ವಿಚಾರಗಳು ಅಡಗಿರುತ್ತವೆ. ಆದರೆ ಅವುಗಳನ್ನು ಆಳವಾಗಿ ತಿಳಿದುಕೊಳ್ಳದೇ ಮೂಢನಂಬಿಕೆ ಎನ್ನುವ ಮೊದಲು ಆ ಆಚರಣೆಗಳ ಹಿಂದಿನ ಮಹತ್ವದ ಬಗ್ಗೆ ತಿಳಿಯಬೇಕು. ಆಗ ನಾವು ಆಚರಿಸುವ ಆಚರಣೆಗಳ ಸಂಪೂರ್ಣ ಫಲ ನಮಗೆ ಸಿಗುತ್ತೆ ಅನ್ನೋದು ನಮ್ಮ ಶಾಸ್ತ್ರಗಳ ವಾದ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada