ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ

ಮನುಷ್ಯನ ಕೆಲವು ಕೆಟ್ಟ ಗುಣಗಳು, ಚಟಗಳು ಆತನನ್ನು ಪಾತಾಳಕ್ಕೆ ತಳ್ಳಬಲ್ಲವು. ಆತನ ಅಷ್ಟೂ ಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಡುತ್ತದೆ. ಹಾಗಾದರೆ ಯಾವುವು ಅಂತಹ ದುರ್ಗುಣಗಳು? ಮುಖ್ಯವಾಗಿ ವಿದ್ಯೆ, ಸಂಪತ್ತು ಮತ್ತು ಸೇನೆಯನ್ನು ನಾಶಪಡಿಸುವ ಗುಣಲಕ್ಷಣಗಳು ಯಾವುವು ತಿಳಿಯೋಣ ಬನ್ನೀ.

ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ
ಚಾಣಕ್ಯ ನೀತಿ: ಈ ದುರ್ಗುಣಗಳು ವಿದ್ಯೆ, ಸಂಪತ್ತನ್ನು ನಾಶ ಪಡಿಸುತ್ತದೆ; ಸೇನೆಯನ್ನೂ ಅಧೀರನನ್ನಾಗಿಸುತ್ತದೆ
Follow us
TV9 Web
| Updated By: ಆಯೇಷಾ ಬಾನು

Updated on: Oct 10, 2021 | 7:05 AM

ಆಚಾರ್ಯ ಚಾಣಕ್ಯ ಪ್ರಕಾರ ಕೆಲವು ದುರ್ಗುಣಗಳು ವಿದ್ಯೆ ಮತ್ತು ಸಂಪತ್ತನ್ನು ನಾಶ ಪಡಿಸುತ್ತದೆ. ವಿಸ್ತರಿಸಿ ಹೇಳುವುದಾದರೆ ದೇಶ ಕಾಯುವ ಸೇನೆಯನ್ನು ನಾಶ ಮಾಡಿಬಿಡುತ್ತದೆ. ಚಾಣಕ್ಯ ಅಂದು ಹೇಳಿದ ಆ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ. ಅಚಾರ್ಯ ಚಾಣಕ್ಯನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕೆಲ ಚಟಗಳು ಮನುಷ್ಯನನ್ನು ನಾಶ ಮಾಡಿಬಿಡುತ್ತದೆ.

ಆಚಾರ್ಯ ಚಾಣಕ್ಯ (Acharya Chanakya) ಅಸಾಧಾರಣ ವ್ಯಕ್ತಿ, ಮೌರ್ಯ ವಂಶ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತನ್ನ ಕೂಟನೀತಿ ಮತ್ತು ಕುಶಾಗ್ರ ಬುದ್ಧಿಯಿಂದ ಇತಿಹಾಸದ ಗತಿಯನ್ನೇ ಬದಲಿಸಿ ನಂದ ವಂಶವನ್ನು ಕೊನೆಗಾಣಿಸಿ ಚಂದ್ರಗುಪ್ತ ಮೌರ್ಯನನ್ನು ಸಾಮ್ರಾಟನನ್ನಾಗಿಸಿದ ಹಿರಿಮೆ ಈತನದು. ಇಂದಿಗೂ ಚಾಣಕ್ಯನನ್ನು ಕುಶಾಲ ಅರ್ಥಶಾಸ್ತ್ರಜ್ಞ, ಪ್ರಕಾಂಡ ಪಂಡಿತ, ಕೂಟನೀತಿಜ್ಞ ಮತ್ತು ಅತ್ಯುತ್ತಮ ಜೀವನ ಮಾರ್ಗದರ್ಶಿ ರೂಪದಲ್ಲಿ ನೆನಪಿಸಿಕೊಳ್ಳಬಹುದು.

ಮನುಷ್ಯನ ಕೆಲವು ಕೆಟ್ಟ ಗುಣಗಳು, ಚಟಗಳು ಆತನನ್ನು ಪಾತಾಳಕ್ಕೆ ತಳ್ಳಬಲ್ಲವು. ಆತನ ಅಷ್ಟೂ ಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಡುತ್ತದೆ. ಹಾಗಾದರೆ ಯಾವುವು ಅಂತಹ ದುರ್ಗುಣಗಳು? ಮುಖ್ಯವಾಗಿ ವಿದ್ಯೆ, ಸಂಪತ್ತು ಮತ್ತು ಸೇನೆಯನ್ನು ನಾಶಪಡಿಸುವ ಗುಣಲಕ್ಷಣಗಳು ಯಾವುವು ತಿಳಿಯೋಣ ಬನ್ನೀ.

ಅಭ್ಯಾಸ ಮಾಡದಿರುವುದು ನೀವು ಎಷ್ಟೇ ಪ್ರತಿಭಾಶಾಲಿ ಆಗಿದ್ದರೂ ನಿಮ್ಮ ಪ್ರತಭೆಯನ್ನು ಪುಟಕಿಟ್ಟ ಚಿನ್ನದಂತೆ ಕಂಗೊಳಿಸುವಂತಿರಬೇಕು ಅಂದ್ರೆ ಅಭ್ಯಾಸ ಕ್ರಮವನ್ನು ಸದಾ ಜಾರಿಯಲ್ಲಿಟ್ಟಿರಬೇಕು. ಅಭ್ಯಾಸದಿಂದ ನಿಮ್ಮ ಕೆಲಸದ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬಹುದು.

ಆದರೆ ಅಭ್ಯಾಸವನ್ನೇ ಮಾಡಲಿಲ್ಲ ಅಂತಾದರೆ ನಿಧಾನಕ್ಕೆ ಎಲ್ಲವನ್ನೂ ಮರೆತುಬಿಡುತ್ತೀರಿ. ವರ್ಷಾನುಗಟ್ಟಲೆಯಿಂದ ಕಲಿತಿರುವ ವಿದ್ಯೆಯ ವಿನಾಶ ಆಗುತ್ತೆ. ನಿರಂತರ ಅಭ್ಯಾಸದಿಂದ ನೈಪುಣ್ಯತೆ ಸಾಧಿಸಬಹುದಾಗಿದೆ. ಸಾಫಲ್ಯತೆ ಹೊಂದಬೇಕು ಅಂದರೆ ಕೆಲಸದಲ್ಲಿ ನೈಪುಣ್ಯತೆ ಸಾಧಿಸಲೇಬೇಕು, ಅಲ್ಲವಾ!

ಇತರರನ್ನು ನಂಬಿ ಹಣವನ್ನು ಅವರ ಸುಪರ್ದಿಗೆ ನೀಡುವುದು ವಾಸ್ತವವಾಗಿ ನೀವು ಹಣ ಗಳಿಸಬೇಕು ಅಂದರೆ ಅದರ ಕಾಳಜಿಯನ್ನು ನೀವು ವಹಿಸಬೇಕು. ಒಂದು ವೇಳೆ ಬೇರೆಯವರ ಮೇಲೆ ನಂಬಿಕೆಯಿಟ್ಟು ಹಣದ ವ್ಯವಹಾರವನ್ನು ಅವರಿಗೆ ಒಪ್ಪಿಸಿದರೆ ಹಾಳಾಗುವುದು ನಿಶ್ಚಿತ. ಬೇರೆಯವರ ಕೈಗೆ ಹಣ ಕೊಟ್ಟರೆ ಅವರಿಂದ ಮೋಸವಾಗುವುದು ನಿಶ್ಚಿತ. ಕೊನೆಗೆ ನಿಮ್ಮ ಹಣದ ಮೇಲೆ ನಿಮಗೆ ಅಧಿಕಾರ ಇಲ್ಲದೇ ಹೋಗಬಹುದು. ಹಾಗಾಗಿಯೇ ಚಾಣಕ್ಯ ಅಂದೇ ಹೇಳಿರುವುದು ಧನ ಸಂಪತ್ತಿನ ಮೇಲೆ ಸರಿಯಾದ ಹಿಡಿತ ಹೊಂದಿದ್ದು, ಅದರ ಜವಾಬ್ದಾರಿಯನ್ನ ನೀವೇ ಹೊರಬೇಕಾಗುತ್ತದೆ.

ಸೇನಾಪತಿ ಇಲ್ಲದಿದ್ದರೆ ಸೇನೆ ನಾಶವಾಗುವುದು ನಿಶ್ಚಿತ ಯಾವುದೇ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು ಅಂದರೆ ಅದನ್ನು ಬಿಡಿ ಬಿಡಿಯಾಗಿ ಬೇರೆಯವರ ಜವಾಬ್ದಾರಿಗೆ ನೀಡಬೇಕು. ಸೇನೆಯಲ್ಲಿ ಸೇನೆಯನ್ನು ಮುನ್ನಡೆಸುವ ಜವಾಬ್ದಾರಿ ಸೇನಾಪತಿಯದ್ದಾಗಿರುತ್ತದೆ. ಆತನೇ ಸೇನೆಯ ಮಾರ್ಗದರ್ಶಕ ಆಗಿರುತ್ತಾನೆ. ಆದರೆ ಯಾವುದೇ ಸೇನೆಗೆ ಸೇನಾಪತಿಯೇ ಇಲ್ಲಾ ಅಂತಾದರೆ ಆ ಸೇನೆ ತುಂಡು ತುಂಡಾಗಿ ಬಿಡುತ್ತದೆ. ಒಗ್ಗಟ್ಟಿನಿಂದ ಒಟ್ಟುಗೂಡಿರುವುದಿಲ್ಲ. ಇಡೀ ಸೇನೆಯನ್ನು ಹಳ್ಳ ಹಿಡಿಸಿಬಿಡುತ್ತದೆ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್