ಅಭ್ಯಂಗ ಸ್ನಾನ ಮಾಡಿದ್ರೆ ಈ ಎಲ್ಲಾ ಫಲಗಳನ್ನು ಪಡೆಯಬಹುದು

ಅಭ್ಯಂಗ ಸ್ನಾನ ಮಾಡಿದ್ರೆ ಈ ಎಲ್ಲಾ ಫಲಗಳನ್ನು ಪಡೆಯಬಹುದು

ಅಭ್ಯಂಗ ಸ್ನಾನ ಎಂದೊಡನೆ ನಮಗೆಲ್ಲಾ ನೆನಪಾಗೋದು ಯುಗಾದಿ, ದೀಪಾವಳಿ ಹಬ್ಬಗಳು. ಅಭ್ಯಂಗ ಸ್ನಾನ ಮಾಡೋಕೆ ಹಬ್ಬ ಹರಿದಿನಗಳೇ ಬರಬೇಕಿಲ್ಲ. ನಾವು ಬಿಡುವಿನ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡಿದ್ರೆ ಅನೇಕ ಲಾಭಗಳಾಗುತ್ತವೆ. ಇಷ್ಟಕ್ಕೂ ಅಭ್ಯಂಗ ಸ್ನಾನ ಅಂದ್ರೇನು ಬನ್ನಿ ತಿಳಿಯೋಣ. ಬೆಚ್ಚಗಿನ ಎಣ್ಣೆಯನ್ನು ಇಡೀ ದೇಹಕ್ಕೆ ಹಚ್ಚಿ ಮಸಾಜ್ ಮಾಡಿಕೊಂಡು ಕೆಲ ಹೊತ್ತು ಬಿಟ್ಟು ಸ್ನಾನ ಮಾಡೋದನ್ನು ಅಭ್ಯಂಗ ಸ್ನಾನ ಎನ್ನಲಾಗುತ್ತೆ. ಇದು ನಮ್ಮ ದೇಹಕ್ಕೆ ಆಯುರ್ವೇದ ಔಷಧಿಯಂತೆ ಕೆಲಸ ಮಾಡುತ್ತೆ. ಅಂಗಾಂಗಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದಕ್ಕೆ […]

sadhu srinath

|

Nov 18, 2019 | 10:51 PM

ಅಭ್ಯಂಗ ಸ್ನಾನ ಎಂದೊಡನೆ ನಮಗೆಲ್ಲಾ ನೆನಪಾಗೋದು ಯುಗಾದಿ, ದೀಪಾವಳಿ ಹಬ್ಬಗಳು. ಅಭ್ಯಂಗ ಸ್ನಾನ ಮಾಡೋಕೆ ಹಬ್ಬ ಹರಿದಿನಗಳೇ ಬರಬೇಕಿಲ್ಲ. ನಾವು ಬಿಡುವಿನ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡಿದ್ರೆ ಅನೇಕ ಲಾಭಗಳಾಗುತ್ತವೆ. ಇಷ್ಟಕ್ಕೂ ಅಭ್ಯಂಗ ಸ್ನಾನ ಅಂದ್ರೇನು ಬನ್ನಿ ತಿಳಿಯೋಣ.

ಬೆಚ್ಚಗಿನ ಎಣ್ಣೆಯನ್ನು ಇಡೀ ದೇಹಕ್ಕೆ ಹಚ್ಚಿ ಮಸಾಜ್ ಮಾಡಿಕೊಂಡು ಕೆಲ ಹೊತ್ತು ಬಿಟ್ಟು ಸ್ನಾನ ಮಾಡೋದನ್ನು ಅಭ್ಯಂಗ ಸ್ನಾನ ಎನ್ನಲಾಗುತ್ತೆ. ಇದು ನಮ್ಮ ದೇಹಕ್ಕೆ ಆಯುರ್ವೇದ ಔಷಧಿಯಂತೆ ಕೆಲಸ ಮಾಡುತ್ತೆ. ಅಂಗಾಂಗಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದಕ್ಕೆ ನಮ್ಮ ಪೂರ್ವಜರು ಪ್ರಥಮ ಆದ್ಯತೆ ನೀಡಿದ್ರು. ಈಗ ಎಣ್ಣೆ ಹಚ್ಚುವುದೆಂದರೆ ಮುಜುಗರ. ತಲೆಗೆ ಎಣ್ಣೆ ಹಚ್ಚಲು ಹಿಂದೆ ಮುಂದೆ ನೋಡುವ ಯುವಪೀಳಿಗೆಗಂತೂ ಅಭ್ಯಂಗ ಸ್ನಾನ ನರಕ ಯಾತನೆ ಇದ್ದಂತೆ.

ಜೀವನದ ಒತ್ತಡಕ್ಕೆ ಉತ್ತಮ ಪರಿಹಾರ:  ದೇಹಕ್ಕೆ ಎಣ್ಣೆ ಹಚ್ಚುವುದು ಒಂದು ಬಗೆಯ ಸ್ಪರ್ಷ ಚಿಕಿತ್ಸೆ. ಈ ಚಿಕಿತ್ಸೆಯಲ್ಲಿ ದುಡಿದು ದಣಿದ ಶರೀರದ ಅಂಗಾಂಗಗಳನ್ನು ನೀವಿ ಬಿಸಿಯಾಗಿಸಲಾಗುತ್ತೆ. ಇದು ನರನಾಡಿಗಳಿಗೆ ಚೈತನ್ಯ ನೀಡುವ ಅತ್ಯುತ್ತಮ ವಿಧಾನ ಅಂತಾ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖವಿದೆ. ನಮ್ಮ ಶಾಸ್ತ್ರಗಳು ಕೂಡ ಅಭ್ಯಂಗ ಸ್ನಾನಕ್ಕೆ ವಿಶೇಷ ಮಹತ್ವ ನೀಡಿವೆ. ಅಭ್ಯಂಗ ಸ್ನಾನ ಇಂದಿನ ಯಾಂತ್ರಿಕ ಜೀವನದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಉತ್ತಮ ಪರಿಹಾರ ಅಂದ್ರೆ ತಪ್ಪಾಗಲ್ಲ.

ಅಭ್ಯಂಗ ಸ್ನಾನದ ವಿಧಾನಗಳು ಯಾವುವು?

* ಶಿರೋಭ್ಯಂಗ: ಶಿರ ಅಂದ್ರೆ ತಲೆ. ತಲೆಗೆ ನಿತ್ಯ ಎಣ್ಣೆ ಹಚ್ಚಬೇಕು. ಇದರಿಂದ ತಲೆನೋವು ಬರುವುದಿಲ್ಲ. ಜೊತೆಗೆ ಇತ್ತೀಚೆಗೆ ಮಕ್ಕಳಲ್ಲಿ ಕಾಣಿಸಿಕೊಳ್ತಿರುವ ಅಕಾಲಿಕ ನೆರೆ ಕೂದಲು ಸಮಸ್ಯೆಗೆ ಶಿರೋಭ್ಯಂಗ ಉತ್ತಮ ಚಿಕಿತ್ಸೆ. ಇನ್ನು ಕೂದಲು ಉದುರುವಿಕೆ, ತಲೆ ಬೋಳಾಗುವಿಕೆಗೂ ಇದು ಅತ್ಯುತ್ತಮ ಪರಿಹಾರ. ತಲೆಗೆ ಎಣ್ಣೆ ಹಚ್ಚುವುದರಿಂದ ತಲೆ ಕೂದಲು ಕಪ್ಪಗೆ, ಸೊಂಪಾಗಿ ಬೆಳೆಯುತ್ತೆ.

* ಕರ್ಣ ಪೂರಣ: ಕರ್ಣ ಅಂದ್ರೆ ಕಿವಿ. ಕಿವಿಗಳಿಗೆ ಆಗಾಗ ಶುದ್ಧವಾದ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಾಕಬೇಕು. ಇದ್ರಿಂದ ಕಿವಿ ಕೇಳದಿರುವಿಕೆ, ಕಿವುಡುತನದ ಸಮಸ್ಯೆಗಳು ಕಂಡುಬರುವುದಿಲ್ಲ ಎಂದು ಚರಕಾಚಾರ್ಯರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಕಿವಿ ಸೋರುವ ಸಮಸ್ಯೆ ಇದ್ದವರು ವೈದ್ಯರ ಸಲಹೆ ತೆಗೆದುಕೊಳ್ಳದೇ ಕಿವಿಗಳಿಗೆ ಎಣ್ಣೆ ಹಾಕಬಾರದು.

* ಶರೀರಾಭ್ಯಂಗ: ಇಡೀ ಶರೀರಕ್ಕೆ ಎಣ್ಣೆ ಸವರುವುದರಿಂದ ಶರೀರ ಸುಂದರವೂ ಗಟ್ಟಿಯೂ ಆಗುತ್ತೆ. ಅಲ್ಲದೇ ವಾತಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ.

* ಪಾದಾಭ್ಯಂಗ: ಪಾದಗಳಿಗೆ ಎಣ್ಣೆ ಹಚ್ಚುವುದರಿಂದ ಅವುಗಳು ಗಟ್ಟಿ ಹಾಗೂ ಮೃದುತ್ವ ಪಡೆಯುತ್ತವೆ. ಅಲ್ಲದೇ ಕಣ್ಣಿನ ಶಕ್ತಿಯೂ ವರ್ಧನೆಯಾಗುತ್ತೆ.

ನಿದ್ರಾ ಸಮಸ್ಯೆ ದೂರಾಗುತ್ತೆ:  ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಎಣ್ಣೆ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಆಯುರ್ವೇದದ ಪ್ರಮುಖ ಆಕರ ಗ್ರಂಥಗಳಾದ ಸುಶ್ರುತ ಸಂಹಿತ, ಅಷ್ಟಾಂಗ ಹೃದಯ ಚರಕ ಸಂಹಿತೆಯ ಸೂತ್ರ ಸ್ನಾನದಲ್ಲಿ ಎಣ್ಣೆ ಸ್ನಾನದ ಬಗ್ಗೆ ಪ್ರಸ್ತಾಪವಿದೆ. ಪ್ರತಿನಿತ್ಯ ಮೈಗೆ ಎಣ್ಣೆ ಹಚ್ಚುವುದರಿಂದ ಶರೀರದ ಆಯಾಸ ಪರಿಹಾರವಾಗುತ್ತೆ. ವಾತಕ್ಕೆ ಸಂಬಂಧಿಸಿದ ರೋಗಗಳು ದೂರಾಗುತ್ತವೆ ಎಂದು ಎಂಬ ಉಲ್ಲೇಖವಿದೆ. ಅಲ್ಲದೇ ನಿದ್ರಾಹೀನತೆಯಿಂದ ಬಳಲುವವರು ಅಭ್ಯಂಗ ಸ್ನಾನ ಮಾಡಿದ್ರೆ ನಿದ್ರಾ ಸಮಸ್ಯೆ ದೂರಾಗುತ್ತೆ.

ಅಕಾಲ ವೃದ್ದಾಪ್ಯ ತಡೆಯಬಹುದು:  ದೀರ್ಘಾಯುಷ್ಯ ಹೊಂದಿ ನೆಮ್ಮದಿಯ ಬದುಕನ್ನು ನಮ್ಮದಾಗಿಸಿಕೊಳ್ಳಬಹುದು ಎನ್ನಲಾಗುತ್ತೆ. ಪ್ರತಿದಿನ ಅಭ್ಯಂಗ ಸ್ನಾನ ಮಾಡಲು ಸಾಧ್ಯವಿಲ್ಲದವರು ಕನಿಷ್ಟ ವಾರಕ್ಕೊಮ್ಮೆ ಅಥವಾ 15ದಿನಗಳಿಗೊಮ್ಮೆಯಾದರೂ ಅಭ್ಯಂಗ ಸ್ನಾನ ಮಾಡಿದರೆ ಈ ಎಲ್ಲಾ ಫಲಗಳನ್ನು ಪಡೆಯಬಹುದು. ಆಯುರ್ವೇದದ ಮೂಲ ಸಿದ್ಧಾಂತವಾದ ತ್ರಿದೋಷ ತತ್ವದ ಪ್ರಕಾರ, ವಾತ ಪಿತ್ತ ಕಫ ಎಂಬ ಮೂರು ದೋಷಗಳು ಮಾನವನ ದೇಹವನ್ನು ವ್ಯಾಪಿಸಿರುತ್ತವೆ. ಈ ದೋಷಗಳನ್ನು ಹತೋಟಿಯಲ್ಲಿಟ್ಟರೆ ಮಾತ್ರ ಉಳಿದೆಲ್ಲವೂ ನಿಯಂತ್ರಣದಲ್ಲಿರಲು ಸಾಧ್ಯ. ವಾತ ದೋಷದ ಮುಖ್ಯ ಸ್ಥಾನಗಳಲ್ಲಿ ಚರ್ಮವೂ ಒಂದಾಗಿದೆ. ಆದ್ದರಿಂದ ಚರ್ಮಕ್ಕೆ ಎಣ್ಣೆ ಹಚ್ಚುವುದರಿಂದ ವಾತ ದೋಷ ಗುಣಮುಖವಾಗುತ್ತೆ ಎನ್ನುತ್ತೆ ವೈದ್ಯಶಾಸ್ತ್ರ.

Follow us on

Most Read Stories

Click on your DTH Provider to Add TV9 Kannada